Hubli News: ಹುಬ್ಬಳ್ಳಿಯ ನೇಹಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ತೇಜಸ್ವಿ ಸೂರ್ಯ ಆಕ್ರೋಶ ಹೊರಹಾಕಿದ್ದಾರೆ. ಹುಬ್ಬಳ್ಳಿಯ ನೇಹಾ ಕೊಲೆಯ ಸುದ್ಧಿಯನ್ನು ತಿಳಿದು ಕರುಳಿಗೆ ಬೆಂಕಿ ಹಚ್ಚಿದಂತಾಗುತ್ತದೆ, ಇನ್ನು ಮನೆಯವರ ನೋವನ್ನು ಊಹಿಸಿಕೊಳ್ಳಲೂ ಅಸಾಧ್ಯ! ಕರ್ನಾಟಕ ಸರ್ಕಾರ ಕೊಲೆಗಡುಕರನ್ನು ಶಿಕ್ಷಿಸುವ ಬದಲು, ಅವರ ಪರ ವಕಾಲತ್ತು ವಹಿಸುವ ರೀತಿಯಲ್ಲಿ ವರ್ತಿಸುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ತೇಜಸ್ವಿ ಸೂರ್ಯ ಹರಿಹಾಯ್ದಿದ್ದಾರೆ.
ಮುಖ್ಯಮಂತ್ರಿ ಗಳು, ಗೃಹ ಸಚಿವರು, ಸರ್ಕಾರದ ಮಂತ್ರಿಗಳು ನಾ ಮುಂದೆ, ತಾ ಮುಂದೆ ಎಂಬಂತೆ ಹತ್ಯೆಯ ಮೂಲ ಕಾರಣವನ್ನು ತಮ್ಮ ರಾಜಕೀಯ ತುಷ್ಟೀಕರಣಕ್ಕೆ ತಿರುಚಿ, ನೋವಲ್ಲಿರುವ ಕುಟುಂಬಗಳ ಮೇಲೆ ಇನ್ನಷ್ಟು ಮಾನಸಿಕ ದೌರ್ಜನ್ಯ ಮಾಡುತ್ತಿದ್ದಾರೆ. ನಿನ್ನೆ ಒಂದೇ ದಿನ ರಾಜ್ಯದಲ್ಲಿ 12 ಕೊಲೆ ಪ್ರಕರಣಗಳು ಉಂಟಾಗಿವೆ.! ಹುಬ್ಬಳಿ, ಮಡಿಕೇರಿ, ಗದಗ, ಬೆಂಗಳೂರು ಸೇರಿದಂತೆ ರಾಜ್ಯದ ಪ್ರತೀ ಜಿಲ್ಲೆಯಲ್ಲಿ ಮತಾಂಧ ಶಕ್ತಿಗಳು ತಲೆ ಎತ್ತಿ ನಿಂತಿರುವುದಕ್ಕೆ ಕಾಂಗ್ರೆಸ್ ಪಕ್ಷವೇ ನೇರ ಹೊಣೆ ಎಂದು ತೇಜಸ್ವಿ ಆರೋಪಿಸಿದ್ದಾರೆ.
ನಮ್ಮ ರಾಜ್ಯದಲ್ಲಿ “ಇವತ್ತು ಜೈಲ್, ನಾಳೆ ಬೇಲ್” ಎಂಬ ಸರಳ ಪ್ರೋಟೋಕಾಲ್ ಸ್ಥಾಪಿಸಿರುವ ಕಾಂಗ್ರೆಸ್ ಪಕ್ಷ, ಬಹು ಸಂಖ್ಯಾತರು ಜೀವ ಭಯದಲ್ಲೇ ಬದುಕುವ ದೈನೇಸಿ ಪರಿಸ್ಥಿತಿಗೆ ರಾಜ್ಯವನ್ನು ತಳ್ಳುತ್ತಿದೆ. ಇಂತಹ ಸೂಕ್ಷ್ಮ ಸಮಯದಲ್ಲಿ ಮುಖ್ಯಮಂತ್ರಿಗಳು, ಗೃಹ ಸಚಿವರು ಏನೂ ಆಗಿಯೇ ಇಲ್ಲ ಎನ್ನುವ ರೀತಿ ಹೇಳಿಕೆಗಳನ್ನು ಕೊಡುವ ಬದಲು, ಜನರ ಆಕ್ರೋಶವನ್ನು, ತಾಳ್ಮೆಯನ್ನು ಪರೀಕ್ಷಿಸುವ ಬದಲು, ಕಾನೂನು ಸುವ್ಯವಸ್ಥೆ ಗಟ್ಟಿ ಪಡಿಸುವದರೆಡೆಗೆ ಗಮನ ಹರಿಸಬೇಕಿದೆ. ಇಲ್ಲದೇ ಹೋದಲ್ಲಿ, ತಮ್ಮ ತುಷ್ಟೀಕರಣದ ರಾಜಕಾರಣಕ್ಕೆ ಇನ್ನಷ್ಟು ಸಮಾಜ ಘಾತುಕ ಶಕ್ತಿಗಳು ರಾಜ್ಯದಲ್ಲಿ ತಲೆ ಎತ್ತಿ ನಿಲ್ಲುತ್ತವೆ. ಎಚ್ಚರಿಕೆ ಎಂದು ತೇಜಸ್ವಿ ಸೂರ್ಯ ಎಚ್ಚರಿಸಿದ್ದಾರೆ.
ಹುಬ್ಬಳ್ಳಿಯ ನೇಹಾ ಕೊಲೆಯ ಸುದ್ಧಿಯನ್ನು ತಿಳಿದು ಕರುಳಿಗೆ ಬೆಂಕಿ ಹಚ್ಚಿದಂತಾಗುತ್ತದೆ, ಇನ್ನು ಮನೆಯವರ ನೋವನ್ನು ಊಹಿಸಿಕೊಳ್ಳಲೂ ಅಸಾಧ್ಯ!
ಕರ್ನಾಟಕ ಸರ್ಕಾರ ಕೊಲೆಗಡುಕರನ್ನು ಶಿಕ್ಷಿಸುವ ಬದಲು, ಅವರ ಪರ ವಕಾಲತ್ತು ವಹಿಸುವ ರೀತಿಯಲ್ಲಿ ವರ್ತಿಸುತ್ತಿದೆ.!!
ಮುಖ್ಯಮಂತ್ರಿ ಗಳು, ಗೃಹ ಸಚಿವರು, ಸರ್ಕಾರದ ಮಂತ್ರಿಗಳು ನಾ ಮುಂದೆ, ತಾ ಮುಂದೆ… pic.twitter.com/lWuTBC8IQE
— Tejasvi Surya (ಮೋದಿಯ ಪರಿವಾರ) (@Tejasvi_Surya) April 19, 2024
ನೇಹಾ ತುಂಬಾ ಒಳ್ಳೆಯ ಹುಡುಗಿ : ಅವಳೇ ಮೊದಲು ಪ್ರಪೋಸ್ ಮಾಡಿದ್ದು: ಫಯಾಜ್ ತಾಯಿ ಮುಮ್ತಾಜ್
ನನ್ನ ಮಗಳ ಆತ್ಮಕ್ಕೆ ಶಾಂತಿ ಕೊಡಿಸುವ ಶಕ್ತಿ ಬೇರೆ ಯಾರ ಬಳಿ ಇಲ್ಲ, ನೀವೇ ಸಹಾಯ ಮಾಡಿ: ಜೋಶಿ ಬಳಿ ನೇಹಾ ತಂದೆ ಮನವಿ
ನೇಹಾ ಹ* ಕೇಸ್: ಫಯಾಜ್ ರುಂ*ಡ ಚೆಂಡಾಡಿದವರಿಗೆ 10 ಲಕ್ಷ ರೂ. ಬಹುಮಾನ ಘೋಷಣೆ