Saturday, October 5, 2024

Latest Posts

ಯೋಗವನ್ನು ಗೌರವಿಸದ ರಾಹುಲ್ ಗೆ ರಾಜಯೋಗವೇ ಇಲ್ಲ- ಬಾಬಾ ರಾಮ್ ದೇವ್ ಲೇವಡಿ

- Advertisement -

ಮುಂಬೈ: ಮಾಜಿ ಪ್ರಧಾನಿ ದಿವಂಗತ ಜವಹಾರ್ ಲಾಲ್ ನೆಹರೂ ಕೂಡ ಯೋಗಾಭ್ಯಾಸ ಮಾಡ್ತಿದ್ರು. ಆದ್ರೆ ಅವರ ಉತ್ತರಾಧಿಕಾರಿಗಳು ಯೋಗಾಭ್ಯಾಸ ಮಾಡದೆ ಯೋಗವನ್ನು ಜರಿದಿದ್ದರಿಂದ ಅವರಿಗೆ ಅಧಿಕಾರ ಕೈತಪ್ಪಿದೆ ಅಂತ ಬಾಬಾ ರಾಮ್ ದೇವ್ ಹೇಳಿದ್ದಾರೆ.

ಜನರ ಮಧ್ಯೆ ಯೋಗಾಭ್ಯಾಸ ಮಾಡೋ ಏಕೈಕ ಪ್ರಧಾನಿ ನರೇಂದ್ರ ಮೋದಿ ಒಬ್ಬರೇ. ಇದರಿಂದಾಗಿ ಯೋಗಕ್ಕೆ ಅಪಾರ ಮನ್ನಣೆ ಮತ್ತು ಗೌರವ ಲಭಿಸಿದೆ ಅಂತ ರಾಮ್ ದೇವ್ ಹೇಳಿದ್ದಾರೆ. ಅಲ್ಲದೆ ಮಾಜಿ ಪ್ರಧಾನಿಗಳಾಗಿದ್ದ ಜವಹಾರ್ ಲಾಲ್ ನೆಹರೂ ಮತ್ತು ಇಂದಿರಾ ಗಾಂಧಿ ಕದ್ದು ಮುಚ್ಚಿ ಯೋಗಾಭ್ಯಾಸ ಮಾಡುತ್ತಿದ್ರು ಹೀಗಾಗಿ ಅವರು ಅಧಿಕಾರಕ್ಕೇರಿದ್ರು. ಆದ್ರೆ ಅವರ ಉತ್ತರಾಧಿಕಾರಿಗಳ್ಯಾರೂ ಯೋಗಾಭ್ಯಾಸ ಮಾಡದೆ ಅಸಡ್ಡೆ ತೋರಿದ್ರಿಂದಲೇ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿದೆ, ಅಲ್ಲದೆ ರಾಜಯೋಗವೂ ಕೂಡ ಒಲಿಯಲಿಲ್ಲ ಅಂತ ರಾಮ್ ದೇವ್ ರಾಹುಲ್ ಗಾಂಧಿಯನ್ನು ಮೂದಲಿಸಿದ್ದಾರೆ.

ಯೋಗ ಒಂದು ಪರಂಪರೆ, ಅದು ಜಾತಿ, ಧರ್ಮ, ರಾಜಕೀಯ ಎಲ್ಲವನ್ನೂ ಮೀರಿದೆ. ಹೀಗಾಗಿ ಎಲ್ಲರೂ ಯೋಗವನ್ನು ರಾಷ್ಟ್ರಧರ್ಮ ಅಂತ ಒಪ್ಪಿಕೊಂಡಿದ್ದಾರೆ ಅಂತ ಬಾಬಾ ರಾಮ್ ದೇವ್ ಇದೇ ವೇಳೆ ಹೇಳಿದ್ದಾರೆ.

ಹಾಗಾದ್ರೆ ರಾಹುಲ್ ಗಾಂಧಿಗೆ ಸಿದ್ದರಾಮಯ್ಯ ಹೇಳಿದ್ದ ಆ ಸೀಕ್ರೆಟ್ ಏನು..? ಮಿಸ್ ಮಾಡದೇ ಈ ವಿಡಿಯೋ ನೋಡಿ

- Advertisement -

Latest Posts

Don't Miss