Saturday, July 27, 2024

Latest Posts

Indiaದಲ್ಲಿ ಇಂದು 5921 ಕೊರೋನಾ ಪ್ರಕರಣಗಳು ದಾಖಲು..!

- Advertisement -

ದೇಶದಲ್ಲಿ (India) ಕೊರೊನಾ ವೈರಸ್ (corona virus) ಹೊಸ ರೂಪಾಂತರಿ ಓಮಿಕ್ರಾನ್ (Omicron), 3ನೇ ಅಲೆಯ ಅಬ್ಬರ ಕಡಿಮೆಯಾಗಿದೆ. ಸೋಂಕಿತರು ಕೆಲವೇ ದಿನಗಳಲ್ಲಿ ಗುಣಮುಖಗೊಳ್ಳುತ್ತಿದ್ದು, ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ದೇಶದಲ್ಲಿ 5921 ಹೊಸ ಕೋವಿಡ್ ಪ್ರಕರಣಗಳು (New Covid Cases) ದಾಖಲಾಗಿವೆ. 24 ಗಂಟೆಯಲ್ಲಿ 269 ಜನರು ಮೃತಪಟ್ಟಿದ್ದಾರೆ. ಭಾರತದಲ್ಲಿ ಸಕ್ರಿಯ ಪ್ರಕರಣಗಳು 63,878 ಆಗಿವೆ. ಇದುವರೆಗೂ ಗುಣಮುಖಗೊಂಡವರು 4,29,57,477. ಕಳೆದ 24 ಗಂಟೆಗಳಲ್ಲಿ 11,651 ಮಂದಿ ಗುಣಮುಖರಾಗಿದ್ದಾರೆ. ಕರ್ನಾಟಕದಲ್ಲಿ (karnataka) ಇಂದು 278 ಮಂದಿಗೆ ಕೊರೊನಾ ವೈರಸ್‌ ಸೋಂಕು ಕಾಣಿಸಿಕೊಂಡಿದೆ. ಇಂದು 458 ಮಂದಿ ಕೋವಿಡ್‌ನಿಂದ ಗುಣಮುಖರಾಗಿದ್ದಾರೆ. ಮೂರು ಮಂದಿ ಸಾವನ್ನಪ್ಪಿದ್ದು, ರಾಜ್ಯದಲ್ಲಿ ಕೋವಿಡ್‌ ಪಾಸಿಟಿವಿಟಿ ದರ (Covid positivity rate) ಶೇಕಡ 0.53 ಆಗಿದೆ.

- Advertisement -

Latest Posts

Don't Miss