Health Tips: ಮಲಬದ್ಧತೆ ಹೆಚ್ಚಾಗಿ ಪುಟ್ಟ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತದೆ. ಏಕೆಂದರೆ, ಕೆಲವೊಮ್ಮೆ ನೀರು ಕುಡಿಯುವ ಪ್ರಮಾಣ ಕಡಿಮೆಯಾಗಿರುತ್ತದೆ. ಇನ್ನು ಕೆಲವೊಮ್ಮೆ ಆಹಾರ ಸೇವನೆಯಲ್ಲಿ ಏರುಪೇರಾಗುತ್ತದೆ. ಹಾಗಾಗಿ ಮಲಬದ್ಧತೆ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಯಾಕೆ ಈ ಮಲಬದ್ಧತೆಗೆ ಕಾರಣವೇನು ಅಂತಾ ವೈದ್ಯರಾದ ಡಾ.ಆಂಜಿನಪ್ಪ ಅವರು ಹೇಳಿದ್ದಾರೆ.
ದಿನಕ್ಕೆ ಎರಡು ಬಾಾರಿ, ಎರಡು ದಿನಕ್ಕೆ ಒಮ್ಮೆ, ಪ್ರತಿದಿನ ಮಲವಿಸರ್ಜನೆಯಾದ್ರೆ, ಅದು ನಾರ್ಮಲ್ ಆಗಿರುತ್ತದೆ. ಆದರೆ ನಿಮಗೆ ಎರಡು ಮೂರು ದಿನಾ ಆದರೂ ಮಲ ವಿಸರ್ಜನೆಯಾಗಲಿಲ್ಲ ಎಂದಲ್ಲಿ, ಅದು ಮಲಬದ್ಧತೆ ಸಮಸ್ಯೆಯಾಗಿರುತ್ತದೆ. ಈ ಸಮಸ್ಯೆ ಬರಬಾರದು ಅಂದ್ರೆ ನೀವು, ಯಾವ ಆಹಾರದಲ್ಲಿ ನಾರಿನಂಶ ಇರುತ್ತದೆಯೋ, ಅಂಥ ಆಹಾರ, ತಂಪಾದ ಆಹಾರ, ಮೊಸರು, ಮಜ್ಜಿಗೆ, ತುಪ್ಪ, ಎಳನೀರು ಇಂಥ ಆಹಾರಗಳನ್ನು, ಹಣ್ಣು ತರಕಾರಿಗಳನ್ನು ಸೇವಿಸುವ ಮೂಲಕ ಪರಿಹಾರ ಕಂಡುಕೊಳ್ಳಬಹುದು.
ಮಲ ವಿಸರ್ಜನೆಯಾಗುವುದು ಎಷ್ಟು ಮುಖ್ಯ ಎಂದರೆ, ಮಲ ವಿಸರ್ಜನೆಯಾದಲ್ಲಿ, ನಮ್ಮ ಆರೋಗ್ಯ, ಸೌಂದರ್ಯ ಎರಡೂ ಉತ್ತಮವಾಗಿರುತ್ತದೆ. ನಿಮ್ಮ ಮುಖದ ಮೇಲೆ ಹೆಚ್ಚು ಮೊಡವೆಯಾಗುತ್ತಿದೆ ಎಂದಲ್ಲಿ, ನೀವು ತಿಂದ ಆಹಾರ ಸರಿಯಾಗಿ ಜೀರ್ಣವಾಗುತ್ತಿಲ್ಲ ಎಂದರ್ಥ. ಅಥವಾ ನೀವು ಹೆಚ್ಚು ಅನಾರೋಗ್ಯಕರ ಆಹಾರ ಸೇವನೆ ಮಾಡುತ್ತಿದ್ದೀರಿ ಎಂದರ್ಥ. ಹೀಗಾಗಿ ಆರೋಗ್ಯಕರ ಆಹಾರ ಸೇವಿಸಿ, ಹೆಚ್ಚು ನೀರು ಕುಡಿದರೆ, ನಿಮ್ಮ ಆರೋಗ್ಯ, ಸೌಂದರ್ಯ ಎರಡೂ ಉತ್ತಮವಾಗಿರುತ್ತದೆ.
ಹಣ್ಣು, ಸೊಪ್ಪುಗಳಲ್ಲಿ ಹೆಚ್ಚು ಫೈಬರ್ ಇರುತ್ತದೆ. ಮುದ್ದೆ, ಚಪಾತಿ ಸೇವಿಸಿ, ಚೆನ್ನಾಗಿ ನೀರು ಕುಡಿದರೆ, ಮಲ ವಿಸರ್ಜನೆ ಸರಿಯಾಗಿ ಆಗುತ್ತದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.