ಬೇಲೂರು: ಅಬಕಾರಿ ಇಲಾಖೆಯಿಂದ ವಶಪಡಿಸಿಕೊಂಡ ಮದ್ಯವನ್ನು ನಾಶಪಡಿಸಲಾಯಿತು.
ಪಟ್ಟಣದ ಅಬಕಾರಿ ಇಲಾಖೆ ವತಿಯಿಂದ ೨೦೨೧-೨೨ ನೇ ಸಾಲಿನಲ್ಲಿ ವಶಪಡಿಸಿಕೊಂಡಂತಹ ಮದ್ಯವನ್ನು ತಹಸಿಲ್ದಾರ್ ರಮೇಶ್ ಜಿಲ್ಲಾ ಅಬಕಾರಿ ಆದಿಕ್ಷಕರ ನೇತೃತ್ವದಲ್ಲಿ ನಾಶಪಡಿಸಲಾಯಿತು.
ಇದೇ ವೇಳೆ ಮಾತನಾಡಿದ ಹಾಸನ ಜಿಲ್ಲಾ ಅಬಕಾರಿ ಉಪ ಅಧೀಕ್ಷಕರಾದ ಜಿವಿ ವಿಜಯ್ ಕುಮಾರ್ ೨೧-೨೨ ನೇ ಸಾಲಿನ ಬೇಲೂರು ವಲಯದಲ್ಲಿ ಒಟ್ಟು ೧೫ ಪ್ರಕರಣಗಳಿಂದ ೨೪ ಲೀ ಮದ್ಯ ೧೧ ಲೀ ಕಳ್ಳಬಟ್ಟಿ ,೧೦೬ ಲೀ ಬೆಲ್ಲದ ಕೊಳೆಯನ್ನು ವಶಪಡಿಸಿಕೊಂಡು ನಮ್ಮ ಸರ್ಕಾರದ ಆದೇಶದಂತೆ ನಾಶಪಡಿಸಲಾಗಿದೆ.
ಸರ್ಕಾರದ ಸೂಚನೆಯಂತೆ ಎಮ್ ಎಸ್ ಐ ಎಲ್ ಹಾಗೂ ಸಿ ಎಲ್‌ಸೆವೆನ್ ಅಂಡಿಯಲ್ಲಿ ದರಪಟ್ಟಿಯನ್ನು ಗ್ರಾಹಕರಿಗೆ ಕಾಣುವಂತೆ ನಮೂದಿಸಲಾಗಿದೆ. ನಿಗದಿತ ಸಮಯಕ್ಕಿಂತ ಮುಂಚೆ ಯಾವುದೇ ಅಂಗಡಿಗಳನ್ನು ತೆರಯುವಂತಿಲ್ಲ ತೆರೆದಂತ ಅಂಗಡಿಗಳ ಮೇಲೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದರು.
ಮಧ್ಯವಯಸ್ಕರರಲ್ಲೂ ಕಂಡುಬರುವ ಹಿಮ್ಮಡಿ ನೋವು; ತಡೆಗಟ್ಟಲು ಪಾಲಿಸಬೇಕಾದ ಕ್ರಮಗಳು
ಬೇಲೂರು ಅಬಕಾರಿ ನಿರೀಕ್ಷಕರಾದ ಚಂದನ ಮಾತನಾಡಿ ಈ ಹಿಂದೆ ಕಳ್ಳಬಟ್ಟಿ ಪ್ರಕರಣಗಳು ತಾಲೂಕಿನಲ್ಲಿ ಹೆಚ್ಚಾಗಿ ದಾಖಲಾಗುತ್ತಿದ್ದವು.ಈಗ ಸಂಪೂರ್ಣ ಕಡಿಮೆಯಾಗಿದ್ದು ನಾವು ಕಳ್ಳಬಟ್ಟಿ ಮುಕ್ತ ತಾಲೂಕನ್ನಾಗಿ ಮಾಡಲು ಈಗಾಗಲೇ ಸಂಪೂರ್ಣ ಪಣತೊಟ್ಟಿದ್ದು ತಾಲೂಕಿನಲ್ಲಿ ಈಗ ಎಲ್ಲಿಯೂ ಪ್ರಕರಣಗಳು ಕಂಡು ಬಂದಿಲ್ಲ.ಎಲ್ಲಾ ಗ್ರಾಮಗಳಲ್ಲಿ ಸಾರ್ವಜನಿಕರ ಸಭೆ ನಡೆಸಿ ಸಂಪೂರ್ಣ ಮಾಹಿತಿ ನೀಡಿರುವುದರಿಂದ ಪ್ರಕರಣ ಕಡಿಮೆಯಾಗಿದೆ ಎಂದರು.
ಈ ಸಂದರ್ಭದಲ್ಲಿ ಬೇಲೂರು ತಹಶೀಲ್ದಾರ್ ರಮೇಶ್ ಅಬಕಾರಿ ನಿರೀಕ್ಷಕರಾದ ಮೃತ್ಯುಂಜಯ, ರಂಜೀತ್, ಸಿಬ್ಬಂದಿಗಳಾದ ಧರಣೇಶ್, ಪ್ರಕಾಶ್, ಮಲ್ಲಿಕಾರ್ಜುನ, ನವೀನ್, ಇಮ್ರಾನ್ ಇತರರು ಹಾಜರಿದ್ದರು.