Saturday, April 12, 2025

Latest Posts

Cm Bommai : ವಿದ್ಯಾರ್ಥಿಗಳು ಶಾಂತಿಯಿಂದ ಇರಲು ವಿಶೇಷ ಮನವಿ..!

- Advertisement -

ರಾಜ್ಯದಾದ್ಯಂತ ಹಿಜಾಬ್ ವಿವಾದ (Hijab Controversy) ಕುರಿತಂತೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದು, ಇಂದು ಅದು ತಾರಕಕ್ಕೇರಿದೆ. ಈ ಕುರಿತು ನವದೆಹಲಿಯಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ (cm bommai) ಮಾಧ್ಯಮಗಳೊಂದಿಗೆ ಮಾತನಾಡಿ ಯಾರು ಸಹ ಈ ವಿಚಾರವಾಗಿ ಪ್ರಚೋದನೆ ನೀಡಬಾರದು. ಇದು ಸೂಕ್ಷ್ಮವಾದ ವಿಚಾರ ಎಲ್ಲರೂ ಸಹ ಶಾಂತಿ ಸೌಹಾರ್ದತೆಯಿಂದ ಇರಬೇಕು. ಶಾಂತಿ ಸುವ್ಯವಸ್ಥೆಯನ್ನು ಕಾಪಾಡಬೇಕು. ಕೋರ್ಟ್ ಆದೇಶ ಬರುವವರೆಗೂ ವಿದ್ಯಾರ್ಥಿಗಳು ಶಾಂತಿಯಿಂದ ಇರಲು ವಿಶೇಷ ಮನವಿಯನ್ನ ಸಹ ಮಾಡಿದ್ದಾರೆ. ಅದೇ ರೀತಿ ಯಾರು ಸಹ ಪ್ರಚೋದನಕಾರಿ ಹೇಳಿಕೆಗಳನ್ನು (Provocative statements) ನೀಡಬಾರದು, ಶಾಂತಿ ಸುವ್ಯವಸ್ಥೆಯನ್ನು ಕಾಪಾಡಲು ಪೊಲೀಸರಿಗೆ ಸೂಕ್ತ ಸೂಚನೆ()ಯನ್ನು ನೀಡಲಾಗಿದೆ, ಅವರು ಕಾರ್ಯನಿರತರಾಗಿದ್ದಾರೆ ಎಂದು ಸಿಎಂ ಬೊಮ್ಮಾಯಿ ದೆಹಲಿಯಲ್ಲಿ ಮಾಧ್ಯಮಗಳ ಮೂಲಕ ತಿಳಿಸಿದ್ದಾರೆ.

- Advertisement -

Latest Posts

Don't Miss