Friday, April 18, 2025

Latest Posts

125 ಪ್ರಯಾಣಿಕರಿಗೆ ಕೊರೊನಾ ಸೋಂಕು..!

- Advertisement -

ಪಂಜಾಬ್ ನ ಅಮೃತಸರದ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (Airport) ದಲ್ಲಿ ಕೊರೋನಾ ಸ್ಪೋಟವಾಗಿದೆ. 125 ಪ್ರಯಾಣಿಕರಲ್ಲಿ ಸೋಂಕು ಪತ್ತೆಯಾಗಿದೆ ಎಂದು ಎಎನ್‌ಐ ವರದಿ ಮಾಡಿದೆ.

ಇಟಲಿಯಿಂದ ಪಂಜಾಬ್ ನ ಅಮೃತಸರಕ್ಕೆ ಏರ್ ಇಂಡಿಯಾ ಪ್ಲೈಟ್ ನಿಂದ ಬಂದಿಳಿದ ಪ್ರಯಾಣಿಕರನ್ನ ಕಡ್ಡಾಯ ನಿಯಮದಂತೆ ಕೊರೋನಾ (coron) ಟೆಸ್ಟ್ ಗೆ ಒಳಪಡಿಸಲಾಯ್ತು.

ಅದರಲ್ಲಿ ಒಂದೇ ಫ್ಲೈಟ್ ನಲ್ಲಿ ಇಟಲಿಯಿಂದ ಅಮೃತಸರಕ್ಕೆ ಪ್ರಯಾಣಿಸಿದ್ದ 125 ಪ್ರಯಾಣಿಕರಲ್ಲಿ ಕೊರೋನಾ ಸೋಂಕು ಕಾಣಿಸಿದೆ ಎಂದು ವಿಮಾನ ನಿಲ್ದಾಣದ ನಿರ್ದೇಶಕ ವಿ.ಕೆ. ಸೇತ್ ತಿಳಿಸಿದ್ದಾರೆ.

ಪಂಜಾಬ್ ನಲ್ಲಿ ದಿನೇ ದಿನೇ ಕೊರೋನಾ ಕೇಸ್ ಗಳು ಜಾಸ್ತಿಯಾಗ್ತಿದ್ದು ಪಾಸಿಟಿವಿಟಿ ರೇಟ್ 4.47%ಗಿಂತ ಹೆಚ್ಚಿದೆ. ಕಳೆದೆರಡು ದಿನಗಳಿಂದ ಪಂಜಾಬ್ ನಲ್ಲಿ ಕೋವಿಡ್ ಸೋಂಕು 148% ಹೆಚ್ಚಳ ಕಂಡಿದೆ. ಹೀಗಾಗಿ ಕೋವಿಡ್ ನಿಯಂತ್ರಣಕ್ಕೆ ಪಂಜಾಬ್ ಸರ್ಕಾರ ನೈಟ್ ಕರ್ಪ್ಯೂ ಜೊತೆಗೆ ಶಾಲಾ-ಕಾಲೇಜುಗಳನ್ನ ಬಂದ್ ಮಾಡಿದೆ.

- Advertisement -

Latest Posts

Don't Miss