Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮಹೇಶ್ ಟೆಂಗಿನಕಾಯಿ ಮಾತನಾಡಿದ್ದು, ರಾಜ್ಯದಲ್ಲಿ ಕಾಂಗ್ರೆಸ ಅಧಿಕಾರಕ್ಕೆ ಬಂದು ಒಂದೇ ವರ್ಷ ಆಗಿದೆ. ಒಂದೇ ವರ್ಷದಲ್ಲಿ ರಾಜ್ಯದ ಆರ್ಥಿಕತೆಯನ್ನು ಕಾಂಗ್ರೆಸ್ ದಿವಾಳಿ ಮಾಡಿಟ್ಟಿದೆ ಎಂದು ಕಿಡಿ ಕಾರಿದ್ದಾರೆ.
ಪ್ರೀ ಗ್ಯಾರಂಟಿ ನೀಡುವುದಾಗಿ ಹೇಳಿಕೊಂಡು ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಆದರೆ ಗ್ಯಾರಂಟಿ ನಿರ್ವಹಣೆಗೆ ಈಗ ಬೆಲೆಗಳ ಏರಿಕೆ ಮಾಡುತ್ತಿದೆ. ಪೆಟ್ರೋಲ್ ಡಿಸೇಲ್ ಆಯಿತು, ಈಗ ಹಾಲಿನ ದರ ಏರಿಕೆ ಮಾಡಿದ್ದಾರೆ. ಈ ಹಿಂದೆ ಬಸ್ ದರ, ಪ್ರಾಪರ್ಟಿ ನೋಂದಣಿ ಶುಲ್ಕ ಸೇರಿ ವಿದ್ಯುತ್ ದರ ಏರಿಸಿದರು. ಅಬಕಾರಿ ಇಲಾಖೆಯಲ್ಲಿ ಮದ್ಯದ ದರ ಏರಿಸಿದ್ದಾರೆ. ಕಳೆದೊಂದು ವರ್ಷದಿಂದ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ ಅನ್ನುವುದು ಸ್ಪಷ್ಟ. ಚುನಾವಣೆಗೋಸ್ಕರ್ ಗ್ಯಾರಂಟಿ ಮಾಡಿರುವುದಾಗಿ ಅವರ ಪಕ್ಷದವರೇ ಹೇಳಿದ್ದಾರೆ. ಆದರೆ ಚುನಾವಣೆಯಲ್ಲಿ ಗ್ಯಾರಂಟಿ ಕೈ ಹಿಡಿಲಿಲ್ಲ ಎಂದು ಕಾಂಗ್ರೆಸ್ನವರೇ ಹೇಳಿದ್ದಾರೆ. ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ದುಡ್ಡಿಲ್ಲದಿರುವುದು ಖೇದಕರ ಸಂಗತಿ.
ಹಾಲು, ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯಿಂದ ಉಳಿದ ಬೆಲೆಗಳ ಮೇಲೆ ಪರಿಣಾಮ ಬೀರುತ್ತದೆ. ಒಂದು ಕೈಯಲ್ಲಿ 10 ರೂ. ಕೊಟ್ಟು ಇನ್ನೊಂದು ಕೈಯಿಂದ 25 ಕಸಿಯುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ಹಾಲಿನ ದರ ಏರಿಕೆ ಸಿಎಂ ಅವರಿಗೆ ಗೊತ್ತಿದೆ. ಚಿಕ್ಕ ಚಿಕ್ಕ ಮಕ್ಕಳು ಹಾಲು ಕುಡಿತಾರೆ. ಅದರ ಮೇಲೂ ಸಿದ್ದರಾಮಯ್ಯವರ ಸರ್ಕಾರ ಕಣ್ಣು ಹಾಕಿದೆ. ಮಕ್ಕಳು ಹಾಲು ಕುಡಿಯಲು ಹಿಂದೆ ಮುಂದೆ ನೋಡುವ ಸ್ಥಿತಿಯನ್ನು ಕಾಂಗ್ರೆಸ್ ಸರ್ಕಾರ ತಂದೊಡ್ಡಿದೆ. ಕಾಂಗ್ರೆಸ್ನವರು ಬೆಲೆ ಏರಿಕೆಯಲ್ಲಿ ಬ್ಯುಸಿನೆಸ್ ಟ್ರಕ್ಸ್ ಬಳಸುತ್ತಿದ್ದಾರೆ. ಗ್ಯಾರಂಟಿ ಮುಂದಿಟ್ಟುಕೊಂಡು ಕಾಂಗ್ರೆಸ್ ಸರ್ಕಾರ ರಾಜ್ಯದ ಜನಕ್ಕೆ ಮೋಸ ಮಾಡುತ್ತಿದೆ. ರಾಜ್ಯದ ಜನತೆಗೆ ಬೆಲೆ ಏರಿಕೆ ಭಾಗ್ಯವನ್ನು ಸಿದ್ದರಾಮಯ್ಯನವರ ನೀಡುತ್ತಿದ್ದಾರೆ. ಬೆಲೆ ಏರಿಕೆ ಬರುವ ದಿನಗಳಲ್ಲಿಯು ಮುಂದುವರೆಸುತ್ತಾರೆ ಎಂದು ಮಹೇಶ್ ಟೆಂಗಿನಕಾಯಿ ಕಿಡಿಕಾರಿದ್ದಾರೆ.
ಗ್ಯಾರಂಟಿ ಹಾಗೂ ಅಭಿವೃದ್ಧಿ ಯೋಜನೆಗಳಿಗಾಗಿ ಬೆಲೆ ಏರಿಕೆ ಅನಿವಾರ್ಯ ಎಂಬ ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿಕೆಗೆ ಪ್ರತಿಕ್ರಿಯಿಸಿದ ಟೆಂಗಿನಕಾಯಿ, ಧಾರವಾಡ ಜಿಲ್ಲಾ ಉಸ್ತವಾರಿ ಸಚಿವರೇ ಗ್ಯಾರಂಟಿ ನಿರ್ವಹಣೆಗೆ ಬೆಲೆ ಏರಿಕೆ ಆಗಿದೆ ಎಂದಿದ್ದಾರೆ. ರಾಜ್ಯದಲ್ಲಿ ನಿಮಗೆ ಗ್ಯಾರಂಟಿ ಘೋಷಣೆ ಮಾಡಲು ಕೇಳುವವರು ಯಾರು ..? ಕಾಂಗ್ರೆಸನವರುಗೆ ರಾಜ್ಯದ ಜನ ಫ್ರೀ ಕೋಡಿ ಎಂದು ಕೇಳಿರಲಿಲ್ಲ. ಕಾಂಗ್ರೆಸ್ ತನ್ನ ಅಧಿಕಾರಕ್ಕಾಗಿ ಗ್ಯಾರಂಟಿ ಘೋಷಣೆ ಮಾಡಿತ್ತು. ಈ ಅದರ ಹೊರೆ ಜನಗಳ ಮೇಲೆಯೇ ಹಾಕುತ್ತಿದ್ದಾರೆ. ಬೆಲೆಗಳ ಏರಿಕೆಯಿಂದ ಜನತೆಗೆ ಎಷ್ಟು ಕಷ್ಟ ಆಗುತ್ತಿದೆ ಎಂಬುವುದು ಇವರು ಅರಿತುಕೊಳ್ಳಬೇಕು. ಜನ ಎಲ್ಲವನ್ನೂ ಗಮನಿಸುತ್ತಿದ್ದಾರೆ ಎಂದು ಮಹೇಶ್ ಟೆಂಗಿನಕಾಯಿ ಹೇಳಿದ್ದಾರೆ.

