Friday, January 3, 2025

Latest Posts

‘ಸಂತೋಷದಿಂದ ಸಿಎಂ ಸ್ಥಾನ ತ್ಯಜಿಸಲು ಸಿದ್ಧ- ಪದೇ ಪದೇ ವಚನಭ್ರಷ್ಟ ಎನ್ನಬೇಡಿ’- ಸಿಎಂ ಕುಮಾರಸ್ವಾಮಿ

- Advertisement -

ಬೆಂಗಳೂರು: ವಿಶ್ವಾಸಮತ ಯಾಚನೆಗೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆ ಸಿಎಂ ಎಚ್.ಡಿ ಕುಮಾರಸ್ವಾಮಿ ಸದನದಲ್ಲಿ ತಮ್ಮ ಕೊಡುಗೆ, ಯೋಜನೆಗಳ ಕುರಿತಾಗಿ ಮಾತನಾಡಿದ್ದಾರೆ. ಈ ಮಧ್ಯೆ ಕಳೆದ ಬಾರಿ 20-20 ಸರ್ಕಾರದ ಕುರಿತಾಗಿ ಮಾತನಾಡಿದ ಎಚ್ಡಿಕೆ, ಪದೇ ಪದೇ ನನ್ನನ್ನು ವಚನಭ್ರಷ್ಟ ಎನ್ನಬೇಡಿ ಅಂತ ಪ್ರತಿಪಕ್ಷ ಬಿಜೆಪಿಗೆ ಮನವಿ ಮಾಡಿದ್ದಾರೆ.

ಸದನದಲ್ಲಿ ತಾವು ರಾಜ್ಯದ ಜನತೆಗೆ ನೀಡಿದ ಯೋಜನೆಗಳ ಕುರಿತು ಮಾತನಾಡಿದ ಸಿಎಂ ಅವುಗಳ ಬಗ್ಗೆ ವಿಸ್ತೃತವಾಗಿ ಚರ್ಚೆ ಆರಂಭಿಸಿದ್ರು. ಬಳಿಕ ಮಾತನಾಡಿದ ಸಿಎಂ ಕುಮಾರಸ್ವಾಮಿ, ನಾನು ಸಂತೋಷದಿಂದ ಸಿಎಂ ಸ್ಥಾನ ತ್ಯಜಿಸಲು ಸಿದ್ಧನಿದ್ದೇನೆ. ಆದರೆ ಪದೇ ಪದೇ ನನ್ನನ್ನು ವಚನಭ್ರಷ್ಟ ಅಂತ ಕರೆಯಬೇಡಿ ಅಂತ ಬಿಜೆಪಿಯಲ್ಲಿ ಮನವಿ ಮಾಡಿದ್ರು. ಇನ್ನು ಕಳೆದ ಬಾರಿ ಬಿಜೆಪಿ ಜೊತೆ ಸೇರಿ ಸರ್ಕಾರ ರಚನೆ ಮಾಡಿದಾಗ ಕೆಲ ಒಪ್ಪಂದಗಳಾಗಿದ್ದವು. ಅದರ ಪ್ರಕಾರ ನನಗೆ 20 ತಿಂಗಳು ಅಧಿಕಾರಾವಧಿ ನೀಡಲಾಗಿತ್ತು. ನನ್ನ ಅಧಿಕಾರಾವಧಿ ಮುಗಿದ ಬಳಿಕ ಅಧಿಕಾರ ಹಸ್ತಾಂತರಿಸಲು ಸಿದ್ಧನಾಗಿದ್ದೆ ಆದರೆ ಬಿಜೆಪಿಯವರ ನಡೆವಳಿಕೆ ಗಮನಿಸಿ ನಾನು ಸುಮ್ಮನಾಗಿಬಿಟ್ಟೆ. ಇನ್ನು ಅಧಿಕಾರದ ಬಗ್ಗೆ ಒಪ್ಪಂದ ಮಾಡಿಕೊಳ್ಳುವಾಗ ಬಿಜೆಪಿಯ ರಾಷ್ಟ್ರೀಯ ನಾಯಕರ್ಯಾರೂ ಇರಲಿಲ್ಲ. ಯಡಿಯೂರಪ್ಪ ಮತ್ತು ಜಗದೀಶ್ ಶೆಟ್ಟರೆ ಜೊತೆ ಮಾತ್ರ ಒಪ್ಪಂದವಾಗಿತ್ತು. ಆದರೆ ನಾನು ಕೊನೆಗೆ ಅಧಿಕಾರ ಹಸ್ತಾಂತರ ಮಾಡಿದೆ. ಇದಾದ ಬಳಿಕ ಬಿ.ಎಸ್ ಯಡಿಯೂರಪ್ಪ 9 ದಿನಗಳ ಕಾಲ ಮುಖ್ಯಮಂತ್ರಿಯಾದರು, ವಿಶ್ವಾಸಮತ ಯಾಚನೆ ಮಾಡದೇ ಅವರು ಅಧಿಕಾರ ಕಳೆದುಕೊಳ್ಳಬೇಕಾಯ್ತು ಅಂತ ತಮ್ಮ ಹಳೆಯ ಅನುಭವಗಳನ್ನು ಸಿಎಂ ಕುಮಾರಸ್ವಾಮಿ ಸದನದಲ್ಲಿ ಮೆಲುಕು ಹಾಕಿದ್ರು.

- Advertisement -

Latest Posts

Don't Miss