- Advertisement -
ಬೆಂಗಳೂರು: ಇಂದು ನೂತನ ಮುಖ್ಯಮಂತ್ರಿಯಾಗಿ ಬಿ.ಎಸ್ ಯಡಿಯೂರಪ್ಪ ಪ್ರಮಾಣವಚನ ಸ್ವೀಕರಿಸಲಿದ್ದು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇಂದೇ ಅಸ್ಥಿತ್ವಕ್ಕೆ ಬರಲಿದೆ.
ಇಂದು ಬೆಳಗ್ಗೆ ರಾಜ್ಯಪಾಲರನ್ನು ಭೇಟಿ ಮಾಡಿದ ಯಡಿಯೂರಪ್ಪ ಸರ್ಕಾರ ರಚನೆ ಕುರಿತು ಒಪ್ಪಿಗೆ ಪಡೆದಿದ್ದು. ಇಂದು ಸಂಜೆಯೇ ಪ್ರಮಾಣವಚನ ಸ್ವೀಕರಿಸಲಿದ್ದೇನೆ ಎಂದರು. ಸಂಜೆ 6 ಗಂಟೆಯಿಂದ 6.15ರೊಳಗಾಗಿ ಪ್ರತಿಜ್ಞಾವಿಧಿ ಸ್ವೀಕರಿಸಲಿರೋ ಬಿಎಸ್ವೈ 4ನೇ ಬಾರಿಗೆ ಸಿಎಂ ಆಗಿ ಆಡಳಿತ ನಡೆಸಲಿದ್ದಾರೆ.
ಇನ್ನು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಮತ್ತು ಸಿಎಲ್ ಪಿ ನಾಯಕ ಸಿದ್ದರಾಮಯ್ಯನವರನ್ನು ಬಿಎಸ್ವೈ ಆಹ್ವಾನಿಸಿದ್ದು, ತಾವೇ ಖುದ್ದಾಗಿ ಪತ್ರ ಬರೆಯುವುದಾಗಿ ತಿಳಿಸಿದ್ರು. ಇನ್ನು ಸರ್ಕಾರ ರಚನೆ ಕುರಿತು ಎಂದಿನಂತೆ ವಿರೋಧಿಸಿರೋ ಕಾಂಗ್ರೆಸ್ ಸಂಖ್ಯಾಬಲವೇ ಇಲ್ಲದೆ ಹೇಗೆ ಸರ್ಕಾರ ರಚನೆಯಾಗುತ್ತೆ ಅಂತ ಆಕ್ಷೇಪಿಸಿದೆ.
- Advertisement -