Sunday, April 13, 2025

Latest Posts

ಚುನಾವಣೆಯಲ್ಲಿ ಗೆಲ್ಲಲು ಚಪ್ಪಲಿ ಏಟು ತಿಂದ ಕಾಂಗ್ರೆಸ್ ಅಭ್ಯರ್ಥಿ

- Advertisement -

National News: ಮಧ್ಯಪ್ರದೇಶ : ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಲು ಕಾಂಗ್ರೆಸ್ ಅಭ್ಯರ್ಥಿಯೊಬ್ಬರು ‘ಫಕೀರಾ ಬಾಬಾ’ನಿಂದ ಚಪ್ಪಲಿ ಏಟು ತಿನ್ನುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ರತ್ಲಾಮ್‌ನ ಕಾಂಗ್ರೆಸ್ ಅಭ್ಯರ್ಥಿ ಪರಸ್ ಸಕ್ಲೇಚಾ ಸ್ವಇಚ್ಚೆ ಮತ್ತು ಸಂತೋಷದಿಂದಲೇ ಫಕೀರ್ ಬಾಬಾನಿಂದ ಹೊಡೆಸಿಕೊಳ್ಳುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ.

ಫಕೀರಾ ಬಾಬಾ ಸ್ಥಳೀಯವಾಗಿ ದೇವಮಾನವ ಎಂದು ಖ್ಯಾತರಾಗಿದ್ದು, ಅವರಿಂದ ಚಪ್ಪಲಿ ಏಟು ತಿಂದರೆ ಒಳ್ಳೆಯದಾಗುತ್ತದೆ ಎಂಬ ಮನೋಭಾವದಿಂದ ಶಾಸಕ ಸಕ್ಲೇಜಾ, ತಾವೇ ಚಪ್ಪಲಿ ತಂದು ಬಾಬಾನಿಂದ ಹೊಡೆಸಿಕೊಂಡಿದ್ದಾರೆ.

ಈ ಫಕೀರ್ ಬಬಾಬಾ ಯಾರು?

ಕಾಂಗ್ರೆಸ್ ಅಭ್ಯರ್ಥಿಗೆ ಚಪ್ಪಲಿ ಮೂಲಕ ಆಶೀರ್ವಾದ ಮಾಡಿರುವ ವ್ಯಕ್ತಿ ಫಕೀರ್ ಆಗಿದ್ದು, ಅವರ ಹೆಸರು ಕಮಲ್ ರಾಝಾ. ಮ್ಹೌ ನೀಮಚ್ ರಸ್ತೆಯಲ್ಲಿ ತಿರುಗಾಡುತ್ತಾ ತನ್ನ ಬಳಿಗೆ ಬರುವ ಜನರಿಗೆ ಚಪ್ಪಲಿಯಿಂದ ಹೊಡೆದು ಆಶೀರ್ವಾದ ಮಾಡುತ್ತಾರೆ. ಅನೇಕ ಜನರು ತಮ್ಮ ದೂರುಗಳೊಂದಿಗೆ ಹೊಸ ಚಪ್ಪಲಿಗಳನ್ನು ತಂದು ಬಾಬಾಗೆ ನೀಡುತ್ತಾರೆ. ಅವುಗಳಿಂದಲೇ ಬಾಬಾ ಆಶೀರ್ವಾದ ಮಾಡುತ್ತಾರೆ ಎನ್ನಲಾಗಿದೆ.

ಭಾರತ ವಿಶ್ವಕಪ್‌ ಗೆದ್ದರೆ 100 ಕೋಟಿ ರೂ ಬಂಪರ್‌ ಬಹುಮಾನ!: ಆಸ್ಟ್ರೋಟಾಕ್‌ ಸಿಇಒ ಘೋಷಣೆ

ಇಸ್ರೇಲ್ ಪ್ರಧಾನಿಯನ್ನು ಗುಂಡಿಕ್ಕಿ ಕೊಲ್ಲಬೇಕು ಎಂದ ಕಾಂಗ್ರೆಸ್ ಸಂಸದ.

ತಲೆತಲಾಂತರದಿಂದ ಮಠದ ಭಕ್ತರಾದ ನಾವು ಮುರುಘಾ ಶರಣರ ಜೊತೆ ಇರುತ್ತೇವೆ; ಶಾಸಕ ವಿರೇಂದ್ರ ಪಪ್ಪಿ

- Advertisement -

Latest Posts

Don't Miss