ಹಾಸನ: ಮಕ್ಕಳಿಗೆ ಸಂವಿಧಾನವು ಹಕ್ಕುಗಳ ನೀಡಿರುವಂತೆ ಜೊತೆಯಲ್ಲಿ ತಮ್ಮ ಕರ್ತವ್ಯವನ್ನು ಮರೆಯಬಾರದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಬಿ.ಕೆ. ರವಿಕಾಂತ್ ತಿಳಿಸಿದರು. ನಗರದ ಶ್ರೀಗಂಧದ ಕೋಠಿ ಆವರಣದಲ್ಲಿರುವ ಮಹಿಳಾ ಸರಕಾರಿ ಪ್ರೌಢಶಾಲೆ ಪ್ರಧಾನ ಸಭಾಂಗಣದಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ, ರಾಜ್ಯ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಪಂಚಾಯತ್, ಪೊಲೀಸ್ ಇಲಾಖೆ, ವಕೀಲರ ಸಂಘ, ಸಾರ್ವಜನಿಕ ಶಿಕ್ಷಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಸಂವಿಧಾನ ದಿನಾಚರಣೆಯ ಆಚರಿಸಲಾಯಿತು.
ಮೂತ್ರಪಿಂಡ ಕಸಿಗೆ ಸಿಂಗಾಪುರಕ್ಕೆ ತೆರಳಿದ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್
ಸಂವಿಧಾನ ದಿನಾಚರಣೆಯ ಅಂಗವಾಗಿ ಕಾನೂನು ಅರಿವು ಕಾರ್ಯಕ್ರಮದಲ್ಲಿ ನ್ಯಾಯಾಧೀಶರಾದ ಬಿ.ಕೆ. ರವಿಕಾಂತ್ ಮಾತನಾಡಿ, ನಮ್ಮ ಭಾರತದ ಸಂವಿಧಾನವು ಮೂಲಭೂತ ಹಕ್ಕುಗಳನ್ನು ಕೊಟ್ಟಿದ್ದು, ಜೊತೆಯಲ್ಲಿ ನಮ್ಮ ಕರ್ತವ್ಯಗಳನ್ನು ನೀಡಿದೆ. ಶಿಕ್ಷಣ ಪಡೆದುಕೊಳ್ಳುವುದು ಹಕ್ಕುಗಳಾದರೇ ಶಿಕ್ಷಕರಿಗೆ ಹಿರಿಯರಿಗೆ ಗೌರವ ಕೊಡುವುದು ನಮ್ಮ ಕರ್ತವ್ಯ ಎಂಬುದನ್ನು ಮರೆಯಬಾರದು. ಸಲಹೆ ಸೂಚನೆಯನ್ನು ಕೊಟ್ಟು ಒಳ್ಳೆಯ ಮಾರ್ಗದಲ್ಲಿ ಹೋಗಲು ಹೇಳಿದಾಗ ಕೋಪಮಾಡಿಕೊಳ್ಳದೇ ಪಾಲಿಸಬೇಕು ಎಂದು ಹೇಳಿದರು.
ಕ್ಲೀಯರೆನ್ಸ್ ಸರ್ಟಿಫಿಕೇಟ್ ಪಡೆದ ನಂತರವೇ ಮನೆ ಬಾಡಿಗೆ ಸಿಗಲಿದೆ : ಮೈಸೂರು ನಗರ ಪೊಲೀಸ್ ಕಮಿಷನರ್
ಮಕ್ಕಳು ಓದಿ ವಿದ್ಯಾವಂತರಾಗಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು. ದೇಶಕ್ಕೆ ಏನಾದರೂ ಕೊಡುಗೆ ಕೊಡಬೇಕು, ಹೆಣ್ಣು ಮಕ್ಕಳು ಯಾವದಕ್ಕೂ ಹಿಂಜರಿಯದೆ ಮುನ್ನುಗ್ಗುತ್ತಿರಬೇಕು. ಶಿಕ್ಷಣಕ್ಕೆ ಮೊದಲ ಪ್ರಾಧಾನ್ಯತೆ ನೀಡುವ ಮೂಲಕ ವಿದ್ಯಾವಂತರಾಗಿ, ಗುಣವಂತರಾಗಿ ಹಾಗೂ ಸಮಾಜದಲ್ಲಿರುವ ಸಮಸ್ಯೆಗಳ ಬಗ್ಗೆ ಗಮನಕೊಡಬೇಕು. ಈ ಅಮೂಲ್ಯವಾದ ಸಮಯ ಮತ್ತೆ ಸಿಗುವುದಿಲ್ಲ ಸಮಯ ವ್ಯರ್ಥ ಮಾಡಬೇಡಿ ಎಂದು ಹೇಳುತ್ತಾ ಕಾನೂನು ಯಾವ ರೀತಿಯಲ್ಲೂ ದುರುಪಯೋಗವಾಗಬಾರದು ಎಂದರು ಕಿವಿಮಾತು ಹೇಳೀದರು. ಕಾರ್ಯಕ್ರಮದಲ್ಲಿ ಶಾಲೆಯ ಸಿಬ್ಬಂದಿಯಲ್ಲ ಭಾಗಿಯಾಗಿದ್ದರು.
ದಾವಣಗೆರೆಯಲ್ಲಿ ಕೆಲವು ಮತದಾರರ ಹೆಸರು ಡಿಲೀಟ್ ಆಗಿವೆ : ಡಿಸಿ ಶಿವಾನಂದ ಸುದ್ದಿಗೋಷ್ಠಿ