Political News: ನೀವು ನಮ್ಮ ಷರತ್ತುಗಳಿಗೆ ಒಪ್ಪಿದರಷ್ಟೇ, ನಾವು ಇಂಡಿಯಾ ಒಕ್ಕೂಟದೊಂದಿಗೆ ಮೈತ್ರಿ ಮಾಡಿಕೊಳ್ಳುತ್ತೇವೆ. ಇಲ್ಲದಿದ್ದಲ್ಲಿ ಉತ್ತರಪ್ರದೇಶದಲ್ಲಿ ನಾವು ಏಕಾಂಗಿಯಾಗಿ ಸ್ಪರ್ಧಿಸುತ್ತೇವೆ ಎಂದು ಸಮಾಜವಾದಿ ಪಾರ್ಟಿಯ ಅಖಿಲೇಶ್ ಯಾದವ್ ಕಾಂಗ್ರೆಸ್‌ಗೆ ಷರತ್ತು ಹಾಕಿದ್ದರು.
ಇದೀಗ ಉತ್ತರಪ್ರದೇಶದಂಥ ದೊಡ್ಡ ರಾಜ್ಯದಲ್ಲಿ ಮೈತ್ರಿ ಮುರಿದುಕೊಂಡರೆ, ಚುನಾವಣೆಯಲ್ಲಿ ಗೆಲುವು ಕಷ್ಟವೆಂದು ಕಾಂಗ್ರೆಸ್ ಅಖಿಲೇಶ್ ಹಾಕಿದ್ದ ಷರತ್ತಿಗೆ ಒಪ್ಪಿಗೆ ನೀಡಿದೆ. ಉತ್ತರಪ್ರದೇಶದಲ್ಲಿರುವ 80 ಕ್ಷೇತ್ರದಲ್ಲಿ 17 ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್ ಸ್ಪರ್ಧಿಸಬಹುದೆಂದು ಷರತ್ತು ಹಾಕಿದ್ದರು. ಇದಕ್ಕೆ ಕಾಂಗ್ರೆಸ್ ಒಪ್ಪಿಗೆ ನೀಡಿದೆ.
ಈ ಮೊದಲು ಉತ್ತರಪ್ರದೇಶದಲ್ಲಿ ಕಾಂಗ್ರೆಸ್‌ಗೆ 40 ಕ್ಷೇತ್ರ, ಸಮಾಜವಾದಿಗೆ 40 ಕ್ಷೇತ್ರವೆಂದು ಕಾಂಗ್ರೆಸ್ ಷರತ್ತು ವಿಧಿಸಿತ್ತು. ಆದರೆ ಈ ಷರತ್ತಿಗೆ ಸಮಾಜವಾದಿ ಪಾರ್ಟಿ ವಿರೋಧಿಸಿತ್ತು. ಇದೀಗ ಷರತ್ತು ಒಪ್ಪಿಕೊಂಡು ಕಾಂಗ್ರೆಸ್ ರಾಯಬರೇಲಿ, ಅಮೇತಿ, ವಾರಣಾಸಿ ಸೇರಿ 17 ಕ್ಷೇತ್ರಗಳಲ್ಲಿ ಚುನಾವಣಾ ಕಣಕ್ಕಿಳಿಯಲಿದೆ.
ಸಮಾಜವಾದಿ ಪಾರ್ಟಿ ಕೂಡ ಕಾಂಗ್ರೆಸ್ ತನ್ನ ಷರತ್ತು ಒಪ್ಪಿದರೆ ಮಾತ್ರ, ಹೊಂದಾಣಿಕೆ ಎಂದಿತ್ತು. ಉತ್ತರಪ್ರದೇಶದಲ್ಲಿ ಇಂಡಿಯಾ ಒಕ್ಕೂಟದೊಂದಿಗೆ ಇರಬೇಕು ಅಂದ್ರೆ ಸಮಾಾಜವಾದಿ ಪಾರ್ಟಿ ಇಟ್ಟಿರುವ ಷರತ್ತನ್ನು ಕಾಂಗ್ರೆಸ್ ಒಪ್ಪಬೇಕಿದೆ. ಅದೇನಂದ್ರೆ, ಉತ್ತರಪ್ರದೇಶದಲ್ಲಿರುವ 80 ಸೀಟ್‌ನಲ್ಲಿ ಬರೀ 17 ಕ್ಷೇತ್ರದಲ್ಲಿ ಕಾಂಗ್ರೆಸ್ ಸ್ಪರ್ಧಿಸಬಹುದು. ಉಳಿದ ಕ್ಷೇತ್ರವೆಲ್ಲ ಎಸ್‌ಪಿಗೆ ಬಿಟ್ಟು ಕೊಡಬೇಕು ಎಂದು ಅಖಿಲೇಶ್ ಷರತ್ತು ಹಾಕಿದ್ದರು. ಅಲ್ಲದೇ, ರಾಹುಲ್ ಗಾಂಧಿಯ ಭಾರತ್ ಜೋಡೋ ಯಾತ್ರೆ ಉತ್ತರಪ್ರೇದಶಕ್ಕೆ ಬಂದರೂ ಕೂಡ, ಅಖಿಲೇಶ್ ಈ ಷರತ್ತು ಒಪ್ಪಿಕೊಂಡರಷ್ಟೇ ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಳ್ಳುವುದಾಗಿ ಹೇಳಿದ್ದರು. ಇದೀಗ ಅಖಿಲೇಶ್ ಷರತ್ತನ್ನು ಕಾಂಗ್ರೆಸ್ ಒಪ್ಪಿಕೊಂಡಿದ್ದು, ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಾರ್ಟಿ ಮತ್ತು ಕಾಂಗ್ರೆಸ್ ಪಕ್ಷ ಸೇರಿ, ಬಿಜೆಪಿಯೊಂದಿಗೆ ಸ್ಪರ್ಧೆಗಿಳಿಯಲಿದೆ.
ರಾಜ್ಯದಲ್ಲಿ ಹುಕ್ಕಾಬಾರ್ ನಿಷೇಧ, ಸಿಗರೇಟ್ ನಿಷೇಧ ವಯೋಮಿತಿ ಹೆಚ್ಚಳ: ಸಚಿವ ಗುಂಡೂರಾವ್
ಹಿಗ್ಗುತ್ತಿದೆ ಕೇಂದ್ರ ಬಜೆಟ್ ಗಾತ್ರ, ಕುಗ್ಗುತ್ತಿದೆ ರಾಜ್ಯದ ಪಾಲು: ಸಿಎಂ ಸಿದ್ದರಾಮಯ್ಯ