Friday, April 19, 2024

Latest Posts

ಮೈತ್ರಿ ನಾಯಕರ ಹುಮ್ಮಸ್ಸು ಕಂಡು ಬೆವರುತ್ತಿರುವ ಬಿಜೆಪಿ..!

- Advertisement -

ಬೆಂಗಳೂರು: ಪತನದಂಚಿನಲ್ಲಿರೋ ಮೈತ್ರಿ ಸರ್ಕಾರ ಇದೀಗ ಸೇಫ್ ಜೋನ್ ಗೆ ಹೋಗುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ. ದೋಸ್ತಿಗಳು ಒಬ್ಬೊಬ್ಬರೇ ಅತೃಪ್ತರನ್ನು ಸಂಪರ್ಕ ಮಾಡುತ್ತಿರೋದು ಬಿಜೆಪಿ ನಾಯಕರು ಬೆವರುವಂತೆ ಮಾಡಿದೆ.

ಅತೃಪ್ತ ಶಾಸಕರ ಮೇಲೆ ಅನರ್ಹತೆ ಆಸ್ತ್ರ ಪ್ರಯೋಗಿಸಲು ಮುಂದಾಗಿರೋ ದೋಸ್ತಿಗಳ ತಂತ್ರ ವರ್ಕೌಟ್ ಆಗೋ ಲಕ್ಷಣ ಕಾಣ್ತಿದೆ. ರಾಜೀನಾಮೆ ವಾಪಸ್ ಪಡೆಯುವಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಅತೃಪ್ತರನ್ನು ಸಂಪರ್ಕಿಸುತ್ತಿದ್ದಾರೆ ಎನ್ನಲಾಗ್ತಿದ್ದು, ಅವರ ಮನವೊಲಿಕೆಗೆ ಎಲ್ಲಾ ರೀತಿಯ ಕಸರತ್ತು ನಡೆಸುತ್ತಿದ್ದಾರೆ. ಇದೀಗ ಹೊಸಕೋಟೆ ಶಾಸಕ ಎಂಟಿಬಿ ನಾಗರಾಜ್ ದೋಸ್ತಿ ನಾಯಕರನ್ನು ಭೇಟಿಯಾಗಿದ್ದು, ರಾಜೀನಾಮೆ ಹಿಂಪಡೆಯೋದು ಬಹುತೇಕ ಖಚಿತ ವಾಗಿದೆ. ಇವರೊಂದಿಗೆ ಚಿಕ್ಕಬಳ್ಳಾಪುರ ಶಾಸಕ ಡಾ.ಕೆ ಸುಧಾಕರ್ ಕೂಡ ರಾಜೀನಾಮೆ ಹಿಂಪಡೆಯಲಿದ್ದಾರೆ ಎನ್ನಲಾಗಿದೆ.

ಇನ್ನು ಅನರ್ಹತೆಯ ತೂಗಗತ್ತಿಯಿಂದ ತಪ್ಪಿಸಿಕೊಳ್ಳೋದಕ್ಕೆ ಇದೀಗ ಈ ಇಬ್ಬರೂ ಶಾಸಕರು ರಾಜೀನಾಮೆ ಹಿಂಪಡೆಯಲು ನಿರ್ಧರಿಸಿದ್ದಾರೆ ಎನ್ನಲಾಗಿದ್ದು, ಉಳಿದ ಅತೃಪ್ತ ಶಾಸಕರಿಗೂ ಅನರ್ಹತೆಯ ಭೀತಿ ಎದುರಾಗಿದ್ದು, ಯಾವುದೇ ಕ್ಷಣದಲ್ಲಾದ್ರೂ ರಾಜೀನಾಮೆ ವಾಪಸ್ ಪಡೆಯೋ ನಿರ್ಧಾರ ತೆಗೆಕೊಳ್ಳಬಹುದು ಎನ್ನಲಾಗಿದೆ.

ಇನ್ನು ಸದ್ದಿಲ್ಲದೆ ಆಪರೇಷನ್ ನಡೆಸುತ್ತಿರೋ ಬಿಜೆಪಿಗೆ ಉಪ ಮುಖ್ಯಮಂತ್ರಿ ಪರಮೇಶ್ವರ್ ಕುಟುಕಿದ್ದಾರೆ. ಯಡಿಯೂರಪ್ಪನವರ, ಬಿಜೆಪಿಯ ಸರಕಾರ ಉರುಳಿಸುವ ಪ್ರಯತ್ನ ಕನಸಾಗಿಯೇ ಉಳಿಯಲಿದೆ. ನಮ್ಮೆಲ್ಲಾ ಶಾಸಕರ ಬೆಂಬಲದೊಂದಿಗೆ ಬಹುಮತ ಸಾಬೀತುಪಡಿಸಿ ಸಮ್ಮಿಶ್ರ ಸರಕಾರವನ್ನು ಸುಭದ್ರಗೊಳಿಸಲಿದ್ದೇವೆ.
ಬಿಜೆಪಿಯ ಕೀಳುಮಟ್ಟದ ರಾಜಕೀಯ ಕರ್ನಾಟಕದಲ್ಲಿ ನಡೆಯಲು ನಾವು ಬಿಡುವುದಿಲ್ಲ ಅಂತ ಪರಮೇಶ್ವರ್ ಟ್ವೀಟ್ ಮಾಡಿದ್ದಾರೆ. ಒಟ್ಟಾರೆ ದೋಸ್ತಿಗಳಲ್ಲಿ ಸರ್ಕಾರ ಸುಭದ್ರಗೊಳಿಸೋ ವಿಶ್ವಾಸ ಕಂಡು ಬಿಜೆಪಿ ಪಾಳಯದಲ್ಲಿ ತಳಮಳ ಶುರುವಾಗಿರೋದಂತೂ ಸುಳ್ಳಲ್ಲ.

ಸರ್ಕಾರ ಸೇಫ್ ಹೇಗೆ ಗೊತ್ತಾ..? ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=IYW7U_3rVgo
- Advertisement -

Latest Posts

Don't Miss