Sunday, September 8, 2024

Latest Posts

ಇಸ್ರೇಲ್ ಪ್ರಧಾನಿಯನ್ನು ಗುಂಡಿಕ್ಕಿ ಕೊಲ್ಲಬೇಕು ಎಂದ ಕಾಂಗ್ರೆಸ್ ಸಂಸದ.

- Advertisement -

International News:ಇಸ್ರೇಲ್ ಮತ್ತು ಹಮಾಸ್ ಯುದ್ಧ ಶುರುವಾಗಿ ಹಲವು ದಿನಗಳೇ ಕಳೆದಿದೆ. ಇನ್ನೂ ಕೂಡ ಇಸ್ರೇಲ್ ಸೇನೆ, ಹಮಾಸ್ ಉಗ್ರರನ್ನು ಹುಡುಕಿ ಹುಡುಕಿ ಕೊಲ್ಲುತ್ತಿದೆ. ರಕ್ತ ಬೀಜಾಸುರನ ವಂಶಸ್ಥರಂತೆ, ಉಗ್ರರ ಅಟ್ಟಹಾಸವೂ ಜೋರಾಗಿದೆ. ಈ ನಡುವೆ ಭಾರತದಲ್ಲಿ ಕಾಂಗ್ರೆಸ್ ಸಂಸದರೊಬ್ಬರು, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹುವನ್ನು ಗುಂಡಿಕ್ಕಿ ಕೊಲ್ಲಬೇಕು ಎಂದು ಹೇಳಿಕೆ ಕೊಟ್ಟು, ಹಲವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಕೇರಳದ ಕಾಂಗ್ರೆಸ್ ಸಂಸದ ರಾಜಮೋಹನ್ ಉನ್ನಿತಾನ್ ಅನ್ನುವವರು ಈ ರೀತಿ ಹೇಳಿಕೆ ಕೊಟ್ಟಿದ್ದಾರೆ. ಕಾಸರಗೋಡಿನಲ್ಲಿ ಪ್ಯಾಲೇಸ್ತಿನ್‌ನನ್ನು ಬೆಂಬಲಿಸಿ ಸಮಾವೇಶವೊಂದನ್ನು ನಡೆಸಲಾಯಿತು. ಕಾಸಗೋಡು ಯುನೈಟೆಡ್ ಮುಸ್ಲಿಂ ಜಮಾ-ಅತ್ ಸಹಯೋಗದಲ್ಲಿ, ಪ್ಯಾಲೇಸ್ತಿನ್ ಬೆಂಬಲಿಸಿ ಜಾಥಾ, ಮತ್ತು ಪ್ರಾರ್ಥನಾ ಸಭೆ ನಡೆಯಿತು. ಈ ಸಭೆಯಲ್ಲಿ ರಾಜಮೋಹನ್ ಉನ್ನಿತಾನ್ ಭಾಗವಹಿಸಿದ್ದರು.

ಈ ವೇಳೆ ಮಾತನಾಡಿದ ಸಂಸದರು, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಈ ಯುದ್ಧದ ಅಪರಾಧಿಯಾಗಿದ್ದಾರೆ. ಹಾಗಾಗಿ ಅವರನ್ನು ವಿಚಾರಣೆ ನಡೆಸದೇ, ಗುಂಡಿಕ್ಕಿ ಕೊಲ್ಲಬೇಕು ಎಂದು ಹೇಳಿದರು. ಅಲ್ಲದೇ, ಇಸ್ರೇಲನ್ನು ಬೆಂಬಲಿಸುತ್ತಿರುವ ಅಮೆರಿಕದ ಬಗ್ಗೆಯೂ ಆಕ್ರೋಶ ಹೊರಹಾಕಿದ ಸಂಸದರು, ಅಮೆರಿಕ ಇರಾಕ್‌ನಲ್ಲಿ ಹಲವಾರು ಅಮಾಯಕ ಮುಸ್ಲಿಂರನ್ನು ಕೊಂದಿದೆ. ಇದೀಗ ಪ್ಯಾಲೇಸ್ತೇನಲ್ಲಿ ಇಸ್ರೇಲ್ ಕೂಡ ಅದನ್ನೇ ಮಾಡುತ್ತಿದೆ ಎಂದು ಸಂಸದರು ಆರೋಪಿಸಿದ್ದಾರೆ.

ಅಲ್ಲದೇ, ಹಮಾಸ್‌ನಲ್ಲಿ ಯುದ್ಧ ಮಾಡುತ್ತಿರುವವರು ಉಗ್ರರಲ್ಲ, ಅವರು ತಮ್ಮ ಭೂಮಿ ಮತ್ತು ಜೀವವನ್ನು ರಕ್ಷಿಸಿಕೊಳ್ಳಲು ಯುದ್ಧ ಮಾಡುತ್ತಿದ್ದಾರೆ. ಅವರನ್ನು ಭಯೋತ್ಪಾದಕರು ಎಂದವರಿಗೆ ತಕ್ಕ ಉತ್ತರ ನೀಡುವ ಸಮಯ ಈಗ ಬಂದಿದೆ ಎನ್ನುವುದರ ಮೂಲಕ, ತಮ್ಮ ಬೆಂಬಲ ಪ್ಯಾಲೇಸ್ತಿನ್‌ಗೆ ಎಂದು ಸಂಸದ ರಾಜಮೋಹನ್ ಸ್ಪಷ್ಟಪಡಿಸಿದ್ದಾರೆ.

5 ಪ್ಯಾಲೆಸ್ತಿನ್ ಭಯೋತ್ಪಾದಕರ ಹತ್ಯೆ: ಇಸ್ರೇಲ್ ಸೇನೆ

ಉಗ್ರರ ಅಡಗುತಾಣಗಳ ಮೇಲೆ ಇಸ್ರೇಲ್ನಿಂದ ಬುಲ್ಡೋಜರ್ ಅಟ್ಯಾಕ್

ಹಮಾಸ್ ಉಗ್ರರ ದಾಳಿಗೆ ಇಸ್ರೇಲ್ ಯೋಧೆ ಸಾವು

- Advertisement -

Latest Posts

Don't Miss