Sunday, September 8, 2024

Latest Posts

ಜಕ್ಕೂರು ಬಳಿಯ JNCASR ಗೆ ಸಿಎಂ ಭೇಟಿ.

- Advertisement -

ಬೆಂಗಳೂರು: ಯಲಹಂಕದ ಜಕ್ಕೂರು ಬಳಿ ಇರುವ ಜವಾಹರಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್ ಗೆ ಸಿಎಂ ಬಸವರಾಜ್ ಬೊಮ್ಮಾಯಿ ರವರು ಭೇಟಿ ನೀಡಿ ನೆಹರು ಸಂಶೋಧನಾ ಕೇಂದ್ರ ಕ್ಕೆ ಮಳೆಯ ಅವಾಂತರದಿಂದ ಆಗಿರುವ ದೊಡ್ಡ ಪ್ರಮಾಣದ ನಷ್ಟವನ್ನು ವೀಕ್ಷಿಸಿದ ಅವರು ನಾನು ಎರಡು ತಿಂಗಳ ಹಿಂದೆ ಇಲ್ಲಿಗೆ ಭೇಟಿ ನೀಡಿದ್ದೆ, ಆಗಲೇ ಚರಂಡಿ ನೀರು ಹರಿಯದ ಬಗ್ಗೆ ಮಾಹಿತಿ ಬಂದಿತ್ತು. ಇಲ್ಲಿರುವ ಕೆರೆಗಳು 8 ಅಡಿ ಮಾತ್ರವೇ ಆಳವಿದೆ, ಇಲ್ಲಿರುವ ಕಾಲುವೆಗಳು ಸಹ ಚಿಕ್ಕದಾಗಿವೆ ಆದ್ದರಿಂದ ಸಂಶೋಧನಾ ಕೇಂದ್ರಕ್ಕೆ ನೀರು ಹರಿದು ಬರುತ್ತದೆ. ರಾಜ ಕಾಲುವೆಗಳ ಮೇಲೆ ಕಟ್ಟಿರುವ ಮನೆಗಳ ತೆರವಿಗೆ ಸೂಚನೆ ನೀಡಿದ್ದೇನೆ. ಹಾಗೂ ಇದನ್ನು ರಕ್ಷಣೆ ಮಾಡಬೇಕಾಗಿರುವುದು ನಮ್ಮ ಕರ್ತವ್ಯ. ಇದಕ್ಕೆ  JNCASR ನ ಜೊತೆ ಸೇರಿ  ಕೆರೆಗಳ ನೀರು ಬರದಂತೆ ಮಾಸ್ಟರ್ ಪ್ಲಾನ್ ಅನ್ನು ಸಿದ್ಧತೆ ಮಾಡುತ್ತೇವೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಅವರು ತಿಳಿಸಿದರು. ಹಾಗೆಯೇ  ಮಾನ್ಯತಾ ಟೆಕ್ ಪಾರ್ಕ್ ಗೆ ಭೇಟಿ ನೀಡಿ ಅಲ್ಲಿಯೂ ಸಹ ಮಳೆಯಿಂದ ಆಗಿರುವ ಹಾನಿಯನ್ನು ಪರಿಶೀಲನೆ ಮಾಡಿದರು.

- Advertisement -

Latest Posts

Don't Miss