BBMP 8 ವಲಯಗಳ 300 ಅಧಿಕಾರಿಗಳಿಗೆ ಕೊರೋನಾ ದೃಢಪಟ್ಟಿದೆ.

ಬೆಂಗಳೂರು : ಬಿಬಿಎಂಪಿಯ 8 ವಲಯಗಳ ಅಧಿಕಾರಿಗಳು, ಇಬ್ಬಂದಿ ಸೇರಿದಂತೆ 300ಕ್ಕೂ ಹೆಚ್ಚು ಮಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಅಲ್ಲದೆ ನಾಲ್ಕು ವಲಯದ ಜಂಟಿ ಆಯುಕ್ತರಿಗೆ ಕೋವಿಡ್ ಪಾಸಿಟಿವ್ ಕಂಡು ಬಂದಿದೆ.

ವೀಕೆಂಡ್ ಕಫ್ರ್ಯೂ ತೆರವು ಬೆನ್ನಲ್ಲೇ ಕೋವಿಡ್ ಆತಂಕ ಹೆಚ್ಚಾಗಿದ್ದು , 300ಕೂ ಹೆಚ್ಚು ಅಧಿಕಾರಿ ಸಿಬ್ಬಂದಿಗಳಿಗೆ ಕೊರೊನಾ ಕಂಡುಬಂದಿರುವುದು ಆತಂಕ ಸೃಷ್ಟಿಸಿದೆ.

ಈ ಪೈಕಿ ಸ್ಯಾಬ್ ಕಲೆಕ್ಟರ್ಗಳಿಗೆ ಅತೀ ಹೆಚ್ಚು ಸೋಂಕು ಕಂಡುಬಂದಿದೆ. ಬಿಬಿಎಂಪಿ ಜಂಟಿ ಆಯುಕ್ತರು, ಪಾಲಿಕೆ ವೈದ್ಯರು, ನರ್ಸ್, ಟ್ರಾಯಾಜಿಂಗ್ ಸಿಬ್ಬಂದಿಗೆ ಕೊರೊನಾ ಕಾಡಲಾರಂಭಿಸಿದೆ.

ಕೊರೊನಾ ನಿಯಂತ್ರಣಕ್ಕಾಗಿ ಬಿಬಿಎಂಪಿ ಹಲವು ನಿಯಮಗಳನ್ನು ರೂಪಿಸಿದ್ದು, ಇಲ್ಲಿನ ಸಿಬ್ಬಂದಿ ದಿನದ 24 ಗಂಟೆ ಕಾರ್ಯ ನಿರತರಾಗಿದ್ದಾರೆ. ಆದರೆ, ನೂರಾರು ಸಿಬ್ಬಂದಿಗೆ ಕೊರೊನಾ ದೃಢಪಟ್ಟಿರುವುದು ಹೊಸ ಆತಂಕ ಸೃಷ್ಟಿ ಮಾಡಿದೆ.

About The Author