Monday, December 11, 2023

Latest Posts

ಕೊನೆಗೂ ರಾಜೀನಾಮೆ ವಾಪಸ್ ಪಡೆಯಲು ನಿರ್ಧರಿಸಿದ ರಾಮಲಿಂಗಾ ರೆಡ್ಡಿ..!

- Advertisement -

ಬೆಂಗಳೂರು: ಮೈತ್ರಿ ಸರ್ಕಾರದ ಮೇಲೆ ಮುನಿಸಿಕೊಂಡು ರಾಜೀನಾಮೆ ನೀಡಿ ಅತೃಪ್ತರ ಪಟ್ಟಿ ಸೇರಿದ್ದ ಕಾಂಗ್ರೆಸ್ ನ ಹಿರಿಯ ಶಾಸಕ ರಾಮಲಿಂಗಾ ರೆಡ್ಡಿ ಕೊನೆಗೂ ರಾಜೀನಾಮೆ ಹಿಂಪಡೆಯಲು ನಿರ್ಧರಿಸಿದ್ದಾರೆ.

ರಾಜೀನಾಮೆ ಹಿಂಪಡೆಯೋ ಕುರಿತಾಗಿ ಪರೋಕ್ಷವಾಗಿ ಸುಳಿವು ನೀಡಿದ್ದ ಬೆಂಗಳೂರಿನ ಬಿಟಿಎಂ ಲೇಔಟ್ ನ ಕಾಂಗ್ರೆಸ್ ಶಾಸಕ ರಾಮಲಿಂಗಾರೆಡ್ಡಿ ಇದೀಗ ನಿರ್ಧಾರಕ್ಕೆ ಬಂದಿದ್ದಾರೆ. ರಾಜೀನಾಮೆಯನ್ನು ವಾಪಸ್ ಪಡೆಯೋದಾಗಿ ವಿಧಾನಸಭಾ ಸ್ಪೀಕರ್ ರಮೇಶ್ ಕುಮಾರ್ ರವರಿಗೆ ದೂರವಾಣಿ ಮೂಲಕ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ ಎನ್ನಲಾಗಿದೆ.

ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದ ನಿಷ್ಠಾವಂತರಲ್ಲಿ ರಾಮಲಿಂಗಾ ರೆಡ್ಡಿ ಕೂಡ ಒಬ್ಬರು. ಕಳೆದ ಬಾರಿ ರಾಮಲಿಂಗಾ ರೆಡ್ಡಿ ಗೃಹಸಚಿವರಾಗಿ ಸೇವೆ ಸಲ್ಲಿಸಿದ್ದರು. ಇನ್ನು ಈ ಬಾರಿ ಸಂಪುಟ ಪುನಾರಚನೆ ಕುರಿತಾಗಿ ಭಿನ್ನಾಭಿಪ್ರಾಯ ಉಂಟಾಗಿ ರಾಮಲಿಂಗಾರೆಡ್ಡಿ ರಾಜೀನಾಮೆ ಸಲ್ಲಿಸಿದ್ರು. ರಾಜೀನಾಮೆ ವಾಪಸ್ ಪಡೆಯುವಂತೆ ಕಾಂಗ್ರೆಸ್-ಜೆಡಿಎಸ್ ಮುಖಂಡರು ಎಷ್ಟೇ ಸಲಹೆ ನೀಡಿದ್ರೂ ಸಹ ರೆಡ್ಡಿ ಈವರೆಗೂ ತಮ್ಮ ನಿಲುವು ಪ್ರಕಟಿಸಿರಲಿಲ್ಲ. ಹೀಗಾಗಿ ಪ್ರತಿಪಕ್ಷ ಬಿಜೆಪಿ ಕೂಡ ರಾಮಲಿಂಗಾರೆಡ್ಡಿಯವರಿಗೆ ಗಾಳ ಹಾಕೋ ವಿಫಲ ಪ್ರಯತ್ನವನ್ನೂ ನಡೆಸಿ ಕೊನೆಗೆ ರಾಮಲಿಂಗಾರೆಡ್ಡಿ ಒಂದು ರೀತಿ ಬಂಡೆ ಇದ್ದಂತೆ, ಅವರ ನಿರ್ಧಾರವನ್ನು ಬದಲಿಸೋಕೆ ನಮ್ಮಿಂದಾಗೋದಿಲ್ಲ ಎಂದು ಸುಮ್ಮನಾಗಿತ್ತು. ಇದೀಗ ನಾಳೆ ವಿಶ್ವಾಸಮತ ಯಾಚನೆ ಇರೋ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರು ಮತ್ತು ಅಪಾರ ಕಾರ್ಯಕರ್ತರ ಒತ್ತಾಯಕ್ಕೆ ಮಣಿದಿರುವ ಶಾಸಕ ರಾಮಲಿಂಗಾ ರೆಡ್ಡಿ ಸ್ಪೀಕರ್ ಗೆ ಕರೆ ಮಾಡಿ ರಾಜೀನಾಮೆ ಹಿಂಪಡೆಯೋದಾಗಿ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ಜೋಡೆತ್ತುಗಳ ಕಡೇ ಆಟ ಸಕ್ಸಸ್ ಆಗುತ್ತಾ??? ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=TSwlrZFoSvY
- Advertisement -

Latest Posts

Don't Miss