Sunday, April 20, 2025

Latest Posts

ಉಗ್ರರ ವಿರುದ್ಧ ನಿಮ್ಮ ಹೆಜ್ಜೆ ಕ್ರಾಂತಿಕಾರಿಯಾಗಿದೆ : ಮೋದಿಗೆ ಟ್ರಂಪ್‌ ಸಪೋರ್ಟ್‌

- Advertisement -

International News: ಮುಂಬೈ ದಾಳಿಯ ಸಂಚುಕೋರ ತಹವ್ವೂರ್‌ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸುವ ವಿಚಾರದಲ್ಲಿ ಬೆಂಬಲವಾಗಿ ನಿಂತಿದ್ದ ಅಮೆರಿಕ ಇದೀಗ ಮತ್ತೊಮ್ಮೆ ತನ್ನ ನಿಲುವನ್ನು ದೃಢಪಡಿಸಿದೆ. ಅಲ್ಲದೆ ಭಯೋತ್ಪಾದನೆ ನಿಗ್ರಹದ ವಿಚಾರದಲ್ಲಿ ಹಾಗೂ ಆರೋಪಿಗಳಿಗೆ ಶಿಕ್ಷೆ ನೀಡುವುದರಲ್ಲಿ ಮಹತ್ವದ ಕ್ರಾಂತಿಕಾರಿ ಹೆಜ್ಜೆ ಇಟ್ಟಿದೆ ಎಂದು ಅಭಿನಂದಿಸಿದೆ.

ಇನ್ನೂಈ ಕುರಿತು ಮಾತನಾಡಿರುವ ಅಮೆರಿಕ ವಿದೇಶಾಂಗ ಇಲಾಖೆಯ ವಕ್ತಾರೆ ಟ್ಯಾಮಿ ಬ್ರೂಸ್‌, ಉಗ್ರರ ವಿರುದ್ಧದ ಕಾರ್ಯಾಚರಣೆ ಹಾಗೂ ಪ್ರಸ್ತುತ ರಾಣಾನ ವಿಚಾರದಲ್ಲಿ ಭಾರತ ಇಟ್ಟಿರುವ ಹೆಜ್ಜೆಯನ್ನು ಶ್ಲಾಘಿಸಿದ್ದಾರೆ. ಅಲ್ಲದೆ ಜಾಗತಿಕ ಮಟ್ಟದಲ್ಲಿಯೇ ಆತಂಕಕ್ಕೆ ಕಾರಣವಾಗಿದ್ದ ಮುಂಬೈ ದಾಳಿಯಲ್ಲಿ ಆರು ಜನ ಅಮೆರಿಕನ್ನರು ಒಳಗೊಂಡಂತೆ 166 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಕೆಲವರು ಇದನ್ನು ನೆನಪಿಸಿಕೊಳ್ಳದಿರಬಹುದು ಆದರೆ ಆರೋಪಿಗಳಿಗೆ ಶಿಕ್ಷೆ ನೀಡುವಲ್ಲಿ ರಾಣಾ ಹಸ್ತಾಂತರವು ಒಳ್ಳೆಯ ಕಾರ್ಯವಾಗಿದೆ ಎಂದು ಹೇಳಿದ್ದಾರೆ.

ಭಾರತಕ್ಕೆ ನಮ್ಮ ಬೆಂಬಲ..!

ಅಲ್ಲದೆ ಜಾಗತಿಕವಾಗಿ ತಲೆ ಎತ್ತಿರುವ ಭಯೋತ್ಪಾದನೆ ಹಾಗೂ ಉಗ್ರವಾದ ಹತ್ತಿಕ್ಕಲು ಅಮೆರಿಕ ಹಾಗೂ ಭಾರತ ಜಂಟಿಯಾಗಿ ಹೋರಾಡಲಿವೆ. ಈ ದಾಳಿಗಳಿಗೆ ಕಾರಣರಾದವರಿಗೆ ಶಿಕ್ಷೆ ನೀಡುವುದನ್ನು ಖಚಿತಪಡಿಸಿಕೊಳ್ಳಲು ಭಾರತದ ಪ್ರಯತ್ನಗಳನ್ನು ಅಮೆರಿಕ ದೀರ್ಘಕಾಲದಿಂದ ಬೆಂಬಲಿಸಿದೆ ಮತ್ತು ಅಧ್ಯಕ್ಷ ಟ್ರಂಪ್ ಹೇಳಿದಂತೆ, ಜಾಗತಿಕ ಭಯೋತ್ಪಾದನೆಯ ಪಿಡುಗನ್ನು ಎದುರಿಸಲು ಅಮೆರಿಕ ಮತ್ತು ಭಾರತ ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತವೆ ಎಂದು ತಿಳಿಸಿದ್ದಾರೆ.

ರಾಣಾ ಭಾರತಕ್ಕೆ ಹಸ್ತಾಂತರಿಸಿದ್ದ ಅಮೆರಿಕ..

ಇನ್ನೂ ಕಳೆದ ಏಪ್ರಿಲ್‌ 10 ರಂದು ಮುಂಬೈ ದಾಳಿಯ ರಕ್ತಪಿಪಾಸು ತಹವ್ವೂರ್‌ ರಾಣಾನನ್ನು ಸುದೀರ್ಘ ಕಾನೂನು ಹೋರಾಟದ ಬಳಿಕ ಭಾರತಕ್ಕೆ ಎಳೆದು ತರಲಾಗಿದೆ. ಲಾಸ್‌ ಏಂಜಲೀಸ್‌ಗೆ ತೆರಳಿದ್ದ ಭಾರತದ ಎನ್‌ಐಎ ಅಧಿಕಾರಿಗಳ ತಂಡವು ಪಾತಕಿಯ ಕೈಗೆ ಕೋಳ ಹಾಕಿ ವಿಮಾನ ಹತ್ತಿಸಿತ್ತು. ಅಲ್ಲಿಂದ ನೇರವಾಗಿ ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದ ಅವನನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿತ್ತು. ಬಳಿಕ ಅಲ್ಲಿಂದ ಪಟಿಯಾಲ ಹೌಸ್‌ನಲ್ಲಿರುವ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ತಡರಾತ್ರಿಯವರೆಗೂ ವಾದ – ಪ್ರತಿವಾದಗಳನ್ನು ಆಲಿಸಿದ್ದ ನ್ಯಾಯಮೂರ್ತಿ ಅವರು ಬಳಿಕ ಎನ್‌ಐಎ ಮನವಿಯಂತೆ 18 ದಿನಗಳ ಕಾಲ ವಿಚಾರಣೆಗಾಗಿ ಅಧಿಕಾರಿಗಳ ವಶಕ್ಕೆ ಒಪ್ಪಿಸಿದ್ದರು. ಅದರಂತೆ ಎನ್‌ಐಎ ಹಂತಕ ರಾಣಾನಿಗೆ ಫುಲ್‌ ಡ್ರಿಲ್‌ ಮಾಡಿ ವಿಚಾರಣೆ ಮುಂದುವರೆಸಿದೆ.

ಉಗ್ರರ ಕೃತ್ಯ ಹೊಗಳಿದ್ದ ಪಾತಕಿ..

ಇನ್ನೂ ತಮ್ಮ ಕೃತ್ಯಗಳನ್ನು ಶ್ಲಾಘಿಸಿದ್ದ ರಾಣಾ, ಭಾರತೀಯರು ಆ ದಾಳಿಗೆ ಅರ್ಹರಾಗಿದ್ದರು. ಅಲ್ಲದೆ ದಾಳಿಯಲ್ಲಿ ಸತ್ತವರಿಗೆ ಪಾಕ್‌ನ ಅತ್ಯುನ್ನತ ಪ್ರಶಸ್ತಿ ನೀಡಬೇಕು ರಾಣಾ ಹೇಳಿದ್ದ ಎಂದು ಅಮೆರಿಕದ ನ್ಯಾಯಾಂಗ ಇಲಾಖೆಯು ತಿಳಿಸಿದೆ. ದಾಳಿ ಬಳಿಕ ರಾಣಾ, ಸಹಚರ ಹೆಡ್ಲಿ ಉದ್ದೇಶಿಸಿ ಭಾರತೀಯರು ಇದಕ್ಕೆ ಅರ್ಹರಾಗಿದ್ದರು ಅಂತ ಹೇಳಿದ್ದ ಎಂದು ಇಲಾಖೆಯು ಹೇಳಿಕೆಯಲ್ಲಿ ತಿಳಿಸಿದೆ.

- Advertisement -

Latest Posts

Don't Miss