ಹೊಸದಿಲ್ಲಿ: ಮುಂಬರುವ ಪ್ರತಿಷ್ಠಿತ ಕಾಮನ್ವ್‍ಲ್ತ್ ಕ್ರೀಡಾಕೂಟಕ್ಕೆ ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ ಅಥ್ಲೀಟ್ ನೀರಜ್ ಚೋಪ್ರಾ ನೇತೃಥ್ವದ 37 ಅಥ್ಲೀಟ್‍ಗಳ ತಂಡವನ್ನು ಪ್ರಕಟಿಸಿದೆ. ಈ ಬಾರಿಯೂ ಆಯ್ಕೆಯಲ್ಲಿ ಯಾವುದೇ ಅಚ್ಚರಿ ಕಂಡುಬಂದಿಲ್ಲ.
37 ಅಥ್ಲೀಟ್‍ಗಳ ಪೈಕಿ 18 ಮಹಿಳಾ ಅಥ್ಲೀಟ್ ಆಗಿದ್ದಾರೆ. ಹಿಮಾ ದಾಸ್, ದ್ಯುತಿ ಚಾಂದ್ 400 ಮೀಟರ್ ರಿಲೇ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಡಿಸ್ಕಸ್ ಥ್ರೊ ವಿಭಾಗದಲ್ಲಿ ಸೀಮಾ ಪುನಿಯಾ 5ನೇ ಬಾರಿಗೆ ಕಾಮನ್‍ವೆಲ್ತ್ ಕೂಟದಲ್ಲಿ ಭಾಗವಹಿಸುತ್ತಿದ್ದಾರೆ.
ಭಾರತ ತಂಡ
ಪುರುಷ ವಿಭಾಗ : ಅವಿನಾಶ್ ಸೇಬ್ಲ್ (3ಸಾವಿರ ಮೀ.ಸ್ಟೀಪಲ್ ಚೇಸ್), ನಿತಿಂದರ್ ರಾವತ್ (ಮ್ಯಾರಾಥಾನ್), ಎಂ.ಶ್ರೀಶಂಕರ್ ಮತ್ತು ಮೊಹ್ಮದ್ ಅನೀಸ್ ಯಾಯಿಯಾ (ಲಾಂಗ್ ಜಂಪ್), ಅಬ್ದುಲ್ಲಾ ಅಬೂಬಾಕರ್, ಪ್ರವೀಣ್ ಚಿತ್ರವೇಲ ಮತ್ತು ಎಲ್ದೊಸ್ ಪೌಲ್ (ಟ್ರಿಪಲ್ ಜಂಪ್), ತಜಿಂದರ್ ಪಾಲ್ ಸಿಂಗ್ ತೂರ್ (ಶಾಟ್ ಪುಟ್), ನೀರಜ್ ಚೋಪ್ರಾಘಿ, ಡಿಪಿ ಮನು ಮತ್ತು ರೋಹಿತ್ ಯಾದವ್ (ಜಾವಲಿನ್ ಎಸೆತ), ಸಂದೀಪ್ ಕುಮಾರ್ ಮತ್ತು ಮಿತ್ ಖಾತ್ರಿ (ರೇಸ್ ವಾಕಿಂಗ್), ಅಮೊಜ್ ಜಾಕೊಬ್, ನೊಹ ನಿರ್ಮಲ್ ಟಾಮ್, ಆರೊಕಿಯಾ ರಾಜೀವ್, ಮೊಹ್ಮದ್ ಅಜ್ಮಲ್, ನಾಗನಾಥನ್ ಪಾಂಡಿ, ಮತ್ತು ರಾಜೇಶ್ ರಮೇಶ್(4-400 ರಿಲೆ).
ಮಹಿಳಾ ತಂಡ: ಎಸ್.ಧನಲಕ್ಷ್ಮೀ (100 ಮತ್ತು 4-100 ಮೀ.), ಜ್ಯೋತಿ ಯರ್ರಾಜಿ (100ಮೀ.ಹರ್ಡಲ್ಸ್), ಐಶ್ವರ್ಯ ಬಿ. (ಲಾಂಗ್ ಜಂಪ್, ಟ್ರಿಪಲ್ ಜಂಪ್) ಆನ್ಸಿ ಸೊಜಾನ್(ಲಾಂಗ್ ಜಂಪ್), ಮನಪ್ರೀತ್ ಕೌರ್ (ಶಾಟ್ ಪುಟ್), ನವಜೀತ್ ಕೌರ್ ಲಾನ್ ಮತ್ತು ಸೀಮಾ ಅಂತಿಲ್ ಪುನಿಯಾ (ಡಿಸ್ಕಸ್ ಥ್ರೊ), ಅನು ರಾಣಿ ಮತ್ತು ಶಿಲ್ಪಾ ರಾಣಿ (ಜಾವಲಿನ್ ಥ್ರೋ), ಮಂಜು ಬಾಲಾ ಸಿಂಗ್ ಮತ್ತು ಸರೀತಾ ರೊಮಿತ್ ಸಿಂಗ್ (ಹ್ಯಾಮರ್ ಥ್ರೋ), ಭಾವನಾ ಜಾತ್ ಮತ್ತು ಪ್ರಿಯಾಂಕಾ ಗೋಸಸ್ವಾಮಿ (ರೇಸ್ ವಾಕಿಂಗ್), ಹಿಮಾ ದಾಸ್, ದ್ಯುತಿ ಚಾಂದ್, ಸ್ರಾಬಾಮಿ ನಂದಾ, ಎಂವಿ ಜಿಲಾನಾ ಮತ್ತು ಎನ್‍ಎಸ್‍ಸಿಮಿ (4-100ಮೀ. ರಿಲೆ).