Political News: ಹುಬ್ಬಳ್ಳಿ: ಶಾಲಾ ಕಾಲೇಜುಗಳಲ್ಲಿ ಹಿಜಾಬ್‌ಗೆ ಅವಕಾಶ ನೀಡಿರೋದು ತುಷ್ಟಿಕರಣದ ಪರಮಾವಧಿ. ಹಿಜಾಬ್ ನಿಷೇಧ ಪ್ರಕರಣ ನ್ಯಾಯಾಲಯದಲ್ಲಿದೆ. ಇಂತಹ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಹಿಜಾಬ್ ಬಗ್ಗೆ ಹೇಳಿಕೆ ನೀಡೋ ಅವಶ್ಯಕತೆ ಇರಲಿಲ್ಲ. ವಿದ್ಯಾರ್ಥಿಗಳಿಗೆ ಯಾವುದೇ ಜಾತಿ ಮತ ಪಂಥಗಳಿರಲ್ಲ. ಆದರೆ ಕಾಂಗ್ರೆಸ್ ಪಕ್ಷ ವಿದ್ಯಾರ್ಥಿಗಳಲ್ಲಿಯೂ ರಾಜಕಾರಣ ಮಾಡುತ್ತಿದೆಂದು ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ ಕಿಡಿ ಕಾರಿದರು.
ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಈ ಹೇಳಿಕೆಯಿಂದ ವಿದ್ಯಾರ್ಥಿಗಳಲ್ಲಿ ವಿಷಬೀಜ ಬಿತ್ತುವ ಕೆಲಸ ಮಾಡುತ್ತಿದೆ. ರಾಜ್ಯ ತೀವ್ರ ಬರಗಾಲ ಎದುರಿಸುತ್ತಿದೆ. ರೈತರು ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ರಾಜ್ಯದಲ್ಲಿ ಹಲವಾರು ಸಮಸ್ಯೆಗಳಿವೆ. ಅನುದಾನ ಬಿಡುಗಡೆ ಮಾಡಲು ಇವರ ಬಳಿ ದುಡ್ಡಿಲ್ಲ. ಇವುಗಳ ಬಗ್ಗೆ ಸರ್ಕಾರ ತಲೆಕೆಡಿಸಿಕೊಳ್ಳುತ್ತಿಲ್ಲ. ಇವೆಲ್ಲ ವಿಚಾರಗಳಿಂದ ಡೈವರ್ಟ್ ಮಾಡಲು ಹಿಜಾಬ್ ವಿಚಾರ ಮುಂಚೂಣಿಗೆ ಒಂದು ಕಡೆ ತಂದಿದ್ದಾರೆ. ಒಂದು ಹಿಜಾಬ್ ಹಾಕಿಕೊಳ್ಳಿ ಅಂತೀರಿ. ಮತ್ತೊಂದು ಕಡೆ ಮಾಂಗಲ್ಯ ಸರ ಕಾಲುಂಗುರ ತೆಗಿಸುತ್ತೀರಿ. ಆ ಮೂಲಕ ಅಲ್ಪಸಂಖ್ಯಾತರ ತುಷ್ಟಿಕರಣ ಮಾಡ್ತಿದೆ . ಅಲ್ಪಸಂಖ್ಯಾತರ ಓಟನ್ನು ಒಂದು ಕಡೆ ಮಾಡಿಕೊಳ್ಳಲು ಸರ್ಕಾರ ಈ ರೀತಿ ಮಾಡುತ್ತಿದೆ. ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದ ಟೆಂಗಿನಕಾಯಿ.
ಸಚಿವರ ಪ್ರೈವೇಟ್ ಜೆಟ್‌ನಲ್ಲಿ ಸಿಎಂ ಪ್ರಯಾಣಿಸಿದ್ದಕ್ಕೆ ಬಿಜೆಪಿ ಅಸಮಾಧಾನ: ಸಿದ್ದು ತಿರುಗೇಟು