Saturday, April 12, 2025

Latest Posts

ಕಾಂಗ್ರೆಸ್ ಸರ್ಕಾರ ಹಾಸನದ ರೈತರಿಗೂ ದ್ರೋಹ ಬಗೆದಿದೆ: ಮಾಜಿ ಶಾಸಕ ಪ್ರೀತಂಗೌಡ

- Advertisement -

Political News: ಬಿಜೆಪಿ ನಾಯಕ ಪ್ರೀತಂಗೌಡ ಕಾಂಗ್ರೆಸ್ ಮತ್ತು ಸಿಎಂ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿದ್ದು, ಸ್ಟ್ರಾಂಗ್ ಎಂದುಕೊಂಡಿರುವ ಸಿಎಂ ಸಿದ್ದರಾಮಯ್ಯ ಅವರೇ, ತಮಿಳುನಾಡಿನ ನಿಮ್ಮ ಮಿತ್ರ ಪಕ್ಷದ ಸ್ಟಾಲಿನ್ ಅವರು I.N.D.I ಮೈತ್ರಿಕೂಟ ಗೆದ್ದರೆ ಮೇಕೆದಾಟು ಅಣೆಕಟ್ಟು ನಿರ್ಮಾಣ ಮಾಡಲು ಬಿಡುವುದಿಲ್ಲ ಎಂದು ತಮ್ಮ ಪ್ರಣಾಳಿಕೆಯಲ್ಲೇ ಘೋಷಿಸಿದ್ದಾರೆ. ಮೇಕೆದಾಟುವಿನ ಹೆಸರಲ್ಲಿ ಊರೂರು ಸುತ್ತಿ ಜಾತ್ರೆ ಮಾಡಿದ ಕಾಂಗ್ರೆಸ್ ನಾ(ಲಾ)ಯಕರ ಬಾಯಿ ಈಗ ಬಂದ್ ಆಗಿದೆ ಎಂದು ಕಿಡಿಕಾರಿದ್ದಾರೆ.

ಕಾವೇರಿಯನ್ನು ಚುನಾವಣಾ ಸರಕು ಮಾಡಿಕೊಂಡ ಕಾಂಗ್ರೆಸ್ ಮೇಕೆದಾಟಿನ ಹೆಸರಲ್ಲಿ ಕನ್ನಡಿಗರ ಭಾವನೆಯೊಂದಿಗೆ ಆಟವಾಡಿ ಈಗ ಮಾಡಿದ್ದು ಮಾತ್ರ ಮಹಾ ಮೋಸ. I.N.D.I ಮೈತ್ರಿಕೂಟದ ರಾಜಕೀಯ ಲಾಭಕ್ಕಾಗಿ ಕನ್ನಡಿಗ ರೈತರ ಕಣ್ಣೀರಿಗೂ ಬೆಲೆಕೊಡದೆ ಕಾವೇರಿಯನ್ನು ತಮಿಳುನಾಡಿಗೆ ಹರಿಸಿದ ರಾಜ್ಯ ಕಾಂಗ್ರೆಸ್ ಸರ್ಕಾರ ಈಗ ರಾಜ್ಯದಲ್ಲಿ ಕುಡಿಯಲು ಕೂಡ ನೀರಿಲ್ಲದಂತೆ ಮಾಡಿದೆ. ಇದಕ್ಕಾಗಿ ನಮ್ಮ ಹಾಸನದ ಹೇಮಾವತಿಯನ್ನೂ ಬರಿದು ಮಾಡಿ ನಮ್ಮ ಹಾಸನದ ರೈತರಿಗೂ ದ್ರೋಹ ಬಗೆದಿದೆ.

ನೀರಾವರಿ ಸಚಿವರಾದ ಡಿಸಿಎಂ ಡಿ.ಕೆ.ಶಿವಕುಮಾಾರ್ ಅವರೇ ಮೇಕೆದಾಟುವಿಗಾಗಿ ತಮ್ಮ ಪಾದಯಾತ್ರೆಯೆಂಬ ಜಾತ್ರೆ ಯಾವಾಗ ಶುರು ಮಾಡುತ್ತೀರಿ? ಕಾಂಗ್ರೆಸ್ಸಿಗರೇ, ರಾಜಕೀಯದ ಆಟಕ್ಕೆ ನಮ್ಮ ರಾಜ್ಯದ ಜನತೆಯ ಬದುಕನ್ನು ಪಣಕ್ಕಿಟ್ಟಿದ್ದಕ್ಕೆ ಕನ್ನಡಿಗರೆಂದಿಗೂ ಕ್ಷಮಿಸುವುದಿಲ್ಲ ಎಂದು ಪ್ರೀತಂಗೌಡ ಅಸಮಾಧಾನ ಹೊರಹಾಕಿದ್ದಾರೆ.

ರಾಹುಲ್ ಗಾಂಧಿ ಪ್ರಧಾನಿಯಾಗುವವರೆಗೂ ಈ ಅಂಗಡಿಯಲ್ಲಿ ಸಾಲ ನೀಡಲಾಗುವುದಿಲ್ಲವಂತೆ..

ಹಾವೇರಿ ಬಿಜೆಪಿ ಅಭ್ಯರ್ಥಿ ಬದಲಾವಣೆ ವದಂತಿ

ನೀವು ಯಾವ ಸೀಮೆ ‘ಸ್ಟ್ರಾಂಗ್’ ಸಿಎಂ ಬಿಡ್ರೀ: ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರೀತಂಗೌಡ ಕಿಡಿ..

- Advertisement -

Latest Posts

Don't Miss