Thursday, July 31, 2025

Latest Posts

ಒಣ ಕೊಬ್ಬರಿಯ ಆರೋಗ್ಯ ರಹಸ್ಯಗಳು…!

- Advertisement -

Health tips:

ತೆಂಗಿನ ವೃಕ್ಷಕ್ಕೆ ಕಲ್ಪ ವೃಕ್ಷ ಎಂದು ಕರೆಯುತ್ತಾರೆ, ಯಾವುದೇ ಶುಭ ಸಮಾರಂಭಗಳಲ್ಲಿ ತೆಂಗಿನ ಎಲೆ ಇದ್ದರೆ ಅದರ ಕಳೆಯೇ ಬೇರೆ ಎನ್ನಬಹುದು ಇದನ್ನು ಎಲ್ಲ ಸಂಭ್ರಮಾಚರಣೆಯಲ್ಲೂ ಬಳಸುತ್ತಾರೆ, ಹಾಗೆಯೆ ತೆಂಗಿನ ಕಾಯಿಯನ್ನು ಸಹ ಎಲ್ಲ ಸಮಾರಂಭಗಳಲ್ಲಿ ಬಳಸುತ್ತಾರೆ. ಹಾಗೆಯೆ ಒಣ ಕೊಬ್ಬರಿಯನ್ನು ಸಾಮಾನ್ಯವಾಗಿ ಎಲ್ಲ ಸಿಹಿಯ ಪದಾರ್ತಗಳನ್ನು ಮಾಡುವಾಗ ಉಪಯೋಗಿಸುತ್ತಾರೆ, ಕಾಯಿಒಬ್ಬಟು ಮಾಡಲು ಹಾಗೂ ಪಾಯಸ, ಕಡಬು ಇನ್ನಿತರ ಸಿಹಿ ತಿಂಡಿಗಳನ್ನೂ ಮಾಡಲು ಬಳಸುತ್ತಾರೆ. ಒಣ ಕೊಬ್ಬರಿಯಲ್ಲಿ ಒಳ್ಳೆಯ ಫ್ಯಾಟ್ ಕಂಟೆಂಟ್ ಹಾಗೂ ಮೋನೋಲೋರಿಕ್ ಆಸಿಡ್ ಪರಿಪೂರ್ಣವಾಗಿ ಇದೆ, ಇದರಿಂದ ನಾವು ತಿಂದಿರುವ ಆಹಾರ ಬಹಳ ಬೇಗ ಜೀರ್ಣವಾಗುತ್ತದೆ. ಜೊತೆಗೆ ಇದು ನಮ್ಮ ದೇಹದಲ್ಲಿ ಒಳ್ಳೆಯ ಆಹಾರವನ್ನು ಉತ್ಪತ್ತಿ ಮಾಡುತ್ತದೆ ಹಾಗೂ ಕೆಟ್ಟ ಆಹಾರವನ್ನು ನಾಶ ಮಾಡುತ್ತದೆ ,ಇದರಲ್ಲಿ ಕ್ಯಾಲ್ಷಿಮ್ ,ವಿಟಮಿನ್ ಬಿ6, ವಿಟಮಿನ್ ಸಿ, ಫೈಬರ್, ಪ್ರೊಟೀನ್ ಅಂಶ, ಝಿನ್ಕ್ ,ರೈಬೊ ಕ್ಲಮಿನ್ ,ಆಂಟಿಆಕ್ಸಿಡೆಂಟ್ ಅದ್ಭುತವಾದ ಪೋಷಕಾಂಶಗಳನ್ನು ಇದರಲ್ಲಿ ಕಾಣಬಹುದು. ಒಣ ಕೊಬ್ಬರಿಯನ್ನು ತಿನ್ನುವುದರಿಂದ, ವಾತ, ಪಿತ್ತ ,ಕಫ ,ಈ ಮೂರು ಸಮತೂಲನವಾಗಿ ಇರುತ್ತದೆ .

ವಾತ ಇರುವವರು ಈ ಒಣ ಕೊಬ್ಬರಿಯನ್ನು ಅಗಿದು ಅಗಿದು, ತಿನ್ನುವುದರಿಂದ ವಾತ ರೋಗಗಳು ನಿವಾರಣೆ ಯಾಗುತ್ತದೆ, ಪಿತ್ತ ಇರುವವರು ಇದನ್ನು ಸ್ವಲ್ಪ ತುಪ್ಪದ ಜೊತೆ ತಿಂದರೆ ಅದ್ಭುತವಾದ ಫಲಿತಾಂಶ ಸಿಗುತ್ತದೆ. ಕಫ ಇರುವವವರು ಇದನ್ನು ಬೆಲ್ಲದ ಜೊತೆ ತಿಂದರೆ ಕಫ ನಿರ್ಣಾಮವಾಗುತ್ತದೆ. ಇದು ಒಂದು ಅದ್ಭುತವಾದ ಆಹಾರ ಎಂದು ಹೇಳಬಹುದು .ಈ ವಾತ ಪಿತ್ತಗಳು ಬ್ಯಾಲೆನ್ಸ್ ಆಗಿದ್ದರೆ ಯಾವುದೇ ರೋಗಗಳು ಬರುವುದಿಲ್ಲ. ಹಾಗೂ ರೋಗ ಪ್ರತಿರೋಧಕ ಶಕ್ತಿ ಹೆಚ್ಚಾಗುತ್ತದೆ. ಇದರಿಂದ ಬೋನ್ಸ್ ತುಂಬಾ ಸ್ಟ್ರಾಂಗ್ ಆಗುತ್ತದೆ. ಚರ್ಮದ ಕಾಂತಿಯು ಹೆಚ್ಚಾಗುತ್ತದೆ ಹಾಗೂ ಚರ್ಮ ರೋಗಗಳು ಬರುವುದಿಲ್ಲ. ಮತ್ತು ನಿಮ್ಮ ಕೂದಲಿನ ಹಾರೈಕೆ ಚೆನ್ನಾಗಿರುತ್ತದೆ. ಹತ್ತು ಅಥವಾ ಇಪತ್ತು ಗ್ರಾಂ ಕೊಬರಿಯನ್ನು ದಿನ ಬೆಳಿಗ್ಗೆ ತಿನ್ನುವುದರಿಂದ ಇದು ನಿಮ್ಮ ದೇಹದ ಕೊಲಾಜೆನ್ ಮತ್ತು ಹೆಲಸ್ತೀನ್ ಅನ್ನು ಸರಿಪಡಿಸುತ್ತದೆ .ಹಾಗೂ ರಕ್ತದಲ್ಲಿ ಶೇಖರಣೆಯಾಗಿರುವ ಪಿತ್ತಂಶವನ್ನು ಹೊರ ತೆಗೆಯುತ್ತದೆ. ಒಣ ಕೊಬ್ಬರಿಯನ್ನು ನಿಯಮಿತವಾಗಿ ಸೇವಿಸಿದರೆ ರಕ್ತದ ಹಾರ್ಡ್ ನೆಸ್ ಕಡಿಮೆಯಾಗಿ ರಕ್ತ ಸ್ಮೂತ ಆಗುತ್ತದೆ. ಆದರಿಂದ ಹಾರ್ಟ್ ಬ್ಲಾಕೇಜ್ ಅನ್ನು ತಡೆಗಟ್ಟಬಹುದು ಇದರಿಂದ ನಿಮ್ಮ ಆರೋಗ್ಯ ಚನ್ನಾಗಿರುತ್ತದೆ.

ಒಣ ಕೊಬ್ಬರಿ ಸೇವನೆಯಿಂದ ಸಂಧಿವಾತದ ಸಮಸ್ಯೆಯನ್ನು ನಿವಾರಣೆ ಮಾಡಬಹುದು ಹಾಗೂ ಈ ಸಮಸ್ಯೆ ಬಾರದಂತೆ ತಡೆಯಬಹುದು. ಕಾರ್ಜುರದ ಜೊತೆಗೆ ಒಣ ಕೊಬ್ಬರಿಯನ್ನು ಸೇವಿಸಿದರೆ ರಕ್ತ ಹೀನತೆಯನ್ನು ತಡೆಗಟ್ಟಬಹುದು. ಒಣಕೊಬ್ಬರಿ ಜೋತೆ ಬಾದಾಮಿಯನ್ನು ಸೇರಿಸಿ ಅದರ ಹಾಲು ಕುಡಿಯುವುದರಿಂದ ನಿಮಗೆ ಇನ್ಸ್ಟಂಟ್ ಎನರ್ಜಿ ಬರುತ್ತದೆ. ಹಾಗೂ ಇದು ಮೆದಳಿಗೆ ಬಹಳ ಒಳ್ಳೆಯದು, ಏಕಾಗ್ರತೆಯನ್ನು ಹೆಚ್ಚಿಸುತ್ತದೆ.  ಜ್ಞಾಪಕ ಶಕ್ತಿಯನ್ನು ವೃದ್ಧಿ ಗೊಳಿಸುತ್ತದೆ ,ಗ್ಯಾಸ್ಟ್ರಿಕ್ ಅಸಿಡಿಟಿಯನ್ನು ,ಮಲಬದ್ದತೆಯನ್ನು ದೂರ ಮಾಡುತ್ತದೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವೈವಾಹಿಕ ಜೀವನ ಸಂತೋಷವಾಗಿರಲು ಹೀಗೆ ಮಾಡಿ …!

ಚಾಣಕ್ಯನ ಪ್ರಕಾರ ಇಂತಹ ಜನರು ಬಡತನದಲ್ಲಿ ಹುಟ್ಟಿದರೂ ಸಹ ಇವರ ಮೇಲೆ ಲಕ್ಷ್ಮಿಯ ಅಪಾರ ಕೃಪೆ ಇರುತ್ತದೆ..!

ದೈವಾರಾಧನೆಗೆ ಶ್ರೇಷ್ಠವಾದ ಧನುರ್ ಮಾಸ ಶುಭಕಾರ್ಯಗಳಿಗೆ ಶ್ರೇಷ್ಠವಲ್ಲ ಏಕೆ..?

 

- Advertisement -

Latest Posts

Don't Miss