Political News: ದನದ ಕೆಚ್ಚಲು ಕೊಯ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ರಾಜ್ಯಾಧ್ಯಕ್ಷರಾದ ಬಿ.ವೈ.ವಿಜಯೇಂದ್ರ ಮತ್ತು ಪ್ರತಿಪಕ್ಷ ನಾಯಕರಾದ ಆರ್.ಅಶೋಕ್ ಅವರು ಕಾಟನ್ ಪೇಟೆಯ ದುಂಡು ಮಾರಿಯಮ್ಮ ದೇವಸ್ಥಾನದ ಬಳಿ ಇರುವ ಮಾಲೀಕನ ಮನೆಗೆ ಭೇಟಿ ನೀಡಿ ಧೈರ್ಯ ತುಂಬಿ, ಗೋ ಪೂಜೆ ನೆರವೇರಿಸಿ ಪಕ್ಷದ ವತಿಯಿಂದ ಗೋವನ್ನು ಸಂತ್ರಸ್ತರಿಗೆ ನೀಡಿದರು.
ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಓರ್ವ ಮುಸ್ಲಿಂ ವ್ಯಕ್ತಿ, ಹಸುವಿನ ಕೆಚ್ಚಲನ್ನು ಕತ್ತರಿಸಿ, ವಿಕೃತಿ ಮೆರೆದಿದ್ದ. ಈ ಬಗ್ಗೆ ಕಾಂಗ್ರೆಸ್ಸಿಗರು ಮೌನವಾಗಿದ್ದರೂ ಕೂಡ, ಬಿಜೆಪಿ ನಾಯಕರು ಈ ಬಗ್ಗೆ ಆಕ್ರೋಶ ಹೊರಹಾಕಿದ್ದರು. ಪೊಲೀಸರು ಸದ್ಯ ಓರ್ವ ಆರೋಪಿಯನ್ನು ಬಂಧಿಸಿದ್ದು, ಈತ ವಿಕೃತ ಕಾಮಿಯಾಗಿದ್ದು, ಬಿಹಾರದಿಂದ ಬೆಂಗಳೂರಿಗೆ ಬಂದು ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಬೆಳ್ಳಂಬೆಳಿಗ್ಗೆ ಕುಡಿದ ಮತ್ತಿನಲ್ಲಿ ಬಂದು ಈ ಕೆಲಸ ಮಾಡಿದ್ದಾನೆಂದು ಹೇಳಲಾಗಿದೆ.
ಇಂದು ಬಿಜೆಪಿಯ ಕೆಲ ನಾಯಕರು, ಹಸುವಿನ ಮಾಲೀಕನ ಮನೆಗೆ ಬಂದು, ಒಂದು ಹಸುವನ್ನು ಉಡುಗೊರೆಯಾಗಿ ನೀಡಿ, ಅಲ್ಲಿಯೇ ಹಸುವಿಗೆ ಪೂಜೆ ಸಲ್ಲಿಸಿ, ಗಾಯಗೊಂಡ ಹಸುಗಳಿಗೂ ಪೂಜೆ ಸಲ್ಲಿಸಿ, ಸಂಕ್ರಾಂತಿ ಹಬ್ಬ ಆಚರಿಸಿದರು. ಅಲ್ಲದೇ, ಮಾಲೀಕನಿಗೆ ನಿಮ್ಮೊಂದಿಗೆ ನಾವಿದ್ದೇವೆ ಎಂದು ಧೈರ್ಯ ತುಂಬಿದರು.
ಈ ಬಗ್ಗೆ ಟ್ವೀಟ್ ಮಾಡಿರುವ ವಿಜಯೇಂದ್ರ, ಬೆಂಗಳೂರಿನ ಚಾಮರಾಜಪೇಟೆಯಲ್ಲಿ ರಾಕ್ಷಸಿ ಮನಸ್ಥಿತಿಯ ಪಾಪಿಗಳು ನಿರ್ದಯವಾಗಿ ಹಸುಗಳ ಕೆಚ್ಚಲನ್ನು ಕತ್ತರಿಸಿರುವುದು ಕ್ರೂರ ಕೃತ್ಯದಿಂದ ನೊಂದ ಕುಟುಂಬಸ್ಥರ ನಿವಾಸಕ್ಕೆ ತೆರಳಿ ಗೋ ಪೂಜೆ ನೆರವೇರಿಸಿ ಸಂತ್ರಸ್ಥ ಕುಟುಂಬಕ್ಕೆ ಗೋವನ್ನು ನೀಡಿ ಧೈರ್ಯ ತುಂಬಿದೆವು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಗೋ ಸುರಕ್ಷತೆಯ ಬಗ್ಗೆ ತಾತ್ಸಾರ ಧೋರಣೆ ಅನುಸರಿಸುತ್ತಿದ್ದು, ಈ ಕೃತ್ಯಗಳ ಹಿಂದಿರುವ ಶಕ್ತಿಯನ್ನು ಬಗ್ಗು ಬಡಿದು ಇದಕ್ಕೆ ಕುಮ್ಮಕ್ಕು ನೀಡುತ್ತಿರುವ ಹಿಂದಿರುವ ಶಕ್ತಿಗಳ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಯಿತು ಎಂದು ಬರೆದುಕೊಂಡಿದ್ದಾರೆ.