ಮಂಡ್ಯ: ಅತ್ಯಾಚಾರ ಆರೋಪದ ಮೇಲೆ ಎಫ್ಐಆರ್ ದಾಖಲಾಗಿರುವ ವ್ಯಕ್ತಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ ಎಂದು ಸಚಿವ ಎಸ್ ಟಿ ಸೋಮಶೇಖರ್ ಹೇಳಿದ್ದಾರೆ. ಎಂ ಎಲ್ ಸಿ ಚುನಾವಣೆಯ ಕೋಲಾರದಲ್ಲಿ ಕೆಜಿಎಫ್ ಬಾಬು ರವರಿಗೆ ಕಾಂಗ್ರೆಸ್ ಟಿಕೆಟ್ ಅನ್ನು ನೀಡಿದ್ದು ಅದರ ವಿರುದ್ಧ ಎಸ್ ಟಿ ಸೋಮಶೇಖರ್ ರವರು ಮಂಡ್ಯದಲ್ಲಿ ವಾಗ್ದಾಳಿ ನಡೆಸಿದ್ದಾರೆ. ಕೆಜಿಎಫ್ ಬಾಬುರವರ ವಿರುದ್ಧ ಬೆಂಗಳೂರಿನಲ್ಲಿ ಪೊಲೀಸ್ ಠಾಣೆಯೊಂದರಲ್ಲಿ ಅತ್ಯಾಚಾರದ ಮೇಲೆ ಎಫ್ಐಆರ್ ದಾಖಲಾಗಿದೆ. ಅಂತವರಿಗೆ ಕಾಂಗ್ರೆಸ್ ಹೇಗೆ ಟಿಕೆಟ್ ನೀಡಿದೆ ಎಂದು ಪ್ರಶ್ನಿಸಿದ್ದಾರೆ. ಇವರು 1760 ಕೋಟಿಯಷ್ಟು ಆಸ್ತಿಯ ವಿವರವನ್ನು ನೀಡಿದ್ದಾರೆ. ಆದರೆ ಇವರು ಅಷ್ಟು ಮೊತ್ತದ ಆಸ್ತಿಯನ್ನು ಹೊಂದಲು ಹೇಗೆ ಸಾಧ್ಯ ಹಾಗೂ ತನ್ನ ಹೆಂಡತಿಯೇ ಮಗಳ ಮೇಲೆ ಅತ್ಯಾಚಾರದ ಆರೋಪದಡಿ ಎಫ್ಐಆರ್ ಕೇಸ್ ದಾಖಲಾಗಿದೆ, ಹಾಗಿರುವಾಗ ಇವರಿಗೆ ಹೇಗೆ ಕಾಂಗ್ರೆಸ್ ಟಿಕೆಟ್ ನೀಡಿದೆ ಎಂದು ತಿಳಿಯುತ್ತಿಲ್ಲ. ಎಲ್ಲಾ ದಾಖಲೆಗಳನ್ನು ಡಿಸೆಂಬರ್ 2 ಅಥವಾ 3 ರಂದು ಬೆಂಗಳೂರಿನಲ್ಲಿ ಬಿಡುಗಡೆ ಮಾಡುತ್ತೇವೆ ಎಂದು ಮಂಡ್ಯದಲ್ಲಿ ಸಚಿವ ಎಸ್ ಟಿ ಸೋಮಶೇಖರ್ ರವರು ಹೇಳಿದ್ದಾರೆ.