- Advertisement -
Hubli News: ಹುಬ್ಬಳ್ಳಿ: ಮಗನಿಂದಲೇ ತಂದೆ ತಾಯಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಹಂತಕ ಮಗ ಗಂಗಾಧರಪ್ಪನನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ.
ನಿನ್ನೆ ಹುಬ್ಬಳ್ಳಿ ತಾಲೂಕಿನ ಕುಸುಗಲ್ ಗ್ರಾಮದಲ್ಲಿ ಅಶೋಕ್ ಮತ್ತು ಶಾರದಮ್ಮ ಎಂಬುವವರ ಕೊಲೆ ನಡೆದಿತ್ತು. ಇದನ್ನು ಅವರ ಮಗ ಗಂಗಾಧರಪ್ಪ ಎಂಬುವವನೇ ಮಾಡಿದ್ದ. ಎರಡು ಎಕರೆ ಜಮೀನಿಗಾಗಿ ತನ್ನ ತಂದೆ ಹಾಗೂ ಮಲತಾಯಿಯನ್ನೇ ಕೊಲೆ ಮಾಡಿ, ಬಳಿ ಪರಾರಿಯಾಗಿದ್ದ.
ಆದರೆ ಹುಬ್ಬಳ್ಳಿ ಗ್ರಾಮೀಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸಿ, ಪರಾರಿಯಾಗಿದ್ದ ಗಂಗಾಧರಪ್ಪನನ್ನು ಇಂದು ಬೆಳಿಗ್ಗೆ ಅರೆಸ್ಟ್ ಮಾಡಿದ್ದಾರೆ. ಗ್ರಾಮೀಣ ಠಾಣೆಯ ಇನ್ಸ್ ಪೆಕ್ಟರ್ ಮುರುಗೇಶ ಚೆನ್ಬಣ್ಣವರ್ ನೇತೃತ್ವದಲ್ಲಿ ಗಂಗಾಧರಪ್ಪ ಬಂಧನವಾಗಿದ್ದು, ಸದ್ಯ ವಿಚಾರಣೆ ನಡೆಸುತ್ತಿದ್ದಾರೆ.
- Advertisement -