Friday, December 27, 2024

Latest Posts

ಕಾಂಗ್ರೆಸ್ ನ 2ನೇ ವಿಕೆಟ್ ಪತನ..!- ಶಾಸಕ ರಮೇಶ್ ಜಾರಕಿಹೊಳಿ ರಾಜೀನಾಮೆ

- Advertisement -

ಬೆಂಗಳೂರು: ಬಳ್ಳಾರಿಯ ವಿಜಯನಗರದ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ರಾಜೀನಾಮೆ ನೀಡಿರೋ ಬೆನ್ನಲ್ಲೇ ಇದೀಗ ಕಾಂಗ್ರೆಸ್ ನ ಮತ್ತೊಂದು ವಿಕೆಟ್ ಪತನವಾಗಿದೆ. ಗೋಕಾಕ್ ಕ್ಷೇತ್ರದ ಕಾಂಗ್ರೆಸ್ ಶಾಸಕ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿದ್ದಾರೆ.

ಸಚಿವ ಸ್ಥಾನದಿಂದ ತಮ್ಮನ್ನು ಕೈಬಿಟ್ಟಿದ್ದಕ್ಕೆ ಬಂಡಾಯವೆದ್ದಿದ್ದ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಇಂದು ರಾಜೀನಾಮೆ ನೀಡಿದ್ದಾರೆ. ಪಕ್ಷದ ವಿರುದ್ಧ ಅಸಮಾಧಾನಗೊಂಡು 7 ಮಂದಿ ಶಾಸಕರ ಗುಂಪು ಮಾಡಿಕೊಂಡಿದ್ದ ರಮೇಶ್ ಜಾರಕಿಹೊಳಿ ಎಲ್ರೂ ಮಾಸ್ ರಾಜೀನಾಮೆ ಕೊಟ್ಟು ಸರ್ಕಾರವನ್ನ ಅಲ್ಲೋಕಲ್ಲೋಲ ಮಾಡ್ತೀವಿ ಅಂತ ಹೇಳಿದ್ರು. ಆದ್ರೆ ಇವತ್ತು 2ನೇಯವರಾಗಿ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿದ್ದು ಮೈತ್ರಿ ನಾಯಕರಲ್ಲಿ ಆತಂಕ ಮೂಡಿಸಿದೆ. ರಮೇಶ್ ಬಣದ ಮತ್ತ್ಯಾವ ಶಾಸಕ ರಾಜೀನಾಮೆ ಕೊಡ್ತಾರೋ ಅಂತ ಕಣ್ ಕಣ್ ಬಿಡ್ತಿದ್ದಾರೆ.

ಇನ್ನು ರಮೇಶ್ ಜಾರಕಿಹೊಳಿ ಸ್ಪೀಕರ್ ರಮೇಶ್ ಕುಮಾರ್ ಗೆ ಕೈಬರಹದಲ್ಲಿ ರಾಜೀನಾಮೆ ಪತ್ರ ರವಾನಿಸಿದ್ದಾರೆ. ಇನ್ನು ನೇರವಾಗಿ ಸಭಾಪತಿಯವರನ್ನು ಖುದ್ದಾಗಿ ಭೇಟಿ ಮಾಡಿ ಅಧಿಕೃತವಾಗಿ ರಾಜೀನಾಮೆ ಸಲ್ಲಿಸಬೇಕೆಂಬ ನಿಯಮವನ್ನೂ ರಮೇಶ್ ಜಾರಕಿಹೊಳಿ ಪಾಲಿಸದೇ ಇರೋದು ಇದೀಗ ದ್ವಂದ್ವ ಮೂಡಿಸಿದೆ. ಒಂದು ವೇಳೆ ರಮೇಶ್ ಜಾರಕಿಹೊಳಿ ಏನಾದ್ರೂ ರಾಜೀನಾಮೆ ನೀಡೋ ನಾಟಕವಾಡ್ತಿದ್ದಾರಾ ಅನ್ನೋ ಬ್ಲಗ್ಗೆ ಅನುಮಾನ ಮೂಡಿಸಿದೆ.

ಮೈತ್ರಿಯೇ ಕಾಂಗ್ರೆಸ್ ಗೆ ಮುಳುವಾಯ್ತಾ..? ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=COpWrYx6x4A
- Advertisement -

Latest Posts

Don't Miss