Monday, September 9, 2024

Latest Posts

ಸೈನಿಕನಿಗೆ ಸಚಿವ ಸ್ಥಾನ, ಜೋಡೆತ್ತುಗಳಿಗೆ ಹಾಕ್ತಾರಾ ಕಡಿವಾಣ..?

- Advertisement -

ಕರ್ನಾಟಕ ಟಿವಿ : ಸತತ 6 ಬಾರಿ ಆಪರೇಷನ್ ಕಮಲ ಫೇಲ್ ಆದರೂ ಛಲಬಿಡದೇ 7ನೇ ಬಾರಿ ಕುಮಾರಸ್ವಾಮಿ ಸರ್ಕಾರ ಕೆಡವಿದ ತಂಡದ ಪ್ರಮುಖ ಸದಸ್ಯ ಚನ್ನಪಟ್ಟಣ ಮಾಜಿ ಶಾಸಕ, ಸೈನಿಕ ಸಿ.ಪಿ ಯೋಗೀಶ್ವರ್ ಬಿಎಸ್ ವೈ ಯಡಿಯೂರಪ್ಪ ಸಂಪುಟದಲ್ಲಿ ಸಚಿವ ಸ್ಥಾನ ಪಡೆಯೋದು ಗ್ಯಾರಂಟಿಯಾಗಿದೆ. ಕಡೇ ಹಂತದ ಆಪರೇಷನ್ ಕಮಲ ನಡೆಸಿದ್ದೇ ಅಮಿತ್ ಶಾ ಅನ್ನೋದನ್ನ ಸ್ವತಃ ಕೃಷ್ಣ ಭೈರೇಗೌಡ ಆರೋಪ ಮಾಡಿದ್ರು. ಹಾಗಾಗಿ ಆಪರೇಷನ್ ಸಕ್ಸಸ್ ಹಿನ್ನೆಲೆ ಸಿ,ಪಿ ಯೋಗೀಶ್ವರ್ ಗೆ ಸಚಿವ ಸ್ಥಾನ ನೀಡಲು ಅಮಿತ್ ಶಾ ಒಪ್ಪಿಗೆ ನೀಡುವ ಸಾಧ್ಯತೆ ಇದೆ. ಇದೆಲ್ಲದ್ದಕ್ಕಿಂತ ಹೆಚ್ಚಾಗಿ ಅಮಿತ್ ಶಾಗೆ ಭಾರೀ ಮುಖಭಂಗ ಮಾಡಿರುವ ಕನಕಪುರದ ಬಂಡೆ ಡಿ.ಕೆ ಶಿವಕುಮಾರ್ ಹಾಗೂ ಕುಮಾರಸ್ವಾಮಿ ವಿರುದ್ಧ  ತೊಡೆತಟ್ಟಬಲ್ಲ ಶಕ್ತಿ ಸಿ.ಪಿ ಯೋಗೀಶ್ವರ್ ಗೆ ಇದೆ. ಹೀಗಾಗಿ ಯೋಗೀಶ್ವರ್ ಗೆ ಸಚಿವ ಸ್ಥಾನ ನೀಡಿ ಆರು ತಿಂಗಳ ಒಳಗಾಗಿ ಮೇಲ್ಮನೆ ಸದಸ್ಯ ಮಾಡಲು ಯಡಿಯೂರಪ್ಪ ಸಹ ಪ್ಲಾನ್ ಮಾಡಿದ್ದಾರೆ..

ಸಿ.ಪಿ ಯೋಗೀಶ್ವರ್ ಗೆ ನೀರಾವರಿ ಖಾತೆ..?

ಇದೆಲ್ಲಕ್ಕಿಂತ ಹೆಚ್ಚಾಗಿ ರಾಮನಗರ, ಹಾಗೂ ಮಂಡ್ಯ ಜಿಲ್ಲೆಯ ಉಸ್ತುವಾರಿ ಸ್ಥಾನ ಸಹ ಸಿ.ಪಿ ಯೋಗೀಶ್ವರ್ ಗೆ ಸಿಗುವ ಸಾಧ್ಯತೆ ಇದೆ.. ಮಂಡ್ಯ ಜಿಲ್ಲೆಯ ಜನ ಬಳಸಿ ಸೋರಿಕೆಯಾಗಿ ಶಿಂಷಾ ನದಿಯಲ್ಲಿ ಹರಿಯುವ ಕಾವೇರಿ ನೀರನ್ನ ಲಿಫ್ಟ್ ಮಾಡುವ ಮೂಲಕ ಚನ್ನಪಟ್ಟಣದ ಕೆರೆಗಳಿಗೆ ನೀರು ತುಂಬಿಸಿ ಆಧುನಿಕ ಭಗೀರಥನಾಗಿರುವ ಸಿ.ಪಿ ಯೋಗೀಶ್ವರ್ ಗೆ ನೀರಾವರಿ ಖಾತೆ ನೀಡುವ ಆಲೋಚನೆಯೂ ಯಡಿಯೂರಪ್ಪಗಿದೆ.. ಈ ಮೂಲಕ ರಾಜ್ಯದಲ್ಲಿ ನೀರಾವರಿ ಯೋಜನೆಗಳನ್ನಅಚ್ಚುಕಟ್ಟಾಗಿ ಜಾರಿ ಮಾಡಿಸಿ ಸರ್ಕಾರಕ್ಕೆ ಒಳ್ಳೆಯ ಇಮೇಜ್ ಬೆಳೆಸಲು ಯಡಿಯೂರಪ್ಪ ಪ್ಲಾನ್ ಮಾಡಿದ್ದಾರೆ.. ಕಡೆ ಗಳಿಗೆ ವರೆಗೂ ಯಾವ ಬದಲಾವಣೆಯಾಗದಿದ್ದರೆ ಚನ್ನಪಟ್ಟಣ ಸೈನಿಕ ಯಡಿಯೂರಪ್ಪ ಸಂಪುಟದಲ್ಲಿ ಸಚಿವರಾಗಿ ಡಿ.ಕೆ ಶಿವಕುಮಾರ್ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ತೊಡೆ ತಟ್ಟೋದು ಗ್ಯಾರಂಟಿ..

- Advertisement -

Latest Posts

Don't Miss