Wednesday, September 17, 2025

Latest Posts

ಪೆನ್ಸಿಲ್​ ಕದ್ದಿದ್ದಕ್ಕೆ ಸ್ನೇಹಿತನ ಮೇಲೆ ದೂರು..!

- Advertisement -

ಆಂಧ್ರಪ್ರದೇಶ : ಕರ್ನೂಲು ಜಿಲ್ಲೆಯ ಪೆದ್ದಕಡಬೂರುನ ಹನುಮಂತು ಪೆನ್ಸಿಲ್​ ಕದ್ದಿದ್ದಕ್ಕೆ ಸ್ನೇಹಿತನ ಮೇಲೆ ದೂರು ನೀಡಲು ಪೊಲೀಸ್ ಠಾಣೆಗೆ ತೆರಳಿದ್ದಾನೆ. ಪೊಲೀಸರನ್ನು ಕಂಡರೇ ಎಲ್ಲರಿಗೂ ಭಯ.. ಪೊಲೀಸ್​ ಅವರ ಸಹವಾಸನೇ ಬೇಡ ಗುರೂ ಅಂತ ಅದೆಷ್ಟೋ ಮಂದಿ ಹೇಳಿರುವುದನ್ನು ನಾವು ಕೇಳಿದ್ದೇವೆ. ಆದರೆ ಇಲ್ಲೊಂದು ಕೇಸ್​ ದಾಖಲಾಗಿದೆ. ಆ ಕೇಸ್​ ಕಂಡು ಪೊಲೀಸರೇ  ಕಕ್ಕಾಬಿಕ್ಕಾಯಾಗಿದ್ದಾರೆ. ಅಷ್ಟಕ್ಕೂ ಏನದು ಕೇಸ್​? ಆ ದೂರು ಕೊಟ್ಟವರಾದರೂ ಯಾರೂ? ಈ ಎಲ್ಲ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

ಹೌದು, ಕರ್ನೂಲ್​ನಲ್ಲಿ ಇಂತಹ ವಿಚಿತ್ರ ದೂರು ದಾಖಲಾಗಿದೆ. 3ನೇ ಕ್ಲಾಸ್​ ಬಾಲಕನೊಬ್ಬ ತನ್ನ ಪೆನ್ಸಿಲ್​ ಕದ್ದಿದ್ದಕ್ಕೆ ತನ್ನ ಸ್ನೇಹಿತನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾನೆ. ಇದನ್ನು ಕೇಳಿದರೆ ನಿಮಗೆ ನಗು ಬರಬಹುದು, ಆದರೂ ಇದು ಸತ್ಯ. ಮೂರನೇ ತರಗತಿಯ ಬಾಲಕ ಹನುಮಂತು ತನ್ನ ಪೆನ್ಸಿಲ್ ಕಳ್ಳತನದ ಬಗ್ಗೆ ದೂರು ನೀಡಲು ಪೊಲೀಸ್ ಠಾಣೆಗೆ ತೆರಳಿ ಪ್ರಕರಣ ದಾಖಲಿಸುವಂತೆ  ಪೊಲೀಸರಿಗೆ ಒತ್ತಾಯಿಸಿದ್ದಾನೆ. ಕರ್ನೂಲು ಜಿಲ್ಲೆಯ ಪೆದ್ದಕಡಬೂರು ಮೂಲದ ವಿದ್ಯಾರ್ಥಿನಿ ಖಾಸಗಿ ಶಾಲೆಯಲ್ಲಿ ಹನುಮಂತು ಓದುತ್ತಿದ್ದಾನೆ. ಹೀಗೇ ಏಕಾಏಕಿ ಈ ಬಾಲಕ ಪೊಲೀಸ್​ ಠಾಣೆಗೆ ತೆರಳಿ ದೂರು ದಾಖಲಿಸುವಂತೆ  ಒತ್ತಾಯಿಸಿದ್ದನ್ನು ಕಂಡು ಪೊಲೀಸರೇ ಕಕ್ಕಾಬಿಕ್ಕಿಯಾಗಿದ್ದರು. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಎಲ್ಲೆಡೆ ಸಖತ್​ ವೈರಲ್ ಆಗುತ್ತಿದೆ.ಹನುಮಂತು ಮನೆಯ ಪಕ್ಕದ ಮನೆಯ ಸ್ನೇಹಿತ ಮತ್ತು ಸಹಪಾಠಿ ಒಂದೇ ಹೆಸರಿನ ಹನುಮಂತು ಮೇಲೆ ಪೆನ್ಸಿಲ್​ ಕದ್ದ ಆರೋಪವಿತ್ತು. ಪ್ರತಿದಿನ ತನ್ನ ಪೆನ್ಸಿಲ್ ಮತ್ತು ಕೆಲವೊಮ್ಮೆ ಹಣವನ್ನು ಸಹ ಕದಿಯುತ್ತಿದ್ದ ಎಂದು ಹನುಮಂತು ಆರೋಪಿಸಿದ್ದಾನೆ.  ಆತನನ್ನು ತನ್ನ ಸ್ನೇಹಿತರ ಸಹಾಯದಿಂದ ಕಳ್ಳನನ್ನು ಹಿಡಿದು ಠಾಣೆಗೆ ಕರೆದೊಯ್ದು ತನ್ನ ಪೆನ್ಸಿಲ್‌ಗಳು ಹೇಗೆ ಕಾಣೆಯಾಗಿದೆ ಎಂದು ಕಾನ್‌ಸ್ಟೆಬಲ್‌ಗೆ ವಿವರಿಸಿ ನ್ಯಾಯಕ್ಕಾಗಿ ಒತ್ತಾಯಿಸಿದ್ದಾನೆ . ಇದನ್ನು ಕೇಳುತ್ತಿದ್ದಂತೆ ಠಾಣೆಯಲ್ಲಿದ್ದ ಪೊಲೀಸರು ನಗೆಗಡಲಲ್ಲಿ ತೆಲಿದ್ದಾರೆ. ಪೊಲೀಸರು ಇಬ್ಬರಿಗೂ ರಾಜಿ ಮಾಡಿ ಕಳಿಸಿದರು . ಮತ್ತೆಂದೂ ಕಳ್ಳತನ ಮಾಡದಂತೆ ಹೇಳಿ ಕಳುಹಿಸಿದ್ದಾರೆ.

- Advertisement -

Latest Posts

Don't Miss