ಕಾಂಗ್ರೆಸ್ ಅಂಬೇಡ್ಕರ್ ಅವರನ್ನು ಅತ್ಯಂತ ಕೆಟ್ಟದಾಗಿ ನಡೆಸಿಕೊಂಡಿದೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

Hubli Political News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿದ್ದು,  ಕಾಂಗ್ರೆಸ್ ಪಕ್ಷ ಬೇಗುದಿಯಲ್ಲಿ ಬಿದ್ದಿದೆ. ಒಳ ಜಗಳದಿಂದ ಭ್ರಷ್ಟಾಚಾರ, ಅನೇಕ ರೀತಿಯ ಹಗರಣದಿಂದ ಸರ್ಕಾರಕ್ಕೆ ಕಂಟ್ರೋಲ್ ಸಿಗುತ್ತಿಲ್ಲ. ಕೆಎಸ್ ಆರ್ ಟಿಸಿ ಮತ್ತು ಎಲ್ಲಾ ಅಂಗ ಸಂಸ್ಥೆಗಳು ಬಾಗಿಲು ಮುಚ್ಚುವ ಹಂತಕ್ಕೆ ಬಂದಿವೆ. ದಲಿತರ ಕಾರ್ಯಕ್ರಮವನ್ನು ಯಾರು ಸಹಿಸಿಲ್ಲ ಅಂತ ಗೃಹ ಸಚಿವ ಪರಮೇಶ್ವರ ತಿಳಿಸಲಿ. ಕಾಂಗ್ರೆಸ್ ಯಾವತ್ತೂ ದಲಿತರ ಪರವಾಗಿಲ್ಲ. ಯಾಕೆ ನೀವು ಭ್ರಮೆಯಲ್ಲಿದ್ದೀರಿ..?ಎಂದು ಜೋಶಿ ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ ಅಂಬೇಡ್ಕರ್ ಅವರನ್ನು ಅತ್ಯಂತ ಕೆಟ್ಟದಾಗಿ ನಡೆಸಿಕೊಂಡಿದೆ. ಕಾಂಗ್ರೆಸ್ ಅಂಬೇಡ್ಕರ್ ಅವರಿಗೇ ಗೌರವ ಕೊಟ್ಟಿಲ್ಲ ಇನ್ನೂ ಈಗಿನ ದಲಿತ ನಾಯಕರಿಗೆ ಗೌರವ ನಿಡುತ್ತೆ ಅಂತ ಯಾಕೆ ಭ್ರಮೆಯಲ್ಲಿದ್ದೀರಿ…?  ತಪ್ಪು ದಾರಿಗೆಳೆಯುವ, ಕತ್ತಲಲ್ಲಿ ಇಡುವ ಕಾರ್ಯ ಮಾಡುತ್ತಿದೆ. ಯಾಕೆ ದಲಿತ ನಾಯಕರು ಇನ್ನೂ ಕಾಂಗ್ರೆಸ್ ನಂಬುತ್ತಿದ್ದಾರೆ ಅರ್ಥವಾಗುತ್ತಿಲ್ಲ. ಹೀಗಾಗಿ ದಲಿತ ನಾಯಕರು ಬಹಳಷ್ಟು ಎಚ್ಚರಿಕೆಯಿಂದ ಇರಬೇಕು ಎಂದು ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

ಇಂಡಿ ಘಟಬಂಧನದಿಂದ ಕಾಂಗ್ರೆಸ್ ನ್ನೇ ಹೊರಹಾಕಲಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ಎಲ್ಲಿಯೂ ನೆಲೆ ಇಲ್ಲ. ಒಳ ಜಗಳದ ಪರಿಣಾಮ ಈ ರೀತಿಯಲ್ಲಿ ಆಗುತ್ತಿದೆ. ಇನ್ನಾದರು ಕಾಂಗ್ರೆಸ್ ಅಹಂಕಾರ ಬಿಟ್ಟು ಸೌಜನ್ಯತೆಯಿಂದ ವರ್ತನೆ ಮಾಡಲಿ. ಇಲ್ಲಂದ್ರೆ ಜನ ತಕ್ಕ ಪಾಠ ಕಲಿಸುತ್ತಾರೆ. ಕಾಂಗ್ರೆಸ್ ಪಕ್ಷ ಅಯೋಮಯ ಸ್ಥಿತಿ ತಲುಪುತ್ತಿದೆ. ಈ ಬಾರಿ ದೆಹಲಿಯಲ್ಲಿ ಕಾಂಗ್ರೆಸ್ ಮತ್ತೆ ಒಂದು ಸ್ಥಾನ ಗೆಲ್ಲಲ್ಲ. ಕಾಂಗ್ರೆಸ್ ರಾಷ್ಟ್ರೀಯ ಪಕ್ಷದಿಂದ ಪ್ರಾದೇಶಿಕ ಪಕ್ಷವಾಗುತ್ತಿದೆ ಎಂದು ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

ಡಿಸಿಎಂ‌ ಡಿಕೆಶಿ ಶತ್ರು ಸಂಹಾರ ಪೂಜೆ ವಿಚಾರದ ಬಗ್ಗೆ ಮಾತನಾಡಿರುವ ಜೋಶಿ, ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ. ನಾನು ಹಾಗೂ ನಮ್ಮ ಪಕ್ಷ ಯಾರನ್ನೂ ಶತ್ರುಗಳಂತೆ ಭಾವಿಸಿಲ್ಲ. ನಮಗೆ ಪ್ರತಿಯೊಬ್ಬರೂ ಪ್ರತಿಸ್ಪರ್ಧಿಗಳು. ಡಿಕೆಶಿಯವರು ಶತ್ರು ಸಂಹಾರ ಪೂಜೆ ಮಾಡಿಸಿರುವುದಾಗಿ ಒಪ್ಪಿಕೊಂಡಿದ್ದಾರೆ. ಡಿಕೆಯವರಿಗೆ ಶತ್ರುಗಳ್ಯಾರು..? ಸಿದ್ಧರಾಮಯ್ಯ ಅವರಾ..? ಅಥವಾ ಪರಮೇಶ್ವರ ಅವರಾ..? ಅದನ್ನ ಡಿಕೆಶಿ ಸ್ಪಷ್ಟಪಡಿಸಬೇಕು. ಅವರು ಯಾರನ್ನ ಶತ್ರುಗಳನ್ನಾಗಿ ಭಾವಿಸಿದ್ದಾರೆ ಅನ್ನೋದನ್ನ ಸ್ಪಷ್ಟಪಡಿಸಬೇಕು ಎಂದು ಜೋಶಿ ಹೇಳಿದರು.

ಸಿಟಿ ರವಿ ಮಗನಿಗೆ ಬೆದರಿಕೆ ವಿಚಾರದ ಬಗ್ಗೆ ಮಾತನಾಡಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಿಟಿ ರವಿ ಪ್ರಕರಣದಲ್ಲಿ ಸರ್ಕಾರ ವೈರತ್ವ ಹಾಗೂ ಸೇಡಿನ‌ ಮನೊಭಾವದಿಂದ ಕೆಲಸ ಮಾಡುತ್ತಿದೆ. ಸಾರ್ವಜನಿಕ ಜೀವನದಲ್ಲಿರುವುವವರಿಗೆ ಕಾನೂನು ಕೈಗೆ ತೆಗದುಕೊಳ್ಳುವ ಅಧಿಕಾರ ಇಲ್ಲ. ಸಿಟಿ ರವಿಯವರ ಮೇಲೆ ಹಲ್ಲೆ ಮಾಡಿದವರ ಮೇಲೆ ಈವರೆಗೂ ಸರ್ಕಾರ ಕ್ರಮ‌ಕೈಗೊಂಡಿಲ್ಲ. ಕರ್ನಾಟಕ ಸುಸಂಸ್ಕೃತ ರಾಜ್ಯ ಸರ್ಕಾರ ಇದನ್ನ ಗಂಭೀರವಾಗಿ ತೆಗೆದುಕೊಳ್ಳಬೇಕು. ಈ‌ ರೀತಿ ಮಾಡಿದವರ ಮೇಲೆ ಸರ್ಕಾರ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ಇಂತಹ ಗೂಂಡಾ ವರ್ತನೆ ಮುಂದುವರೆಯುತ್ತಲೇ ಇರುತ್ತೆ ಎಂದು ಜೋಶಿ ಹೇಳಿದರು.

ನಕ್ಸಲರ ಶರಣಾಗತಿ ವಿಚಾರದ ಬಗ್ಗೆ ಮಾತನಾಡಿರುವ ಜೋಶಿ, ಇದು ಎಷ್ಟು ದಿನದಿಂದ ಪ್ರಕ್ರಿಯೆ ನಡೆಯುತ್ತಿತ್ತು..? ಇದು ಬಹಳ‌ ತರಾತುರಿಯಲ್ಲಿ ನಡೆಯಿತು ಅನ್ನೋ‌ ಭಾವನೆ ಎಲ್ಲರಲ್ಲೂ ಇದೆ. ಬೇರೆ ಬೇರೆ ಭಾಗಗಳಲ್ಲಿ ಶರಣಾಗತಿ ಆದ ನಕ್ಸಲರು ಅವರ ಬಳಿ ಇದ್ದ ಶಸ್ತಾಸ್ತ್ರಗಳನ್ನ ಒಪ್ಪಿಸಿದ್ದಾರೆ. ನಕ್ಸಲರ ಶರಣಾಗತಿಗೆ ನಾನು ವಿರೋಧ ಮಾಡುತ್ತಿಲ್ಲ. ನಕ್ಸಲ್ ರ ಪ್ಯಾಕೇಜ್ ವ್ಯವಸ್ಥೆ ಎಲ್ಲಾ ಸರ್ಕಾರದಲ್ಲಿದೆ. ನಕ್ಸಲ್ ಚಳುವಳಿಯನ್ನು ಬೇರು ಸಮೇತ ಹೊಸುಕಿ ಹಾಕುವ ಚಿಂತನೆ ಕೇಂದ್ರ ಸರ್ಕಾರ ಮಾಡುತ್ತಿದೆ. ಹೀಗಾಗಿ ತರಾತುರಿಯಲ್ಲಿ ಆರು ಜನ ನಕ್ಸಲ್ ಶರಣಾಗತಿಯಾಗಿದ್ದಾರೆ. ಶರಣಾಗತಿಯಾದ ನಕ್ಸಲ್ ಎಷ್ಟು ಶಸ್ತ್ರಾಸ್ತ್ರಗಳು ಒಪ್ಪಿಸಿದ್ದಾರೆ..? ಏನು ಮಹತ್ವದ ಮಾಹಿತಿ ನೀಡಿದ್ದಾರೆ ಅದನ್ನು ರಾಜ್ಯದ ಜನತೆಗೆ ಸಿಎಂ ತಿಳಿಸಲಿ. ನಕ್ಸಲರಿಗೆ ವಿದೇಶಿದಿಂದ ಹಣದ ಸಹಾಯವಾಗುತ್ತದೆ. ಇದರಲ್ಲಿ ನಮ್ಮ ರಾಜ್ಯದ ಯುವಕರು ಸಿಲುಕಿದ್ದಾರೆ. ನಕ್ಸಲ್ ಪ್ಯಾಕೇಜ್ ಇತರೇ ನಕ್ಸಲ್ ರಿಗೆ ಸಲುಗೆಯಾಗದಿರಲಿ. ಆರು ಜನ ನಕ್ಸಲ್ ಶರಾಣಾದ್ರೆ ರಾಜ್ಯದಲ್ಲಿ ನಕ್ಸಲ್ ಚಳುವಳಿ ಮುಗಿತು ಅಂತ ಬಿಂಬಿಸಲಾಗುತ್ತಿದೆ. ಆ್ಯಂಟಿ ನಕ್ಸಲ್ ತಂಡದ ಕಾರ್ಯಾಚರಣೆ ನಿಲ್ಲಿಸುತ್ತೇವೆ ಎನ್ನುವುದು ಎಷ್ಟರಮಟ್ಟಿಗೆ ಸರಿ..? ಎಂದು ಜೋಶಿ ಹೇಳಿದ್ದಾರೆ.

ಬಿ.ವೈ ವಿಜಯೇಂದ್ರ ಡಿನ್ನರ್ ಪಾರ್ಟಿ ವಿಚಾರದ ಬಗ್ಗೆ ಮಾತನಾಡಿರುವ ಜೋಶಿ, ವಿಜಯೇಂದ್ರ ಯಾವುದೇ ಡಿನ್ನರ್ ಪಾರ್ಟಿ ಅಂತಾ ಕರೆದಿಲ್ಲ. ಪಕ್ಷದ ಸಭೆಗಾಗಿ ಕರೆದಿದ್ದರು ನನಗೂ ಸಹ ಕರೆದಿದ್ದರು ನಾನೂ ಹೋಗಿದ್ದೆ ಎಂದು ಜೋಶಿ ಹೇಳಿದ್ದಾರೆ.

About The Author