Tuesday, July 16, 2024

Latest Posts

ಬಿಜೆಪಿ ಸರ್ಕಾರ ರಚನೆಗೆ ಕಾಂಗ್ರೆಸ್ ಅಡ್ಡಗಾಲು..!

- Advertisement -

ಬೆಂಗಳೂರು: ಸರ್ಕಾರ ರಚನೆಗೆ ಕ್ಷಣಗಣನೆ ಆರಂಭವಾಗಿರುವ ಹಿನ್ನೆಲೆ ಬಿಜೆಪಿ ಪಾಳಯದಲ್ಲಿ ಬಿರುಸಿನ ಚಟುವಟಿಕೆಗಳು ಶುರುವಾಗಿವೆ. ಸಿಎಂ ಆಗಿ ಪ್ರಮಾಣವಚನಕ್ಕೆ ಯಡಿಯೂರಪ್ಪ ನಿರ್ಗಮಿತ ಸಿಎಂ ಕುಮಾರಸ್ವಾಮಿ ಮತ್ತು ಸಿಎಲ್ ಪಿ ನಾಯಕ ಸಿದ್ದರಾಮಯಚರನ್ನು ಮಾಧ್ಯಮಗಳ ಮೂಲಕ ಆಹ್ವಾನವಿತ್ತ ಬೆನ್ನಲ್ಲೇ ದೋಸ್ತಿ ಇದೀಗ ಬಿಜೆಪಿ ಸರ್ಕಾರ ರಚನೆಗೆ ಅಡ್ಡಗಾಲು ಹಾಕಿದೆ.

ಇಂದು ಸಂಜೆ 6 ಗಂಟೆಯಿಂದ 6.15ಕ್ಕೆ ಪ್ರಮಾಣವಚನ ಸ್ವೀಕರಿಸಲು ಯಡಿಯೂರಪ್ಪನವರಿಗೆ ರಾಜ್ಯಪಾಲರು ಸಮ್ಮತಿ ಸೂಚಿಸಿದ್ದಾರೆ. ಹೀಗಾಗಿ ಪ್ರತಿಜ್ಞಾವಿಧಿ ಸ್ವೀಕಾರ ಕಾರ್ಯಕ್ರಮಕ್ಕೆ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಬರಲೇಬೇಕೆಂದು ಮಾಧ್ಯಮದ ಮೂಲಕ ಆಹ್ವಾನವಿತ್ತಿದ್ದ ಬಿಎಸ್ವೈಗೆ ದೋಸ್ತಿ ಶಾಕ್ ನೀಡಲು ಹೊರಟಿದೆ.

ಇವತ್ತು ಬಿಜೆಪಿಗೆ ಸಂಖ್ಯಾಬಲವೇ ಇಲ್ಲದ ಕಾರಣ ಯಾವುದೇ ಕಾರಣಕ್ಕೂ ಹಕ್ಕು ಮಂಡನೆಯಾಗಲಿ ಅಥವಾ ಪ್ರಮಾಣವಚನ ಸ್ವೀಕಾರವಾಗಲೀ ಸಾಧ್ಯವೇ ಇಲ್ಲ. ಬಿಜೆಪಿ ಮತ್ತು ಯಡಿಯೂರಪ್ಪನವರಿಗೆ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೂಲಭೂತ ಕಾನೂನು ಹಾಗೂ ಸಾಮಾನ್ಯ ಜ್ಞಾನ ಹೊಂದುವುದು ಅವಶ್ಯಕ ಅಂತ ಟ್ವೀಟ್ ಮಾಡಿರುವ ಕೆಪಿಸಿಸಿ ಸರ್ಕಾರ ರಚನೆಗೆ ಆಕ್ಷೇಪ ವ್ಯಕ್ತಪಡಿಸಿದೆ. ಇನ್ನು ಕಾಂಗ್ರೆಸ್ ನ ಈ ವಿಶ್ವಾಸಾತ್ಮಕ ಟ್ವೀಟ್, ಬಿಜೆಪಿ ವಿರುದ್ಧ ಮತ್ತೆ ಕಾನೂನು ಅಸ್ತ್ರ ಪ್ರಯೋಗಸಲು ಬರೆದ ಮುನ್ನುಡಿಯಂತೆ ಮೇಲ್ನೋಟಕ್ಕೆ ಕಾಣುತ್ತಿದ್ದು ರಾಜ್ಯ ಮತ್ತೊಂದು ಬೃಹನ್ನಾಟಕಕ್ಕೆ ಸಾಕ್ಷಿಯಾಗಲಿದೆಯಾ ಅನ್ನೋದನ್ನು ಕಾದು ನೋಡಬೇಕಿದೆ.

- Advertisement -

Latest Posts

Don't Miss