Monday, October 6, 2025

Latest Posts

ಡಿಸೆಂಬರ್ 31ಕ್ಕೆ ಬರಲಿದೆ ದಿಗಂತ್ ಸಿನಿಮಾ”ಹುಟ್ಟು ಹಬ್ಬದ ಶುಭಾಶಯಗಳು..!”

- Advertisement -

“ಹುಟ್ಟು ಹಬ್ಬದ ಶುಭಾಶಯಗಳು” ಟೈಟಲ್ ನಿಂದಲೇ ಸ್ಯಾಂಡಲ್ವುಡ್ ನಲ್ಲಿ ಗಮನ ಸೆಳೆಯುತ್ತಿದೆ. ದೂದ್ ಪೇಡಾ ದಿಗಂತ್, ಕವಿತಾ ಗೌಡ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಚಿತ್ರ.

ಇತ್ತೀಚೆಗೆ ಸ್ಯಾಂಡಲ್ವುಡ್ ಮಾತ್ರವಲ್ಲದೆ ಇಡೀ ಭಾರತೀಯ ಚಿತ್ರರಂಗದಲ್ಲಿ ಥ್ರಿಲ್ಲರ್ ಸಿನಿಮಾಗಳು ಹೆಚ್ಚಿನ ಸಂಖ್ಯೆಯಲ್ಲಿ ತೆರೆಕಂಡು ಸಕ್ಸೆಸ್ ಕಾಣುತ್ತಿವೆ. ಇದೇ ಹಾದಿಯಲ್ಲಿ ಈಗ ಚಂದನವನದಲ್ಲಿ “ಹುಟ್ಟುಹಬ್ಬದ ಶುಭಾಶಯಗಳು” ಸಿನಿಮಾ ಕೂಡ ತೆರೆಕಾಣಲು ಸಿದ್ಧವಾಗಿದೆ. ಇದೊಂದು ಕ್ರೈಂ ಥ್ರಿಲ್ಲರ್ ಸಿನಿಮಾವಾಗಿದ್ದು , ಕಾಮಿಡಿ ರೊಮ್ಯಾಂಟಿಕ್ ಪಾತ್ರಗಳಲ್ಲಿ ಕಾಣಿಸಿಕೊಳ್ಳತ್ತಿದ್ದ ದಿಗಂತ್ ಈ ಸಿನಿಮಾದ ಮೂಲಕ ಇದೇ ಮೊದಲ ಬಾರಿಗೆ ದಿಗಂತ್​ ಮಾಸ್​ ಲುಕ್​ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮಾತ್ರವಲ್ಲದೆ ದಿಗಂತ್​ ಅವರ ಹೊಸ ಲುಕ್​ ಪಕ್ಕಾ ರಗಡ್​​​ ಆಗಿದ್ದು, ಕಾಮಿಡಿ ಜೊತೆಗೆ ಲವ್​ ಹಾಗೂ ಮಾಸ್​ ಕಥೆಯನ್ನು ಹೊಂದಿದೆ.

“ಹುಟ್ಟು ಹಬ್ಬದ ಶುಭಾಶಯಗಳು” ಬರಿ ಕ್ರೈಂ ಥ್ರಿಲ್ಲರ್ ಸಿನಿಮಾವಲ್ಲ , ಕಾಮಿಡಿ ಕ್ರೈಂ ಥ್ರಿಲ್ಲರ್ ಚಿತ್ರವಾಗಿದೆ ಎನ್ನುತ್ತಿದೆ ಚಿತ್ರತಂಡ. ಸಿನಿಮಾದಲ್ಲಿ ನಾಯಕ ದಿಗಂತ್, ನಾಯಕಿ ಕವಿತಾ ಜೊತೆಗೆ ಮಡೆನೂರು ಮನು, ಸೂರಜ್, ಮತ್ತು ಕಾಮಿಡಿ ಕಿಲಾಡಿಗಳು ಮೂಲದ ಹಲವರು ನಟಿಸಿದ್ದಾರೆ. ಪಕ್ಕ ಕಾಮಿಡಿ ಎಂಟರ್ಟೈನ್ ಇರಲಿದೆ.

ಇನ್ನೂ ಸಿನಿಮಾ ಇದೇ ಡಿಸೆಂಬರ್ 31ಕ್ಕೆ ತೆರೆಕಾಣುತ್ತಿದ್ದು, ಅದೇ ದಿನವೇ ಇನ್ನೂ ಎರಡು ಸಿನಿಮಾಗಳು ತೆರೆಕಾಣಲಿದೆ. ಒಂದು ಒಳ್ಳೆಯ ಕಂಟೆಂಟ್ ಪ್ರೇಕ್ಷಕರ ಮುಂದೆ ಇಟ್ಟರೆ ಕಂಡಿತಾ ಸಿನಿಮಾ ಯಶಸ್ಸು ಕಾಣುತ್ತದೆ ಮತ್ತು ಇದು ಯಾವುದೇ ರೀತಿಯ ಸ್ಟಾರ್ ವಾರ್ ಅಲ್ಲ ಹೀಲ್ತಿ ಕಾಂಪಿಟೇಶನ್ ಎನ್ನುತ್ತಿದೆ ಚಿತ್ರ ತಂಡ.

- Advertisement -

Latest Posts

Don't Miss