ಹಿರಿಯ ಕಾಂಗ್ರೆಸ್ ನಾಯಕ ಪ್ರತಾಪ್ ಸಿಂಗ್ ರಾಣೆ(Pratapsingh Rane) ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ. 87 ವರ್ಷದ ಪ್ರತಾಪ್ ಸಿಂಗ್ ರಾಣೆ ಪೊರಿಯಂ ಕ್ಷೇತ್ರದಿಂದ 11 ಬಾರಿ ಗೆಲುವು ಸಾಧಿಸಿದ್ದರು. ಗೋವಾದ ಅತಿ ದೀರ್ಘ ವಾದ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೂ ಸಹ ಪಾತ್ರರಾಗಿದ್ದರು, ಈ ಬಾರಿ ಪೊರಿಯಂ(Porium)ಕ್ಷೇತ್ರದಿಂದ ಕಾಂಗ್ರೆಸ್ ಅವರಿಗೆ ಟಿಕೆಟ್ ನೀಡಿತ್ತು ಆದರೆ ಚುನಾವಣೆಗೆ ಕೆಲವು ದಿನಗಳು ಇರುವಾಗ ಚುನಾವಣಾ ಕಣದಿಂದ ಹಿಂದೆ ಸರಿಯುವುದಾಗಿ ಘೋಷಣೆ ಮಾಡಿದ್ದಾರೆ. 45 ವರ್ಷಗಳಿಂದ ಪೊರಿಯಂ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಪ್ರತಾಪ್ ಸಿಂಗ್ ರಾಣೆ ಚುನಾವಣಾ ಕಣದಿಂದ ಹಿಂದೆ ಸರಿದಿದ್ದು ಕಾಂಗ್ರೆಸ್‌ಗೆ ಹಿನ್ನಡೆ ಉಂಟು ಮಾಡಿದೆ. 2021 ಡಿಸೆಂಬರ್‌ನಲ್ಲಿಯೇ ಕಾಂಗ್ರೆಸ್ ಕ್ಷೇತ್ರದಲ್ಲಿ ಪ್ರತಾಪ್ ಸಿಂಗ್ ರಾಣೆ ಪಕ್ಷದ ಅಭ್ಯರ್ಥಿ ಎಂದು ಘೋಷಣೆ ಮಾಡಿತ್ತು. ಟಿಕೆಟ್ ನೀಡಿದರೆ ಈ ಬಾರಿಯೂ ಸ್ಪರ್ಧೆ ಮಾಡುತ್ತೇನೆ ಎಂದು ಪ್ರತಾಪ್ ಸಿಂಗ್ ರಾಣೆ ಹೇಳಿದ್ದರು. ಪಕ್ಷ ಟಿಕೆಟ್ ಸಹ ನೀಡಿತ್ತು. ಆದರೆ ಬಿಜೆಪಿ ದಿವ್ಯ ವಿಶ್ವಜಿತ್ ರಾಣೆಗೆ(Divya Vishwajit Rane)ಪೊರಿಯಂ ಕ್ಷೇತ್ರದಿಂದ ಟಿಕೆಟ್ ನೀಡುವ ಮೂಲಕ ಕ್ಷೇತ್ರದ ಚುನಾವಣಾ ಚಿತ್ರಣವನ್ನೇ ಬದಲು ಮಾಡಿದೆ.