Friday, August 29, 2025

Latest Posts

Chitradurga : ಶ್ರೀಗುರುವಿನ ಓಕಳಿಯು ವಿಜೃಂಭಣೆಯಿಂದ ನಡೆಯಿತು..!

- Advertisement -

ಬಣ್ಣಗಳನ್ನು ಪರಸ್ಪರ ಎರಚಿ ಕೊಳ್ಳುವುದನ್ನು ಕಳೆದ ಎರಡು ಮೂರು ದಿನಗಳ  ಹಿಂದೆ ಹೋಳಿ (Holi) ಹಬ್ಬದಲ್ಲಿ ನೋಡಿದ್ದೀರಾ.ಅದೇ ರೀತಿಯೇ ಶ್ರೀ ಗುರು ತಿಪ್ಪೇರುದ್ರಸ್ವಾಮಿ ರಥೋತ್ಸವ (Sri Guru Tipperedaswamy Chariot Festival) ಮುಗಿದ ನಂತರ ನಡೆಯುವ ಹಬ್ಬವೇ ಶ್ರೀಗುರುವಿನ ಹೋಳಿ ಹಬ್ಬ(Holi Festival of Shri Guru). ಚಳ್ಳಕೆರೆ ತಾಲ್ಲೂಕು ನಾಯಕನಹಟ್ಟಿ ಶ್ರೀಗುರು ತಿಪ್ಪೇರುದ್ರಸ್ವಾಮಿ ಪಲ್ಲಕ್ಕಿಯ ಮೆರವಣಿಗೆ ಜೊತೆ ಸುತ್ತಮುತ್ತಲಿನ ಗ್ರಾಮಗಳ ಜನ ಮತ್ತು ನಾಯಕನಟ್ಟಿ ಗ್ರಾಮಸ್ಥರು ಮತ್ತು ಯುವಕರು ಹೋಳಿಯಲ್ಲಿ ಮಿಂದೇಳುತ್ತಾರೆ. ಶ್ರೀಗುರುವಿನ ಪಲ್ಲಕ್ಕಿಯ ಮುಂದೆ ವಿಜೃಂಭಣೆಯಿಂದ ಪರಸ್ಪರ ಬಣ್ಣಗಳನ್ನು ಎರಚಿ ಕೊಳ್ಳುತ್ತಾ ವಾದ್ಯ ನಂದಿಕೋಲುಗಳ ಕುಣಿತ ಹಾಗೂ ಭಕ್ತಾದಿಗಳು ಸ್ವಾಮಿ ಆಶೀರ್ವಾದಕ್ಕೆ ಪಲ್ಲಕ್ಕಿಗೆ ಅಡ್ಡಲಾಗಿ ಮಲಗಿ ಆಶೀರ್ವಾದವನ್ನು ಪಡೆಯುತ್ತಾರೆ. ಜಾತಿಭೇದವಿಲ್ಲದೆ ಶ್ರೀ ಗುರುವಿನ ಆಶೀರ್ವಾದ ಪಡೆಯುತ್ತಾರೆ ನಂತರ ಒಳ ಮಠಕ್ಕೆ ಹೊರಡುವ ಪಲ್ಲಕ್ಕಿ ದೇವಾಲಯ ಪ್ರವೇಶಿಸುತ್ತದೆ. ಒಟ್ಟಾರೆಯಾಗಿ ಹೇಳುವುದಾದರೆ ವರ್ಷಕ್ಕೊಮ್ಮೆ ಶ್ರೀಗುರುವಿನ ಓಕಳಿಯು ವಿಜೃಂಭಣೆಯಿಂದ ನಡೆಯುತ್ತದೆ.

                                               ಆಂಜನೇಯ,ಕರ್ನಾಟಕ ಟಿವಿ,ಚಿತ್ರದುರ್.

- Advertisement -

Latest Posts

Don't Miss