Tuesday, October 3, 2023

Latest Posts

ಮಾಜಿ ಸಿಎಂ ಎಚ್ಡಿಕೆ ಋಣಮುಕ್ತ ಕಾಯ್ದೆ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ಸಭೆ

- Advertisement -

ಬೆಂಗಳೂರು: ಸಮ್ಮಿಶ್ರ ಸರ್ಕಾರಾವಧಿಯ ಕೊನೆಯ ದಿನದಂದು ಎಚ್.ಡಿ ಕುಮಾರಸ್ವಾಮಿ ಘೋಷಿಸಿದ್ದ ಋಣಮುಕ್ತ ಕಾಯ್ದೆ ಕುರಿತು ಸಿಎಂ ಯಡಿಯೂರಪ್ಪ ಸಭೆ ನಡೆಸಲಿದ್ದಾರೆ. ಕಾಯ್ದೆ ಅನುಷ್ಠಾನದ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಲಿರುವ ಯಡಿಯೂರಪ್ಪ ಸಾಧಕ ಬಾಧಕಗಳ ಕುರಿತು ಚರ್ಚಿಸಲಿದ್ದಾರೆ.

ಎಚ್.ಡಿ ಕುಮಾರಸ್ವಾಮಿ ತಮ್ಮ ಆಡಳಿತಾವಧಿಯ ಕೊನೆ ದಿನ ಸುದ್ದಿಗೋಷ್ಠಿ ನಡೆಸಿ ಘೋಷಣೆ ಮಾಡಿದ್ದ ಋಣಮುಕ್ತ ಕಾಯ್ದೆ ಮೇಲೆ ಸಿಎಂ ಯಡಿಯೂರಪ್ಪ ನಿಗಾ ವಹಿಸಲಿದ್ದಾರೆ. ಈ ಕುರಿತು ಇಂದು ಅಧಿಕಾರಿಗಳೊಂದಿಗೆ ಸಭೆ ನಡೆಸಲಿರುವ ಅವರು ಕಾಯ್ದೆ ಫಲಾನುಭವಿಗಳ ಮಾನದಂಡ, ಇಲಾಖೆಯ ನೋಡಲ್ ಅಧಿಕಾರಿಗಳ ಕಾರ್ಯವ್ಯಾಪ್ತಿ ಕುರಿತಂತೆ ಸಾಧಕ-ಬಾಧಕಗಳ ಕುರಿತು ಚರ್ಚೆ ನಡೆಸಲಿದ್ದಾರೆ. ಇನ್ನು ಈ ಕುರಿತು ಸಾರ್ವಜನಿಕರಿಗೂ ಕೆಲ ಗೊಂದಲಗಳು ಎದುರಾಗಿದ್ದು, ಅವರಿಗೆ ಸಮಗ್ರ ಮಾಹಿತಿ ನೀಡಲು ಸಿಎಂ ಯಡಿಯೂರಪ್ಪ ಇಂದು ಈ ಮಹತ್ವದ ಸಭೆ ನಡೆಸಲಿದ್ದಾರೆ.

ಇನ್ನು ರೈತರ ಸಾಲಮನ್ನಾ ಯೋಜನೆಗಾಗಿ ಐಎಎಸ್ ಅಧಿಕಾರಿಯ ನೇಮಕ ಮಾಡಿಕೊಂಡ ಮಾದರಿಯಲ್ಲೇ ಋಣಮುಕ್ತ ಕಾಯ್ದೆ ಅನುಷ್ಠಾನಕ್ಕೂ ನೇಮಕ ಮಾಡಿಕೊಳ್ಳಬೇಕೋ ಬೇಡವೋ ಎನ್ನುವ ಕುರಿತಾಗಿಯೂ ಬಿಎಸ್ವೈ ಮಾತುಕತೆ ನಡೆಸಲಿದ್ದಾರೆ. ಆದ್ರೆ ಮಾಜಿ ಸಿಎಂ ಕುಮಾರಸ್ವಾಮಿ ಹೊರಡಿಸಿದ್ದ ಅಧಿಸೂಚನೆಯನ್ನು ತಡೆ ಹಿಡಿಯುವಂತೆ ಸೂಚನೆ ನೀಡಿದ್ದ ಬಿಎಸ್ವೈ ಈ ಯೋಜನೆ ಅನುಷ್ಠಾನವಾಗದಂತೆ ಕೊಕ್ಕೆ ಹಾಕದಿರಲಿ ಅನ್ನೋ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.

- Advertisement -

Latest Posts

Don't Miss