Koppala News: ಕೊಪ್ಪಳ :- ಕೊಪ್ಪಳ ಜಿಲ್ಲೆ ಗಿಣಿಗೇರಾ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಕನ್ನಡ ಶಿಕ್ಷಕಿ ನೇಮಕಾತಿಯಾಗಿ ಸುಮಾರು 32 ವರ್ಷಗಳ ಕಾಲ ಸರ್ಕಾರಿ ಪ್ರೌಢಶಾಲೆ ಗಿಣಿಗೇರಾ ಗ್ರಾಮದಲ್ಲಿ ಸೇವೆ ಸಲ್ಲಿಸಿ ಅಪಾರ ಶಿಷ್ಯ ಬಳಗವನ್ನ ಹೊಂದಿದ್ದು ಕನ್ನಡ ಮತ್ತು ಕನ್ನಡ ನಾಡು ನುಡಿಯ ಮೇಲಿನ ಅಭಿಮಾನದಿಂದ ಕನ್ನಡ ಶಿಕ್ಷಕಿಯಾಗಿ ಮುಂದುವರೆದು 32 ವರ್ಷಗಳ ಕಾಲಾ ಒಂದೇ ಶಾಲೆಯಲ್ಲಿ ಕನ್ನಡ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ವಯೋ ನಿವೃತ್ತಿಯನ್ನು ಹೊಂದುತ್ತಿರುವ ಸರ್ಕಾರಿ ಪ್ರೌಢಶಾಲೆ ಗಿಣಿಗೇರಾ ಗ್ರಾಮದ ಕನ್ನಡ ಶಿಕ್ಷಕಿ ಕಾಶಿಬಾಯಿ ಕೊಪ್ಪಳ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತು ಗಿಣಿಗೇರಾ ಹೋಬಳಿ ಘಟಕದ ವತಿಯಿಂದ ಅದ್ದೂರಿಯ ಅಭಿನಂದನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕನ್ನಡ ಶಿಕ್ಷಕಿ ಕಾಶಿಬಾಯಿ ಮುಖ್ಯೋಪಾಧ್ಯಾಯರಾಗಿ ಮುಂಬಡತ್ತಿ ಹೊಂದಿದ್ದರು ಮುಂಬಡ್ತಿಯನ್ನ ನಿರಾಕರಿಸಿ 32 ವರ್ಷಗಳ ಕಾಲ ಒಂದೇ ಶಾಲೆಯಲ್ಲಿ ಕನ್ನಡ ಶಿಕ್ಷಕಿಯಾಗಿಯೇ ಮುಂದುವರೆದು ಸೇವೆ ಸಲ್ಲಿಸಿ ನಿವೃತ್ತಿ ಹೊಂದುತ್ತಿರುವುದು ವಿಶೇಷ.
ಕನ್ನಡ ಶಿಕ್ಷಕಿ ಕಾಶಿಬಾಯಿಯ ಅಪಾರ ಶಿಷ್ಯ ಬಳಗ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಗಿಣಿಗೇರಾ ಹೋಬಳಿ ಘಟಕ ವತಿಯಿಂದ ನಿವೃತ್ತಿ ಹೊಂದುತ್ತಿರುವ ಶಿಕ್ಷಕಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಶಾಲು ಮತ್ತು ಬಾವುಟಗಳನ್ನು ಹಿಡಿದು ಹೂಗಳ ಅಭಿಷೇಕದ ಮೂಲಕ ಸ್ವಾಗತಿಸಿ ನಾಡಗೀತೆಯ ಹಾಡುವ ಮೂಲಕ ಅಭಿನಂದನ ಕಾರ್ಯಕ್ರಮವನ್ನು ಅದ್ದೂರಿಯಾಗಿ ಪ್ರಾರಂಭಿಸಲಾಯಿತು.
ನಿವೃತ್ತಿ ಮತ್ತು ಅಭಿನಂದನ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀಮದ್ ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠದ ಶ್ರೀ ಅಭಿನವ ಶ್ರೀಕಂಠ ಸ್ವಾಮಿಗಳು ಕಾರ್ಯಕ್ರಮದ ಅಧ್ಯಕ್ಷತೆ ಕೊಪ್ಪಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ರಾಮಚಂದ್ರ ಗೊಂಡಬಾಳ,ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ದೇವರಾಜ್ ಹಲಗೇರಿ ಮತ್ತು ಶಾಲೆಯ ಮುಖ್ಯ ಗುರುಗಳು ಮತ್ತು ಶಾಲಾ ಶಿಕ್ಷಕರು ಹಾಗೂ ಹಳೆಯ ವಿದ್ಯಾರ್ಥಿಗಳು ಮತ್ತು ಕಸಾಪ ತಾಲೂಕು ಘಟಕದ ಕಾರ್ಯದರ್ಶಿ ಉಪಸ್ಥಿತರಿದ್ದರು.




