Sunday, November 9, 2025

Latest Posts

ನನ್ನನ್ನು ಗರ್ಭಿಣಿ ಮಾಡುವವರನ್ನು ಹುಡುಕುತ್ತಿದ್ದೇನೆ ಎಂಬ ಆ್ಯಡ್‌ಗೆ ಪ್ರತಿಕ್ರಿಯಿಸಿದ್ದಕ್ಕೆ 11 ಲಕ್ಷ ಢಮಾರ್

- Advertisement -

Pune News: ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಬರುವ ಜಾಹೀರಾತು, ಲಿಂಕ್ ಎಲ್ಲವನ್ನೂ ನೋಡಿ ಜನ ಯಾವ ರೀತಿಯಾಗಿ ಬಕರಾ ಆಗುತ್ತಿದ್ದಾರೆ ಅಂದ್ರೆ, ಅವರ ಅಕೌಂಟ್‌ನಲ್ಲಿರುವ ದುಡ್ಡು ಕೂಡ ನೀರಿನಂತೆ ಖಾಲಿಯಾಗುತ್ತಿದೆ.

ಇದೇ ರೀತಿ ಹೆಣ್ಣಿನ ಸಂಗ ಮಾಡುವ ಆಸೆಯಿಂದ ಪುಣೆಯಲ್ಲಿ ಓರ್ವ ವ್ಯಕ್ತಿ ಆನ್‌ಲೈನ್‌ನಲ್ಲಿ ಬಂದ ಜಾಹೀರಾತಿಗೆ ಪ್ರತಿಕ್ರಿಯಿಸಿ, 11 ಲಕ್ಷ ಕಳೆದುಕ“ಂಡಿದ್ದಾನೆ. ಈತ ಆ ಜಾಹೀರಾತಿನ ಮೇಲೆ ಕ್ಲಿಕ್ ಮಾಡಿದಾಗ, ಹಲವು ಫೀಸ್ ತುಂಬಬೇಕು. ಫೀಸ್ ತುಂಬದಿದ್ದಲ್ಲಿ, ನಿಮ್ಮ ಫಾರ್ಮ್ ಅಪೂರ್ಣವಾಗುತ್ತದೆ. ಮತ್ತು ನೀವು ಈ ಕೆಲಸಕ್ಕೆ ಅನರ್ಹರೆಂದು ಆಗುತ್ತದೆ. ಹಾಗಾಗಿ ಫೀಸ್ ತುಂಬಬೇಕು ಎಂದಿದ್ದಾರೆ.

ಈ ವ್ಯಕ್ತಿ ಹೆಣ್ಣಿನ ಮೋಹಕ್ಕೆ ಬಿದ್ದು, ಕೇಳಿದ ಹಾಗೆ ಫೀಸ್ ನೀಡುತ್ತ ಹೋಗಿದ್ದಾನೆ. ಅಲ್ಲದೇ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಿದ್ದಕ್ಕೆ, ಫೋನ್ ಹ್ಯಾಕ್ ಆಗಿ, ಅಕೌಂಟ್ ಖಾಲಿಯಾಗಿದೆ. ಇದನ್ನರಿತು, ಜಾಹೀರಾತಿನಲ್ಲಿದ್ದ ನಂಬರ್ಗೆ ಕಾಲ್‌ ಮಾಡಿದರೆ, ಅದು ನಾಟ್ ರಿಚೇಬಲ್ ಎಂದು ತೋರಿಸುತ್ತಿದೆ. ಬಳಿಕ ತಾನು ಮೋಸ ಹೋಗಿರುವುದು ತಿಳಿದು, ಪೋಲೀಸರಿಗೆ ದೂರು ನೀಡಿದ್ದಾನೆ.

ಪೋಲೀಸರು ಕೂಡ ಹಲವು ಬಾರಿ ಸಿಕ್ಕ ಸಿಕ್ಕ ಲಿಂಕ್‌ಗಳನ್ನು ಪ್ರೆಸ್ ಮಾಡಬೇಡಿ ಎಂದು ಹೇಳುತ್ತಾರೆ. ಅದೆಷ್ಟೋ ಜಾಹೀರಾತುಗಳು ನಿಮ್ಮನ್ನು ಅಲರ್ಟ್ ಮಾಡಲೆಂದೇ ಬರುತ್ತದೆ. ಆದರೆ ಅಂಥ ಜಾಹೀರಾತಿನ ಬಗ್ಗೆ ಗಮನವೇ ಇರುವುದಿಲ್ಲ.

- Advertisement -

Latest Posts

Don't Miss