Wednesday, September 11, 2024

Latest Posts

ಮಾಜಿ ಸಿಎಂ ಸಿದ್ದರಾಮಯ್ಯಗೆ ಟಾಂಗ್ ಕೊಟ್ಟ ಸಿಎಂ ಬೊಮ್ಮಾಯಿ.

- Advertisement -

ಈ ಹಿಂದೆ ರಾಜ್ಯದಲ್ಲಿ ಭ್ರಷ್ಟಾಚಾರ ಮುಚ್ಚಿಹಾಕುವ ಸರ್ಕಾರವಿತ್ತು, ಆದ್ರೆ ಈಗ ಭ್ರಷ್ಟಾಚಾರ ನಿರ್ಮೂಲನೆ ಮಾಡುವ ಸರ್ಕಾರವಿದೆ ಅಂತ ಹೇಳುವ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಸಿಎಂ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.

ಸಿದ್ದರಾಮಯ್ಯರನ್ನು ನೋಡಿದ್ರೆ ನನಗೆ ತುಂಬಾ ಕನಿಕರ ಬರುತ್ತೆ, ದಕ್ಷ ಆಡಳಿತಗಾರ ಎನ್ನುವ ಸಿದ್ದು, ಈ ಹಿಂದೆ ಡಿಜಿಪಿಯೊಬ್ಬರ ಕೇಸ್ ಮುಚ್ಚಿ ಹಾಕಿಲ್ವಾ ಅಂತ ಪ್ರೇಶ್ನಿಸಿದ್ದಾರೆ. ಆ ನಂತರ ಅದರ ಕುರಿತು ಎಫ್ ಐ ಆರ್ ಕೂಡ ದಾಖಲಾಗಿ, ಕೇಸ್ ಸಿಐಡಿ ಗೂ ಕೂಡ ಕೊಟ್ಟಿದ್ರು ಆದರೆ ನಂತರ ಕೇಸನ್ನ ಮುಚ್ಚಿಹಾಕಲಾಯಿತು.

ಆದರೆ ನಮ್ಮ ಸರ್ಕಾರ ಭ್ರಷ್ಟಾಚಾರ ‌ಕಂಡುಬಂದ ಕೂಡಲೇ ಎಡಿಜಿಪಿಯಂತಹ ಹಿರಿಯ ಅಧಿಕಾರಿಯನ್ನೆ ಬಂಧಿಸಿದ್ದೇವೆ ಎಂದು ಹೇಳುವ ಮೂಲಕ ಬೊಮ್ಮಾಯಿ ಸಮರ್ಥಿಸಿಕೊಂಡಿದ್ದಾರೆ.

- Advertisement -

Latest Posts

Don't Miss