Thursday, May 30, 2024

Latest Posts

ಕಾಂಗ್ರೆಸ್ ನಾಯಕರಿಗೆ ನಾಚಿಕೆ, ಮಾನ, ಮರ್ಯಾದೆಯೇ ಇಲ್ಲ: ಕೇಂದ್ರ ಸಚಿವ ಜೋಶಿ

- Advertisement -

Hubli News: ಹುಬ್ಬಳ್ಳಿ: ಪ್ರಜ್ವಲ್ ವಿಚಾರದಲ್ಲಿ ಸಿದ್ದರಾಮಯ್ಯ ಬೇಕು ಅಂತಲೇ ಮಾಡುತ್ತಿದ್ದಾರೆ. ತಡವಾಗಿ ಎಫ್ ಐ ಆರ್ ಮಾಡಲಾಗಿದೆ. ಇಷ್ಟು ದಿನ ಆರಾಮವಾಗಿ ಮಲಗಿ ಈಗ ಬಿಜೆಪಿ ಬಗ್ಗೆ ಮಾತನಾಡಿತ್ತಿರಿ. ನಾಚಿಕೆ, ಮಾನ ಮರ್ಯಾದೆ ಇದ್ದಿದ್ದರೇ ಈ ರೀತಿಯ ಮಾತನಾಡುವುದಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಎಂಪಿಗೆ ಡಿಪ್ಲಾಮಿಟಕ್ ವೀಸಾ, ಪಾಸ್ ಪೋರ್ಟ್ ಸಿಗುತ್ತದೆ ಇಷ್ಟು ಕೂಡ ಸಿಎಂ ಮತ್ತು ಡಿಸಿಎಂಗೆ ಗೊತ್ತಿಲ್ಲವಾ?.‌ ಒಬ್ಬರ ಮೇಲೆ ಸಾಕಷ್ಟು ಆರೋಪ ಬರುತ್ತವೆ, ಪತ್ರ ಬರೆದ ವಿಚಾರ ಅಷ್ಟು ಸ್ಪಷ್ಟವಾಗಿಲ್ಲ. ಅದಕ್ಕೆ ಕನಿಷ್ಠ ಸಾಕ್ಷಿ ಸಿಗಬೇಕಿತ್ತು. ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಅಷ್ಟೇ. ಆದ್ರೆ ಜೆಡಿಎಸ್ ನಾವು ನಡೆಸುತ್ತಿಲ್ಲ ಎಂದು ಅವರು ಹೇಳಿದರು.

ದಿನೇಶ್ ಗುಂಡೂರಾವ್ ಅವರಿಗೆ ಜೋಶಿಗೆ ಎಲ್ಲಾ ಗೊತ್ತಿದೆ ಅಂತ ಕನಸು ಬಿದ್ದಿತ್ತಾ.? ದಿನೇಶ್ ಗುಂಡೂರಾವ್ ಅವರು‌ ಸಂವೇದನೆಶೀಲ ರಾಜಕಾರಣಿ‌ ಅಂತ ನಾನು ಭಾವಿಸಿದ್ದೆ. ಆದ್ರೂ ಅವರು ಇತ್ತೀಚೆಗೆ ರಾಹುಲ್ ಗಾಂಧಿ ತರಹ ಮಾತನಾಡುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ನೇಹಾ ಹಿರೇಮಠ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಅಮಿತ್ ಶಾ..!

ಮೊದಲ ಬಾರಿ ಅಯೋಧ್ಯೆಗೆ ಭೇಟಿ ನೀಡಿ ರಾಮನ ದರ್ಶನ ಮಾಡಿದ ದ್ರೌಪದಿ ಮುರ್ಮು

ರಾಮನಗರ ಶಾಸಕರ ವೀಡಿಯೋ ವೈರಲ್

- Advertisement -

Latest Posts

Don't Miss