Horoscope: 2025ರ ವರ್ಷ ಆರಂಭವಾಗಿದೆ. ಈ ವರ್ಷ ಏನೇನು ನಡೆಯಬಹುದು ಎಂಬ ಕುತೂಹಲ ಹಲವರಿಗಿರುತ್ತದೆ. ಅದರಂತೆ ಖ್ಯಾತ ಜ್ಯೋತಿಷಿಗಳಾದ ತಾಮ್ರಪರ್ಣಿ ಗುರೂಜಿ, ಈ ವರ್ಷ ರಾಜ್ಯದಲ್ಲಿ ಏನೇನು ಬದಲಾವಣೆಗಳಾಗುತ್ತದೆ ಅಂತಾ ಭವಿಷ್ಯ ನುಡಿದಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ.
2025ನ್ನು ಕೂಡಿಸಿದಾಗ 9 ಆಗುತ್ತದೆ. 9 ಅಂದ್ರೆ, ಕುಜನನ್ನು ಪ್ರತಿನಿಧಿಸುವ ಸಂಖ್ಯೆ. ರಾಷ್ಟ್ರದಲ್ಲಿ ಪ್ರಧಾನಿಗಳಿಗೆ ಸ್ವಲ್ಪ ಟೆನ್ಶನ್ ಕೊಡುವ ಘಟನೆಗಳಾಗುವ ಸಾಧ್ಯತೆ ಇರುತ್ತದೆ. ಆದರೆ ಕೃಷಿಯಲ್ಲಿ ನಮ್ಮ ದೇಶ ಉತ್ತಮವಾಗಿರುತ್ತದೆ. ದೇಶದಲ್ಲಿ ಮಳೆ ಬೆಳೆ ಚೆನ್ನಾಗಿ ಆಗುತ್ತದೆ.
ಇನ್ನು ಕರ್ನಾಟಕದ ಭವಿಷ್ಯ ಹೇಳುವುದಾದರೆ, ಕರ್ನಾಟಕವನ್ನು ಆಳುವ ಗ್ರಹ ಅಂದ್ರೆ ಸೂರ್ಯ. ಸೂರ್ಯ ಮತ್ತು ಮಂಗಳ ರಾಜ ಮತ್ತು ಮಂತ್ರಿ ಗ್ರಹ. ಹೀಗಾಗಿ ರಾಜ್ಯದಲ್ಲಿ ಕೆಲವು ಕೆಲಸಗಳು ಕೊನೆಯ ಹಂತಕ್ಕೆ ಬಂದು ನಿಲ್ಲುವ ಸಾಧ್ಯತೆ ಇರುತ್ತದೆ. ಮಾರ್ಚ್ ಬಳಿಕ ಸಿಎಂ ಬದಲಾವಣೆಯಾಗುವ ಎಲ್ಲ ಸಾಧ್ಯತೆಗಳಿದೆ ಎಂದು ಭವಿಷ್ಯ ನುಡಿದಿದ್ದಾರೆ ತಾಮ್ರಪರ್ಣಿ ಗುರೂಜಿ.