Thursday, July 25, 2024

Latest Posts

Belgaum ಸೈನಿಕ ಶಾಲೆಯಲ್ಲಿ ಕರೊನಾ ಸ್ಫೋಟ…

- Advertisement -

ಬೆಳಗಾವಿ: ಕಿತ್ತೂರು ಪಟ್ಟಣದಲ್ಲಿರುವ ಬಾಲಕಿಯರ ಸೈನಿಕ ವಸತಿ ಶಾಲೆಗೆ ಮಹಾಮಾರಿ ಕೊರೊನಾ ಸೋಂಕು ವಕ್ಕರಿಸಿದ್ದು, ಒಟ್ಟು 80 ವಿದ್ಯಾರ್ಥಿಗಳು ಹಾಗೂ 10 ಸಿಬ್ಬಂದಿಗೂ ಕೊರೊನಾ ಪಾಸಿಟಿವ್​ ದೃಢಪಟ್ಟಿದೆ. ಎರಡು ದಿನಗಳ ಹಿಂದೆ ಕಿತ್ತೂರು ರಾಣಿ ಚನ್ನಮ್ಮ ಸ್ಮಾರಕ ಬಾಲಕಿಯರ ವಸತಿ ಶಾಲೆಯಲ್ಲಿ ವಿದ್ಯಾರ್ಥಿನಿಯರಿಗೆ ಜ್ವರ ಕಾಣಿಸಿಕೊಂಡಿತ್ತು.

ಈ ಹಿನ್ನೆಲೆ 102 ವಿದ್ಯಾರ್ಥಿನಿಯರಿಗೆ ಆರೋಗ್ಯ ಇಲಾಖೆ ಸಿಬ್ಬಂದಿಯು ರ್ಯಾಪಿಡ್ ಟೆಸ್ಟ್ (Rapid Test) ಜತೆಗೆ ಆರ್‌ಟಿಪಿಸಿಆರ್ ಟೆಸ್ಟ್ (RTPCR Test) ಮಾಡಿದ್ದರು. ಮೊನ್ನೆ ರ್ಯಾಪಿಡ್ ಟೆಸ್ಟ್​ನಲ್ಲಿ 12 ಮಕ್ಕಳಿಗೆ ಕರೊನಾ ಇರುವುದು ಗೊತ್ತಾಗಿತ್ತು. ಇಂದು 68 ಮಕ್ಕಳಿಗೆ ಕರೊನಾ ಪಾಸಿಟಿವ್​ ಎಂದು ವರದಿ ಬಂದಿದೆ. ಈ ಮಕ್ಕಳ ಜತೆಗೆ 10 ಮಂದಿ ಶಾಲಾ ಸಿಬ್ಬಂದಿಗೂ ತಗುಲಿದೆ.

ಕಿತ್ತೂರು ರಾಣಿ ಚನ್ನಮ್ಮ ಬಾಲಕಿಯರ ಸೈನಿಕ ವಸತಿ ಶಾಲೆಯಲ್ಲಿ ವಿದ್ಯಾರ್ಥಿ ಹಾಗೂ ಸಿಬ್ಬಂದಿ ಸೇರಿ 90 ಮಂದಿ ಕರೊನಾ ಸೋಂಕು ಇರುವ ಮಾಹಿತಿ ತಿಳಿಯುತ್ತಿದ್ದಂತೆ ಆತಂಕದ ವಾತಾವರಣ ನಿರ್ಮಾಣವಾಗಿದೆ. ಈ ವಸತಿ ಶಾಲೆಯಲ್ಲಿ 600ಕ್ಕೂ ಹೆಚ್ಚು ಮಕ್ಕಳಿದ್ದು, ಪೋಷಕರಲ್ಲಿ ಆತಂಕ ಮಡುಗಟ್ಟಿದೆ.

- Advertisement -

Latest Posts

Don't Miss