ಹುಬ್ಬಳ್ಳಿಯ ಶಾಲಾ ಮಕ್ಕಳಿಗೆ ಕರೋನ ಪಾಸಿಟಿವ್ .

ಹುಬ್ಬಳ್ಳಿ : ಇಲ್ಲಿನ ಖಾಸಗಿ ಶಾಲೆಯ ಮಕ್ಕಳಿಗೆ ಕರೋನ ಸೋಂಕು ತಗುಲಿದ್ದು, ಮುಂಜಾಗ್ರತ ಕ್ರಮವಾಗಿ ಶಾಲೆಗೆ ರಜೆಯನ್ನು ನೀಡಲಾಗಿದೆ ಅಂತ ಆಡಳಿತ ಮಂಡಳಿ ತಿಳಿಸಿದೆ.

ನಗರದ ಖಾಸಗಿ ಶಾಲೆಯಲ್ಲಿ ಓದುತ್ತಿರುವ 9ನೇ ತರಗತಿ ವಿದ್ಯಾರ್ಥಿಗೆ ಕರೋನ ಸೋಂಕು ಇರೋದು ಧೃಡಪಟ್ಟಿದ್ದು, ಈ ವಿದ್ಯಾರ್ಥಿಯ ಅಕ್ಕ, ಎಸ್​ಡಿಎಂ ಕಾಲೇಜಿನಲ್ಲಿ ಎಂಬಿಬಿಎಸ್​ ವ್ಯಾಸಂಗ ಮಾಡುತ್ತಿದ್ದಾಳಂತೆ, ಇದೇ ವೇಳೆ ಮುಂಜಾಗ್ರತ ಕ್ರಮವಾಗಿ ಸೋಂಕಿತರ ಸಂಪರ್ಕದಲ್ಲಿದ್ದವರನ್ನು ಟೆಸ್ಟ್‌ ಮಾಡಿಸಿದ ವೇಳೇಯಲ್ಲಿ, ಆಕೆಯ ತಮ್ಮನಿಗೆ ಕರೋನ ಸೋಂಕು ಇರೋದು ಪತ್ತೆಯಾಗಿದೆ.

ಈ ನಡುವೆ ಆದರ್ಶನಗರದಲ್ಲಿರುವ ಜಿ.ವಿ.ಜೋಶಿ ರೋಟರಿ ಶಾಲೆಯ ಬಾಲಕನನ್ನು ಈಗಾಗಲೇ ಮನೆಯಲ್ಲಿಯೇ ಹೋಂ ಕ್ವಾರಂಟೈನ್ ಮಾಡಲಾಗಿದೆ ಅಂತ ಅಧಿಕಾರಿಗಳು ತಿಳಿಸಿದ್ದು, ಇಂದು ಮಧ್ಯಾಹ್ನದಿಂದಲೇ ಶಾಲೆಯಿಂದ ಮಕ್ಕಳನ್ನು ಮನೆಗೆ ಕಳುಹಿಸಲಾಗಿದ್ದು, ಸೋಮವಾರದ ತನಕ ಶಾಲೆಗೆ ರಜೆಯನ್ನು ಅಡಳಿತ ಮಂಡಳಿ ನೀಡಿದೆ. ಇನ್ನೂ ಶಾಲೆಯನ್ನು ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಲಾಗುತ್ತಿದೆ, ಇದರ ಜೊತೆಗೆ ನಾಳೆ ಶಾಲೆಯಲ್ಲಿರುವ ಮಕ್ಕಳಿಗೆ ಕೊರೊನಾ ಟೆಸ್ಟ್ ಮಾಡಲಾಗುತ್ತದೆ. ಇದಲ್ಲದೇ ಅವರ ಪ್ರಾಥಮಿಕ, ಮತ್ತು ದ್ವಿತೀಯ ಸಂಪರ್ಕದಲ್ಲಿ ಇರುವವರು ಕೂಡ ಕೂಡಲೇ ಟೆಸ್ಟ್‌ ಮಾಡಿಸಿಕೊಳ್ಳಬೇಕು ಅಂತ ಜಿಲ್ಲಾಡಳಿತ ಮನವಿ ಮಾಡಿಕೊಂಡಿದೆ.

About The Author