Friday, November 14, 2025

Latest Posts

ಭಾರತದಲ್ಲಿ ಕೊರೊನಾ ಆರ್ಭಟ. ಹೊಸದಾಗಿ 1.79 ಲಕ್ಷ ಮಂದಿಯಲ್ಲಿ ಸೋಂಕು ಪತ್ತೆ

- Advertisement -

ಭಾರತದಲ್ಲಿ ದಿನದಿಂದ ದಿನಕ್ಕೆ ಸೋಂಕು ವ್ಯಾಪಿಸುತ್ತ ಬರುತ್ತಿದೆ. ಭಾನುವಾರ ಮುಂಜಾನೆ 8 ಗಂಟೆಯಿoದ ಸೋಮವಾರ ಮುಂಜಾನೆ 8 ಗಂಟೆ ನಡುವಣ ಅವಧಿಯಲ್ಲಿ 179,723 ಮಂದಿಯಲ್ಲಿ ಹೊಸದಾಗಿ ಕೋವಿಡ್-19 ಸೋಂಕು ಕಾಣಿಸಿಕೊಂಡಿದೆ.
ಜೊತೆಗೆ ಒಮಿಕ್ರಾಕ್ ಸಹ 4033 ಪ್ರಕರಣಗಳಾಗಿವೆ. ದೇಶದ 27 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 146 ಮಂದಿ ಕೊರೊನಾ ಪ್ರಕರಣಗಳಿಗೆ ಬಲಿಯಾಗಿದ್ದಾರೆ.
ದೈನಂದಿನ ಪಾಸಿಟಿವಿಟಿ ಸರಾಸರಿ ಶೇ 13.29 ಇದ್ದರೆ, ವಾರದ ಸರಾಸರಿ ಪ್ರಮಾಣವು ಶೇ 7.92 ಇದೆ. ಕಳೆದ ವಾರಕ್ಕೆ ಹೋಲಿಸಿದರೆ ಇದು 13 ಪಟ್ಟು ಹೆಚ್ಚಾಗಿದೆ. ಕೊರೊನಾ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ನರೇಂದ್ರ ಮೋದಿಯವರು ಲಸಿಕೆಗಳಿಗೆ ಹೆಚ್ಚು ಒತ್ತು ನೀಡಿ ಎಂದು ಕರೆ ನೀಡಿದ್ದರು. ಅದರಂತೆ 15 ರಿಂದ 18 ವರ್ಷದ ಮಕ್ಕಳಿಗೂ ಲಸಿಕೆ ಕೊಡಲು ಸರ್ಕಾರ ನಿರ್ಧರಿಸಿತ್ತು.ಈಗಾಗಲೇ 2 ಕೋಟಿಗೂ ಹೆಚ್ಚಿನ ಮಕ್ಕಳಿಗೆ ಲಸಿಕೆಯನ್ನು ಸರ್ಕಾರ ಪೂರೈಸಿದೆ.


- Advertisement -

Latest Posts

Don't Miss