News: ನಮ್ಮ ದೇಶದ, ನಮ್ಮ ನೆಲದ ಮರ್ಯಾದೆ, ಗೌರವ ಕಾಪಾಡುವುದು ನಮ್ಮ ಕರ್ತವ್ಯ. ನಮ್ಮ ದೇಶಕ್ಕೆ, ರಾಜ್ಯಕ್ಕೆ ಬಂದವರು, ನಮ್ಮ ನೆಲದ ಬಗ್ಗೆ ನಾಲ್ಕು ಚೆಂದದ ಮಾತನಾಡಿದರೆ, ಅದೇ ನಮಗೆ ಹೆಮ್ಮೆ. ಹಾಗಾಗಿ ನಾವು ವಿದೇಶಿಗರ ಜತೆ, ಬೇರೆ ರಾಜ್ಯದವರ ಜತೆ ಹೇಗೆ ನಡೆದುಕ“ಳ್ಳುತ್ತೇವೋ, ಅದೇ ರೀತಿ ನಮಗೆ ಗೌರವ ಸಿಗುತ್ತದೆ.
ಆದರೆ ಈ ಬಗ್ಗೆ ಕಿಂಚಿತ್ತು ಯೋಚಿಸದ ಕೆಲ ಮಕ್ಕಳು ವಿದೇಶಿ ಪ್ರಜೆಯ ಜತೆ ಉದ್ಧಟತನದಿಂದ ವರ್ತಿಸಿ, ಭಾರತದ ಮರ್ಯಾದೆ ತೆಗೆದಿದ್ದಾರೆ. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸ್ವತಃ ಭಾರತೀಯರೇ ಆ ಮಕ್ಕಳ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಗಿದ್ದೇನು..?: ಅಮೀನಾ ಎಂಬ ವಿದೇಶಿ ಪ್ರಜೆ ಭಾರತದ ಪ್ರವಾಾಸದಲ್ಲಿದ್ದರು. ಇವರು ಮೂಲತಃ ಅಮೆರಿಕದವರೇ ಆಗಿದ್ದರು. ಸದ್ಯ 197 ದೇಶ ಸುತ್ತುವ ಯೋಚನೆಯಲ್ಲಿದ್ದಾರೆ. ಈಗಾಗಲೇ 66 ದೇಶಗಳನ್ನು ಸುತ್ತಿದ್ದು, ಇನ್ನು ಪ್ರಪಂಚ ಪರ್ಯಟನೆ ಮಾಡುತ್ತಲೇ ಇದ್ದಾರೆ.
ಇವರು ತಮಗಾದ ಎಲ್ಲ ರೀತಿಯ ಅನುಭವಗಳನ್ನು ತಮ್ಮ ಇನ್ಸ್ಟಾಗ್ರಾಮ್ ರೀಲ್ಸ್ನಲ್ಲಿ ಹಾಕುತ್ತಿರುತ್ತಾರೆ. ಹೀಗೆ ಭಾರತದ ಯಾವುದೋ ರಾಜ್ಯಕ್ಕೆ ಬಂದಾಗ, ಇವರಿಗೆ ಕಹಿ ಅನುಭವವಾಗಿದೆ. ಇಬ್ಬರು ಮಕ್ಕಳು ಆಕೆ ನೀಡಿದ ಚಾಕೋಲೇಟ್ಗಳನ್ನು ತಿಂದು, ಕಾಗದವನ್ನು ನೆಲಕ್ಕೆ ಎಸೆದಿದ್ದಾರೆ. ಆ ತುಂಬಾ ಸಲುಗೆಯಿಂದ ಮಾತನಾಡಿದ ಕಾರಣ, ಆ ಮಕ್ಕಳು ಆಕೆಗೆ ಗೌರವವೇ ನೀಡಲಿಲ್ಲ. ಅಲ್ಲದೇ, ಆ ಕಾಗದಗಳನ್ನು ತೆಗೆದು ಕಸದ ಬುಟ್ಟಿಗೆ ಹಾಕಿ ಎಂದಾಗ, ನಾವು ಹಾಕುವುದಿಲ್ಲ ಎಂದಿದ್ದಾರೆ.
ಆಗ ಇದು ನೀವು ಇರುವ ದೇಶ. ನೀವು ಹೀಗೆ ದಾರಿ ತುಂಬ ಕಸ ಹರಡಿದರೆ, ಇದೇ ಕಸದಲ್ಲಿ ನೀವು ಬದುಕಬೇಕಾಗುತ್ತದೆ ಎಂದಿದ್ದಾರೆ. ಅದಕ್ಕೆ ಆ ಬಾಲಕರು ಮತ್ತೆ ಬೇರೆ ಬೇರೆ ಚಾಕೋಲೇಟ್ಸ್ ಕಸ ತಂದು ಆಕೆಯ ಎದುರೇ ರಸ್ತೆಗೆ ಹಾಕಿದ್ದಾರೆ. ಅಲ್ಲದೇ, ಮತ್ತೆ ನಾಚಿಕೆಗೆಟ್ಟು ನಮಗೆ ಡಾಲರ್ ನೀಡಿ ಎಂದು ಕೇಳಿದ್ದಾರೆ. ಆಗ ಆಕೆ ನಿಮಗೆ ನಾನೇನನ್ನು ನೀಡುವುದಿಲ್ಲವೆಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇನ್ನು ಇದಕ್ಕೆ ಕಾಮೆಂಟ್ ಮಾಡಿರುವ ಭಾರತೀಯರೇ, ನೀವು ಅವರಿಗೆ ನಾಲ್ಕು ಬಾರಿಸಬೇಕಿತ್ತು ಎಂದಿದ್ದಾರೆ. ಕೆಲವರು ಇದು ಅವರ ತಪ್ಪಲ್ಲ, ಅವರನ್ನು ಹುಟ್ಟಿಸಿ ಬೆಳೆಸಿರುವ ಅವರ ಪೋಷಕರ ತಪ್ಪು ಎಂದಿದ್ದಾರೆ. ಇವರು ನಮ್ಮ ಪಕ್ಕದ ದೇಶದವರು ಇಲ್ಲಿ ಬಂದು ನೆಲೆಸಿದ್ದಾರೆಂದು ಮತ್ತೆ ಕೆಲವರು ಕಾಮೆಂಟ್ ಮಾಡಿದ್ದಾರೆ. ದುಃಖದ ಸಂಗತಿ ಅಂದ್ರೆ, ಹಲವು ವಿದೇಶಿಗರು ಇದೇ ಕಾರಣಕ್ಕೆ ನಾನು ಭಾರತಕ್ಕೆ ಹೋಗುವುದಿಲ್ಲ ಎಂದು ಹೇಳಿದ್ದಾರೆ. ಇಂಥ ಪ್ರಜೆಗಳಿಂದ ನಮ್ಮ ಭಾರತಕ್ಕೆ ಕೆಟ್ಟ ಹೆಸರು ಬರುತ್ತಿರುವುದು ಮಾತ್ರ ವಿಪರ್ಯಾಸ.
ಈ ವೀಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.




