Wednesday, April 23, 2025

Latest Posts

Nandi Hillsನಲ್ಲಿ ರೋಪ್ ವೇ ನಿರ್ಮಾಣ,ರೈತರ ಜಮೀನು ಒತ್ತುವರಿ..!

- Advertisement -

ದೊಡ್ಡಬಳ್ಳಾಪುರ : ನಂದಿಬೆಟ್ಟಕ್ಕೆ ರೋಪ್ ವೇ (Rope Way to Nandibetta) ನಿರ್ಮಾಣ ಮಾಡುವ ಹಂತದಲ್ಲಿ ನಂದಿ ಬೆಟ್ಟದಲ್ಲಿ ಪಾರ್ಕಿಂಗ್ (Parking) ನಿರ್ಮಾಣಕ್ಕೆ ದೊಡ್ಡಬಳ್ಳಾಪುರ ರೈತರ ಭೂಮಿಯನ್ನು ಒತ್ತುವರಿಯಾಗಿದ್ದು ರೈತ‌ ಸಂಘದಿಂದ ಪ್ರತಿಭಟನೆ ಮಾಡಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ (Doddaballapura) ತಾಲ್ಲೂಕಿನ ಹೆಗ್ಗಡಿಹಳ್ಳಿಯ ರೈತ  ಮುನಿನಾರಾಯಣಪ್ಪ (Farmer Muninarayanappa) ತನ್ನ ಭೂಮಿ ಯಲ್ಲಿ ನಂದಿಬೆಟ್ಟದ ರೋಪ್ ವೇ ನಿರ್ಮಾಣಕ್ಕೆ ರೈತನ ಜಮೀನನ್ನು ಒತ್ತುವರಿ ಮಾಡುತ್ತಿದ್ದು ಒತ್ತುವರಿಯನ್ನು ತಡೆಯುವುದಕ್ಕೆ ಹೈಕೋರ್ಟಿನಲ್ಲಿ ರೈತ ತಡೆಯಾಜ್ಞೆ ಆದೇಶ (Farmer’s injunction order in High Court) ತಂದಿದ್ದಾರೆ. ಈ ನಿಟ್ಟಿನಲ್ಲಿ ಪಾರ್ಕಿಂಗ್ ಕಾಮಗಾರಿ ಕಾರ್ಯವನ್ನು ನಿಲ್ಲಿಸುವಂತೆ ರೈತ ಸಂಘ ಮತ್ತು ಸಂತ್ರಸ್ತ ರೈತರು  ಸಂಜೆ ಪ್ರತಿಭಟನೆಗೆ (Farmers ‘Union and Victim Farmers’ protest)  ಮುಂದಾಗಿದ್ದರು. ನಂತರ ಸ್ಥಳಕ್ಕೆ ಆಗಮಿಸಿದ ಸರ್ಕಲ್ ಇನ್ಸ್‌ಫೆಕ್ಟರ್ ಎಂ.ಬಿ.ನವೀನ್‌ಕುಮಾರ್ (Circle Inspector MB Naveen Kumar) ಜಿಲ್ಲಾಧಿಕಾರಿಗಳ ಜೊತೆ ಫೋನಿನ ಮೂಲಕಮಾತನಾಡಿ  ನಂತರ ಸಮಸ್ಯೆ ಬಗೆಹರಿಸುವುದಾಗಿ ಬರವಸೆ ನೀಡಿದರು. ತದನಂತರ ರೈತ ಸಂಘದ ಪದಾಧಿಕಾರಿಗಳು ಪ್ರತಿಭಟನೆಯ ನಿರ್ಧಾರವನ್ನು ಕೈ ಬಿಟ್ಟರು. ಈ ಕುರಿತು ಮಾಧ್ಯಮದವರೊಂದಿಗೆ  ಮಾತನಾಡಿದ ಭೂಮಿ ಕಳೆದುಕೊಂಡ ಮುನಿನಾರಾಯಣಪ್ಪ ಸುಮಾರು 20 ವರ್ಷಗಳಿಂದ  ಈ ಭೂಮಿಯಲ್ಲಿ ಕೃಷಿ ಮಾಡುತ್ತಿದ್ದೇನೆ, ಬಗರ್ ಹುಕ್ಕುಂ ಸಾಗುವಳಿ ಅಡಿ 53 ಫಾರಂನಲ್ಲಿ ಅರ್ಜಿಯನ್ನು 1994ರಲ್ಲಿ ಸಲ್ಲಿಸಿದ್ದೆ. ಈ ಕುರಿತು  ಕಂದಾಯ ಇಲಾಖೆ 2017-18ನೇ ಸಾಲಿನಲ್ಲಿ 94 ಸರ್ವೆ ನಂಬರಿನಲ್ಲಿ (94 In Survey Beliefs) 1.5 ಎಕರೆ ಭೂಮಿಯನ್ನು ಸ್ಕೆಚ್ ಕೂಡ ಮಾಡಿದ್ದಾರೆ. ಈ ಕುರಿತು ಹಕ್ಕು ಪತ್ರ ನೀಡುವಂತೆ ಅಂದಿನ ಶಾಸಕ ಪಿಳ್ಳಮುನಿಶಾಮಪ್ಪ (MLA Pillamunisamappa) ಕೂಡ ಹಕ್ಕು ಪತ್ರ ನೀಡುವಂತೆ ಶಿಪಾರಸ್ಸು ಮಾಡಿದ್ದರು. ಇದೆ ಭೂಮಿಯಲ್ಲಿ ರಾಗಿ ಕೃಷಿ ಮಾಡಿಕೊಂಡು ಬಂದಿದ್ದೇವೆ. ಒತ್ತುವರಿ ಕುರಿತು ಹೈ ಕೋರ್ಟ್ ಕೂಡ ನಮ್ಮ ಪರವಾಗಿ ತಡೆಯಾಜ್ಙೆ ನೀಡಿದೆ. ಆದರೆ ಈ ಕುರಿತು ತಡೆಯಾಜ್ಞೆ ಆದೇಶವನ್ನೂ ನೋಡಲು ಅಧಿಕಾರಿಗಳು ನಿರಾಕರಿಸಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿ, ತಹಶೀಲ್ದಾರ್ ಸೇರಿದಂತೆ ಸಂಬಂಧಿತ ಅಧಿಕಾರಿಗಳಿಗೆ ಕೋರ್ಟ್ ಅದೇಶ ಪ್ರತಿಯೊಂದಿಗೆ ಮನವಿ ಪತ್ರ ನೀಡಿದ್ದೇವೆ. ಆದರೂ ಕೋರ್ಟ್ ಆದೇಶವನ್ನು ಉಲ್ಲಂಘನೆ ಮಾಡಿ ಇಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು  ಮಾತನಾಡಿದರು. ರೈತ ಸಂಘದ ತಾಲೂಕು ಕಾರ್ಯದರ್ಶಿ ಬಚ್ಚಹಳ್ಳಿ ಸತೀಶ್ (Secretary Bachhahalli Satish) ಮಾತನಾಡಿ,  ಸರ್ಕಾರದ ಅಭೀವೃದ್ಧಿ ಯೋಜನೆಗಳಿಗೆ ರೈತರು ಎಂದೂ ಅಡ್ಡಿ ಬಂದಿಲ್ಲ. ರೈತರ ಸಮಾದಿ ಮೇಲೆ ಅಭಿವೃದ್ಧಿ ಯೋಜನೆ ಮಾಡಬೇಡಿ. ಈ ಕುರಿತು ರೈತರರಿಗೆ ನ್ಯಾಯ ದೊರುಕುವ ಹಂತದಲ್ಲಿ ನಿಮ್ಮ ಅಭಿವೃದ್ಧಿ ಯೋಜನೆ ಇರಲಿ. ರೈತರಿಗೆ ಬದಲಿ ಭೂಮಿ ನೀಡಿ, ಇಲ್ಲವಾದಲ್ಲಿ ಈ ಭೂಮಿಯನ್ನು ರೈತರಿಗೆ ಬಿಟ್ಟುಕೊಡಿ ಎಂದು ಸರ್ಕಾರಕ್ಕೆ ಒತ್ತಾಯಿಸಿ ಮಾತನಾಡಿದರು. ಈ ಹಿಂದೆ ಕಾಂಗ್ರೆಸ್ ಆಡಳಿತದ ಸರ್ಕಾರ ಚಿಕ್ಕಬಳ್ಳಾಪುರ ತಾಲೂಕಿನ ಕುಡವತಿ 9.20 ಎಕರೆ ಭೂಮಿಯನ್ನು ಪಾರ್ಕಿಂಗ್‌ಗಾಗಿ ಮೀಸಲಿಟ್ಟಿತ್ತು. ಆದರೆ ಬಿಜೆಪಿ ಸರ್ಕಾರ ಪೂರ್ವದಿಂದ ಪಶ್ಚಿಮಕ್ಕೆ ಬಂದಿದ್ದು, ನಂದಿಬೆಟ್ಟದ ತಪ್ಪಿಲಿನ ಚಿಕ್ಕಬಳ್ಳಾಬಳ್ಳಾಪುರ-ದೊಡ್ಡಬಳ್ಳಾಪುರ ಗಡಿಯ ಭೂಮಿಯನ್ನು ಒತ್ತುವರಿ ಮಾಡಿಕೊಳ್ಳುತ್ತಿವೆ. ಈ ಪೈಕಿ ದೊಡ್ಡಬಳ್ಳಾಪುರ ತಾಲೂಕಿನ ಬಗರ್ ಹುಕ್ಕುಂ 53 ಪಾರಂ ಸಲ್ಲಿಸಿ ಸಾಗುವಳಿ ಮಾಡುತ್ತಿದ್ದ ಹೆಗ್ಗಡಿಹಳ್ಳಿ ಮುನಿನಾರಾಯಣಪ್ಪ 1.20 ಎಕರೆ ಹಾಗು ಚೆಲುವ ಮೂರ್ತಿಯ 2ಎಕರೆ ಸೇರಿದಂತೆ ಒಟ್ಟು 3. 20ಎಕರೆ  ಭೂಮಿಯನ್ನು ಪಾರ್ಕಿಂಗ್‌ಗಾಗಿ ಒತ್ತುವರಿ ಮಾಡಲಾಗಿದೆ. ಈ ಹಿಂದೆ ಪ್ರವಾಸೋಧ್ಯಮ ಮಂತ್ರಿಯಾಗಿದ್ದ ಸಿ.ಪಿ.ಯೋಗೇಶ್ವರ್ ಅವರು ಸ್ಥಳಕ್ಕೆ ಬಂದು ರೈತರ ಸಮಸ್ಯೆ ಬಗೆಹರಿಸುವುದಾಗಿ ಬರವಸೆ ನೀಡಿದ್ದರು. ಆದರೆ ಮಾರನೇ ದಿನವೇ ಅವರು ಪ್ರವಾಸೋದ್ಯಮ ಮಂತ್ರಿಗಿರಿಯಿಂದ ಕೆಳಗಿಳಿದಿದ್ದರು. ನಂತರ ಇಲ್ಲಿನ ಕಾಮಗಾರಿ ಆರಂಭವಾದ ಮೇಲೆ ಹೈ ಕೋರ್ಟಿನಿಂದ ಕೆಲಸ ನಿಲ್ಲಿಸುವಂತೆ ರೈತ ಮುನಿನಾರಾಯಣಪ್ಪ ತಡೆಯಾಜ್ಞೆ ತಂದಿದ್ದಾರೆ. ಆದರೆ ಈ ಹಿಂದೆ ಕಾಂಗ್ರೆಸ್ ಆಡಳಿತದ ಸರ್ಕಾರ ಚಿಕ್ಕಬಳ್ಳಾಪುರ ತಾಲೂಕಿನ ಕುಡವತಿ 9.20 ಎಕರೆ ಭೂಮಿಯನ್ನು ಪಾರ್ಕಿಂಗ್‌ಗಾಗಿ ಮೀಸಲಿಟ್ಟಿತ್ತು. ಆದರೆ  ಪ್ರಸ್ತುತ ಬಿಜೆಪಿ ಸರ್ಕಾರ ಪೂರ್ವದಿಂದ ಪಶ್ಚಿಮಕ್ಕೆ ಬಂದಿದ್ದು ಯಾಕೆ ಎಂಬುದು ಈಗ ಸರ್ಕಾರಕ್ಕೆ ರೈತರ ಪ್ರೆಶ್ನೆಯಾಗಿದೆ.

                                                                                         ಅಭಿಜಿತ್, ಕರ್ನಾಟಕ ಟಿವಿ ,ದೊಡ್ಡಬಳ್ಳಾಪುರ.

- Advertisement -

Latest Posts

Don't Miss