Monday, September 9, 2024

Latest Posts

Arvind Bellad : ಹಿಂದೂಗಳ ಹಬ್ಬ ಬಂದಾಗಲೇ ಕಾಂಗ್ರೆಸ್ ಸರ್ಕಾರಕ್ಕೆ ಕಾನೂನು ನೆನಪಾಗುತ್ತೇ: ಶಾಸಕ ಬೆಲ್ಲದ ಕಿಡಿ

- Advertisement -

ಹುಬ್ಬಳ್ಳಿ: ಕಾಂಗ್ರೆಸ್ ಗೆ ಹಿಂದುಗಳ ಹಬ್ಬ ಆಚರಣೆ ಬಂದರೆ ಕಾನೂನುಗಳು ನೆನಪಾಗುತ್ತವೆ. ಗಣಪತಿ ಹಬ್ಬದ ಪ್ರಸಾದಕ್ಕೆ FSSAI ಅನುಮತಿ ಕಡ್ಡಾಯ ಮಾಡಿದೆ ಎಂದು ಹುಬ್ಬಳ್ಳಿಯಲ್ಲಿ ವಿಧಾನಸಭೆ ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ ಕಿಡಿ ಕಾರಿದರು.

ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಮುಸ್ಲಿಂ ಹಬ್ಬ ಹರಿದನಗಳ ಸಂದರ್ಭದಲ್ಲಿ ಇಂತಹ ಕಾನೂನು ಸರ್ಕಾರಕ್ಕೆ ನೆನಪಿಗೆ ಇರುವುದಿಲ್ಲ. ಹಿಂದೂಗಳ ಹಬ್ಬ ಹರಿದಿನ ಸಂಸ್ಕ್ರತಿ ಹತ್ತಿಕುವ ವ್ಯವಸ್ಥಿತ ಸಂಚು ಈ ಸರ್ಕಾರ ಮಾಡುತ್ತಿದೆ. ರಾಜ್ಯ ಕಾಂಗ್ರೆಸ್ ಸರ್ಕಾರದ ಈ ನಡೆ ಸರಿಯಲ್ಲ ಎಂದರು.

ಕಾಂಗ್ರೆಸ ಹಿಂದೋ ವಿರೋಧಿ ನೀತಿಗಳಿಂದಲೇ ಜನರ ವಿಶ್ವಾಸ ಕಳೆದುಕೊಳ್ಳುತ್ತಿದೆ. ಈಗಾಗಲೇ ಇದಕ್ಕೆ ಜನ ಲೋಕಸಭೆಯಲ್ಲಿ ಉತ್ತರ ನೀಡಿದ್ದಾರೆ.ಒಂದು ಕಡೆ ಹಗರಣ ಮತ್ತೊಂದು ಕಡೆ ಹಿಂದು ವಿರೋಧಿ ನೀತಿಯಿಂದ ಜನ ಬೇಸತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

- Advertisement -

Latest Posts

Don't Miss