Thursday, May 30, 2024

Latest Posts

ಇಂಥ ಆದೇಶ ನೀಡಿರುವ ಕಾಂಗ್ರೆಸ್ ವಿಕೃತ ಮನಸ್ಥಿತಿಯ ಪ್ರತೀಕ: ಸಂಸದ ತೇಜಸ್ವಿ ಸೂರ್ಯ

- Advertisement -

Political News: ಕಲಬುರಗಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಯುವ ಬ್ರಿಗೇಡ್‌ನ ಚಕ್ರವರ್ತಿ ಸೂಲಿಬೆಲೆ ಅವರು ಭಾಷಣ ಮಾಡಬೇಕಿತ್ತು. ಆದರೆ ಅವರು ಕೋಮು ಪ್ರಚೋದನಕಾರಿ ಭಾಷಣ ಮಾಡುತ್ತಾರೆಂದು ಆರೋಪಿಸಿ, ಕಾಂಗ್ರೆಸ್ ಚಕ್ರವರ್ತಿ ಸೂಲಿಬೆಲೆ ಅವರಿಗೆ, ಕಲಬುರಗಿ ಪ್ರವೇಷ ನಿಷೇಧಿಸಿದ್ದಾರೆ. ಈ ಕಾರಣಕ್ಕೆ ಸಂಸದ ತೇಜಸ್ವಿ ಸೂರ್ಯ ಟ್ವೀಟ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ.

ಈ ದೇಶದ ಸಂವಿಧಾನವು ಜನರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ನೀಡಿದೆ. ಪಾಕಿಸ್ತಾನ್ ಜಿಂದಾಬಾದ್ ನಂತಹ ದೇಶವಿರೋಧಿ ಹೇಳಿಕೆ & ಕೃತ್ಯಗಳನ್ನು ಸಮರ್ಥಿಸುವ ಮಟ್ಟಕ್ಕೆ ಇಳಿದಿರುವ ಕಾಂಗ್ರೆಸ್ , ಮತ್ತೊಂದೆಡೆ ರಾಷ್ಟ್ರೀಯ ಚಿಂತನೆಗಳಿಗೆ & ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ತಡೆಯೊಡ್ಡುವ ಕಾರ್ಯಕ್ಕೆ ‘ಕೈ’ ಹಾಕುತ್ತಿದೆ. ಭಾರತ ಪ್ರಜಾಪ್ರಭುತ್ವ ರಾಷ್ಟ್ರವೇ ವಿನಃ ಕಾಂಗ್ರೆಸ್, ರಾಹುಲ್ ಗಾಂಧಿ ಕುಟುಂಬದ ಜಹಾಗೀರು ಅಲ್ಲ.ಇಲ್ಲಿ ಭಾರತದ ಸಂವಿಧಾನಕ್ಕೆ ಅನುಗುಣವಾಗಿ ನಡೆದುಕೊಳ್ಳಬೇಕೆ ವಿನಃ ತಮ್ಮ ಪ್ರೀತಿಯ ನೆರೆ ರಾಷ್ಟ್ರ ಪಾಕಿಸ್ತಾನದ ಅಣತಿಯಂತೆ ಅಲ್ಲ ಎಂದು ತೇಜಸ್ವಿ ಸೂರ್ಯ .

ನಮೋ ಬ್ರಿಗೇಡ್ ಮೂಲಕ ರಾಷ್ಟ್ರೀಯ ವಿಚಾರಧಾರೆಗಳನ್ನು ಜನರಿಗೆ ತಲುಪಿಸುತ್ತಿರುವ ಶ್ರೀ ಚಕ್ರವರ್ತಿ ಸೂಲಿಬೆಲೆ ರವರಿಗೆ ಕಲಬುರ್ಗಿ ಜಿಲ್ಲಾ ಪ್ರವೇಶ ನಿಷೇಧಿಸಿ ಹೊರಡಿಸಿರುವ ಆದೇಶ ಕಾಂಗ್ರೆಸ್ ಪಕ್ಷದ ವಿಕೃತ ಮನಸ್ಥಿತಿಯ ಪ್ರತೀಕ. ಸಾರ್ವಜನಿಕರ ಅಭಿವ್ಯಕ್ತಿ ಸ್ವಾತಂತ್ರ್ಯದ ವಿರುದ್ಧ ಇದೊಂದು ದಮನಕಾರಿ ಧೋರಣೆಯಾಗಿದ್ದು, ಸರ್ಕಾರದ ಮನಸ್ಥಿತಿ, ತುಷ್ಟೀಕರಣ ನೀತಿ ಯಾವ ಮಟ್ಟಕ್ಕೆ ಇಳಿದಿದೆ ಎಂಬುದನ್ನು ತೋರಿಸುತ್ತದೆ. ಸೈದ್ಧಾಂತಿಕವಾಗಿ ಎದುರಿಸಲಾಗದೇ, ಪ್ರಜಾಪ್ರಭುತ್ವ ವಿರೋಧಿ, ಸಂವಿಧಾನ ವಿರೋಧಿ ಕ್ರಮಗಳಿಗೆ ಮುಂದಾಗಿರುವ ರಾಜ್ಯ ಸರ್ಕಾರಕ್ಕೆ ನಾಚಿಕೆಯಾಗಬೇಕು. ಕೂಡಲೇ ಈ ಆದೇಶವನ್ನು ಹಿಂಪಡೆದು, ಉದ್ದೇಶಿತ ಕಾರ್ಯಕ್ರಮ ನಡೆಸಲು ಅವಕಾಶ ಕಲ್ಪಿಸಬೇಕು ಎಂದು ತೇಜಸ್ವಿ ಸೂರ್ಯ ಆಗ್ರಹಿಸಿದ್ದಾರೆ.

ಚಿಕಿತ್ಸೆ ಫಲಿಸದೇ ನಟ, ಅಧಿಕಾರಿ ಕೆ.ಶಿವರಾಮ್ ನಿಧನ: ಗಣ್ಯರ ಸಂತಾಪ

ಕಾಂಗ್ರೆಸ್ ಹಸಿವು ಮುಕ್ತ ನಾಡನ್ನು, ಹಸಿವು ಮುಕ್ತ ದೇಶವನ್ನು ನಿರ್ಮಿಸಲು ಹೊರಟಿದೆ: ಸಿಎಂ ಸಿದ್ದರಾಮಯ್ಯ

ದೇವಾಲಯಗಳ ಹುಂಡಿ ಲೂಟಿಮಾಡಲು ಕಾಂಗ್ರೆಸ್ ಹೊರಟಿದೆ: ಪ್ರೀತಂಗೌಡ

- Advertisement -

Latest Posts

Don't Miss