ರಾಯಚೂರು: ಕರೇಗುಡ್ಡ ಗ್ರಾಮವಾಸ್ತವ್ಯಕ್ಕೆ ಹೋಗುವ ಮಾರ್ಗ ಮಧ್ಯೆ ವೈಟಿಪಿಎಸ್ ಸಿಬ್ಬಂದಿ ಮೇಲೆ ಎಗರಾಡಿದನ್ನು ಸಿಎಂ ಕುಮಾರಸ್ವಾಮಿ ಸಮರ್ಥಿಸಿಕೊಂಡಿದ್ದಾರೆ.
ಗ್ರಾಮವಾಸ್ತವ್ಯಕ್ಕೆ ಹೊರಟಿದ್ದ ಸಿಎಂ ಕುಮಾರಸ್ವಾಮಿಯವರು ಪ್ರಯಾಣಿಸುತ್ತಿದ್ದ ಬಸ್ಸನ್ನು ವೈಟಿಪಿಎಸ್ ಸಿಬ್ಬಂದಿ ತಮ್ಮ ಅಹವಾಲು ನೀಡೋ ಸಲುವಾಗಿ ತಡೆದಿದ್ರು. ಇದಕ್ಕೆ ಸಿಎಂ ಕುಮಾರಸ್ವಾಮಿ ಕೆಂಡಾಮಂಡಲರಾಗಿ ಅವರ ಮೇಲೆ ಆಕ್ರೋಶ ಹೊರಹಾಕಿದ್ದಕ್ಕೆ ಸಿಎಂ ಇದೀಗ ಸಮಜಾಯಿಷಿ ನೀಡಿದ್ದು, ನಾನು ಮಾಡಿದ್ದ ಸರಿಯಾಗಿಯೇ ಇದೆ ಅಂತ ಸಮರ್ಥಿಸಿಕೊಂಡಿದ್ದಾರೆ. ನಾನು ಇಂದು ಬೆಳಗ್ಗೆಯೇ ವೈಟಿಪಿಎಸ್ ಪ್ರತಿನಿಧಿ ಜೊತೆ ಸಮಸ್ಯೆ ಬಗ್ಗೆ ಚರ್ಚಿಸಿ ಭರವಸೆಯನ್ನೂ ನೀಡಿದ್ದೆ. ಆದ್ರೆ ಮತ್ತೆ ಅವರು ರಸ್ತೆ ಅಡ್ಡಗಡ್ಡಿ ಕುಳಿತಿದ್ದೇಕೆ ಅಂತ ಪ್ರಶ್ನಿಸಿದ ಸಿಎಂ, ಅವರು ಪ್ರಚಾರಕ್ಕಾಗಿ ಈ ರೀತಿ ಮಾಡಿದ್ದಾರೆ ಅಂತ ಹೇಳಿದ್ರು. ಅಲ್ಲದೆ ಪ್ರಧಾನಿ ಮೋದಿಯವರನ್ನು ಇದೇ ರೀತಿ ತಡೆದರೆ ಸುಮ್ಮನಿರ್ತಾರಾ..? ಭದ್ರತಾ ಸಿಬ್ಬಂದಿ ಅವರನ್ನೆಲ್ಲಾ ಎಳೆದೊಯ್ದುತ್ತಿದ್ದರು. ಬಸ್ ತಡೆದು ಪ್ರತಿಭಟನೆ ಮಾಡಿದ್ರೆ ಸುಮ್ಮನಿರಬೇಕಾ..? ಅಂತ ಪ್ರಶ್ನಿಸಿರೋ ಕುಮಾರಸ್ವಾಮಿ, ಪ್ರತಿಭಟನಾಕಾರರ ಮೇಲೆ ತಮ್ಮ ಕೋಪವನ್ನು ಸಮರ್ಥಿಸಿಕೊಂಡಿದ್ದಾರೆ. ಅಲ್ಲದೆ ಯಾವುದೇ ಕಾರಣಕ್ಕೂ ಈ ಬಗ್ಗೆ ಜನರ ಕ್ಷಮೆ ಕೇಳೋ ಪ್ರಶ್ನೆಯೇ ಇಲ್ಲ ಅಂತ ಸಿಎಂ ನೇರವಾಗಿ ಹೇಳಿದ್ದಾರೆ.
ಚುನಾವಣೆಗೆ ಸಿದ್ದರಾಮಯ್ಯ ಈಗಾಗಲೇ ಪ್ಲ್ಯಾನ್ ಮಾಡಿದ್ದಾರಾ?? ಮಿಸ್ ಮಾಡದೇ ಈ ವಿಡಿಯೋ ನೋಡಿ