Friday, July 11, 2025

Latest Posts

ಕಾಂಗ್ರೆಸ್ ಭಿನ್ನಮತ ಸರಿಮಾಡುವ , ಸಂಭಾಳಿಸುವ ನೇತೃತ್ವ ಇಲ್ಲ: ಪ್ರಹ್ಲಾದ್ ಜೋಶಿ

- Advertisement -

Political News: ಹುಬ್ಬಳ್ಳಿ: ಕಾಂಗ್ರೆಸ್ ಪಾರ್ಟಿಯಲ್ಲಿ ಎಲ್ಲವೂ ಸರಿಯಿಲ್ಲ. ಇಷ್ಟು ದೊಡ್ಡ ಪ್ರಮಾಣದಲ್ಲಿ ಭಿನ್ನಮತ ಆರಂಭವಾಗಿದೆ. ಬಿ.ಆರ್.ಪಾಟಿಲ್, ರಾಯರೆಡ್ಡಿ, ಸತೀಶ್ ಗುಂಪುಗಾರಿಕೆ ಈ ಎಲ್ಲಾ ಸಂಗತಿಗಳ‌ ನೋಡಿದ್ರೆ, ರಾಷ್ಟ್ರೀಯ ನಾಯಕತ್ವದ ಬೆದರಿಕೆ ಇಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆರೋಪಿಸಿದರು.

ನಗರದಲ್ಲಿಂದು ಮಾತನಾಡಿದ ಅವರು, ಕಾಂಗ್ರೆಸ್ ಭಿನ್ನಮತ ಸರಿಮಾಡುವ , ಸಂಬಾಳಿಸುವ ನೇತೃತ್ವ ಇಲ್ಲ ಎನ್ನುವುದು ತೋರಿಸುತ್ತದೆ. ಜಗಳ ಅತೀರೆಕಕ್ಕೆ ಹೋಗಿದೆ. ಇದು ಆಡಳಿತ ಮೇಲೆ ಪರಿಣಾಮ ತೀವ್ರವಾಗಿ ಬೀರಿದೆ.
ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಗುಂಪುಗಳ ಮಧ್ಯೆ ಹೊಂದಾಣಿಕೆ ಇಲ್ಲ. ಪರಿಸ್ಥಿತಿ ಅಯೋಮಯವಾಗಿದೆ. ಜನ ಬರೀ ಇವರ ಜಗಳ ನೋಡುವುದೆ ಆಗಿದೆ. ಯಾರ ಮತ್ತೆ ಮುಖ್ಯ ಮಂತ್ರಿ ಆಗಬೇಕು, ಸಿದ್ದರಾಮಯ್ಯವರನ್ನು ಯಾವ ಕೇಳಗೆ ಇಳಸಬೇಕೆ ಎಂಬ ಚರ್ಚೆ ಜೋರಾಗಿದೆ.ಶಶಿ ತರೂರ್ ಸಭೆಯಲ್ಲಿಯೂ ಸಹ ಸಿಎಂ ಬದಲಾವಣೆ ಬಗ್ಗೆ ಪ್ರಶ್ನೆ ಕೇಳಿದ್ದಾರೆ ಆದರೆ ಅವರು ಅದಕ್ಕೆ ಉತ್ತರ ನೀಡಿಲ್ಲ‌ಎಂದರು.

ರಾಜ್ಯದಲ್ಲಿ ಅಭಿವೃದ್ಧಿ ಕೆಲಸ ಸಂಪೂರ್ಣ ನಿಂತಿದೆ. ಭಾರತ ಸರ್ಕಾರದ ಸ್ಮಾರ್ಟ್ ಸಿಟಿ ಕಾಮಗಾರಿಗಳಿಗೂ ಅನುದಾನ ನೀಡುತ್ತಿಲ್ಲ. ಮೇಲಿಂದ ಹೇಳಿದ್ದಾರೆ ಅದಕ್ಕೆ ಪೆಂಡಿಂಗ್ ಅಂತ ಅಧಿಕಾರಿಗಳು ನೆಪ ಹೇಳುತ್ತಿದ್ದಾರೆ.
ಮೇಲಿಂದ ಅಂದ್ರೆ ಯಾರು ಯಾಕೆ ದುಡ್ಡು ಕೊಡತ್ತಿಲ್ಲ. ಪರಿಶೀಲನೆ ಮಾಡಿ ಗುತ್ತಿಗೆದಾರಿಗೆ ಹಣ ನೀಡಲಿ ಎಂದರು.

ಆರು ತಿಂಗಳಲ್ಲೇ ಭ್ರಷ್ಟಾಚಾರ ತಾಂಡವಾಡುತ್ತಿದೆ. ಬಿಜೆಪಿಗೆ 40% ಅಂತಿದ್ದರೂ ಆದರೆ ಕಾಂಗ್ರೆಸ್ ಪರಿಸ್ಥಿತಿ ಬರೀ‌ ಆರು ತಿಂಗಳಲ್ಲಿ ಭೀಕರವಾಗಿದೆ. ನೆಲ ಕಚ್ಚುವ ಪರಿಸ್ಥಿತಿ ತಲುಪಲಿದೆ ಎಂದರು. ಡಿಕೆ ಶಿವಕುಮಾರ್ ಮುನ್ನಡೆ ಅಥವಾ ಹಿನ್ನಡೆ ಅದು ಅವರಿಗೆ ಬಿಟ್ಟ ವಿಚಾರ. ಇದರ ಅರ್ಥ ಕೋರ್ಟ್ ಒಪ್ಪಿದೆ ಅಂತಲ್ಲಾ. ಆದರೆ ತನಿಖೆ ಮುಂದುವರೆಯಲಿದೆ ಎಂದರು.

ಬೆಳೆ ವಿಮೆ ಭಾರತ ಸರ್ಕಾರದ್ದು .ಆದರೆ ಬೆಳೆ ವಿಮೆ ಏಜೆನ್ಸಿ, ಪರಿಹಾರದ ಪ್ರಮಾಣ, ಎಲ್ಲವನ್ನೂ ನಿರ್ಧಾರ ಮಾಡುವುದು ರಾಜ್ಯ ಸರ್ಕಾರ. ಹೀಗಾಗಿ ತಪ್ಪಾಗಿದೆ ಅದನ್ನು ಮರು ಪರಿಶೀಲನೆ ಮಾಡುತ್ತವೆ. ಹುಬ್ಬಳ್ಳಿ ವಿಮಾನ ನಿಲ್ದಾಣ ಅಭಿವೃದ್ಧಿ ಮೊದಲಿನಿಂದಲೂ ಚಿಂತನೆಯಿದೆ. ಈಗ 324 ಕೋಟಿ ಯೋಜನೆಯ ಪ್ಲಾನ್ ಸಿದ್ದವಾಗಿದೆ ಇದಕ್ಕೆ ಅನುಮೋದನೆ ಪಡೆದು ಟೆಂಡರ್ ಕರೆಯಲಾಗುತ್ತದೆ ಎಂದರು.

ಜಲಜೀವನ್ ಮಿಷನ್ ಕಾಮಗಾರಿಯಲ್ಲಿ ಕಳಪೆ ಪ್ರದರ್ಶನ: ಸಚಿವರ ಅಸಮಾಧಾನ

ನಮ್ಮ ಎಲ್ಲರ ವಿರುದ್ದನೂ ಕೇಸ್ ಮಾಡಿಬಿಡಿ: ಸಂಸದ ಶಶಿ ತರೂರ್

ರಜತ್ ಗೆ ಟಿಕೇಟ್ ನೀಡುವಂತೆ ಹುಬ್ಬಳ್ಳಿ ಕಾಂಗ್ರೆಸ್ ಮುಖಂಡರಿಂದ ಸತೀಶ್ ಜಾರಕಿಹೊಳಿ ಅವರಿಗೆ ಮನವಿ

- Advertisement -

Latest Posts

Don't Miss