Hubballi News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ ಮಾತನಾಡಿದ್ದು, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಮೊಸರಲ್ಲಿ ಕಲ್ಲು ಹುಡಕೋದು ಬಿಡಬೇಕು. ಎಲ್ಲದರಲ್ಲೂ ರಾಜಕೀಯ ಬೆರೆಸಬಾರದು. ನಿನ್ನೆ ಜಗತ್ತಿನಲ್ಲಿ ಎಲ್ಲರೂ ಒಟ್ಟಾಗಿ ದೀಪೋತ್ಸವ ಮಾಡಿದ್ರು. ಮೊಸರಲ್ಲಿ ಕಲ್ಲು ಹುಡುಕುವ ಪ್ರಯತ್ನವನ್ನು ಯಾರೂ ಮಾಡಬಾರದು. ಕಾಂಗ್ರೆಸ್ ರಾಜಕಾರಣ ಎಲ್ಲ ವಿಷಯದಲ್ಲಿ ಬೆರಸಬಾರದು. ಇಡೀ ಜಗತ್ತು ಭಾರತದತ್ತ ನೋಡುತ್ತಿದೆ. ಖುಷಿ ಇರೋ ಸಮಯದಲ್ಲಿ ಮೊಸರಲ್ಲಿ ಕಲ್ಲು ಹುಡಕೋ ಕೆಲಸ ಮಾಡಬಾರದು ಎಂದು ಮಹೇಶ್ ಟೆಂಗಿನಕಾಯಿ ಹೇಳಿದ್ದಾರೆ.
ನವರಾತ್ರಿಯಲ್ಲಿ ನಾನು ಬರಿ ನೀರು ಕುಡಿದು ಒಂಭತ್ತು ದಿನ ಉಪವಾಸ ಮಾಡುತ್ತೇನೆ. ಊಟ ಉಪಹಾರ ಇಲ್ಲದೆ ಉಪವಾಸ ಇರಬಹುದು. ಕಾಂಗ್ರೆಸ್ ನವರು ಉಪವಾಸ ಮಾಡಲ್ಲ,ಅವರಿಗೆ ರೂಢಿ ಇಲ್ಲ. ಉಪವಾಸ ಮಾಡೋದು ಬಿಜೆಪಿ,ಹೀಗಾಗಿ ಮೋದಿ ಅವರ ಬಗ್ಗೆ ಮಾತಾಡಬಾರದು. ಪ್ರಧಾನಿಗಳ ಉಪವಾಸದ ಬಗ್ಗೆ ಟೀಕೆ ಟಿಪ್ಪಣಿ ಮಾಡುವ ಕೆಲಸ ಕಾಂಗ್ರೆಸ್ ಮಾಡಬಾರದು ಎಂದು ಮಹೇಶ್ ಹೇಳಿದ್ದಾರೆ.
ರಾಮ ಮಂದಿರ ವಿಚಾರದಲ್ಲಿ ಬಿಜೆಪಿ, ಪ್ರಧಾನಿ ಪ್ರಚಾರ ಪಡೆದಿಲ್ಲ. ನರೇಂದ್ರ ಮೋದಿಯವರ ನಾಯಕತ್ವದ ಬಗ್ಗೆ ಜನರಿಗೆ ವಿಶ್ವಾಸವಿದೆ. ಅಭಿವೃದ್ಧಿ ಕೆಲಸ ಮುಂದೆ ಇಟ್ಟುಕೊಂಡು ಲೋಕಸಭೆ ಚುನಾವಣೆಗೆ ಹೋಗುತ್ತೇವೆ. ನರೇಂದ್ರ ಮೋದಿಯವರು ದೇಶದ ವಿವಿಧ ದೇವಸ್ಥಾನಗಳಿಗೆ ಹೋದ್ರೆ ಕಾಂಗ್ರೆಸ್‌ಗೆ ಏನು ಸಮಸ್ಯೆ? ಕಾಂಗ್ರೆಸ್ ನಲ್ಲಿ ಅಲ್ಪ ಸಂಖ್ಯಾತರ ತುಷ್ಟೀಕರಣ ಹದ್ದು ಮೀರಿ ಹೋಗ್ತಿದೆ ಎಂದದು ಮಹೇಶ್ ಟೆಂಗಿನಕಾಯಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್‌ನವರು ಏನೇನೋ ಕುಡಿದು ಹೇಗಿದ್ದಾರೆಂದು ಆಶ್ಚರ್ಯವಾಗಿದೆ: ಬೆಲ್ಲದ್ ವ್ಯಂಗ್ಯ